ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)”

ಕಾವ್ಯ ಸಂಗಾತಿ ಎಮ್ಮಾರ್ಕೆ “ಕೆಂಪಿ(ಕೆಂಡ ನುಂಗಿದವಳು)“ ಬಹುತೇಕ ನಿಮಗನಿಸಬಹುದುಮತ್ತೇಕೆ ಬಂದಳೋ ಈ ಕೆಂಪಿ?,ಹೌದು…ಅವಳಾಗಾಗ ಬರುವವಳೇ,ಹಳೆ ಮೂಸೆಯಲಿ ಹೊಸತು ಹೊತ್ತುಅವಳ ಕಷ್ಟ ಅವಳಿಗಷ್ಟೇ ಗೊತ್ತು ಇನ್ನೂ ಹಸುಳೆಯವಳುಮೊಸಳೆ ಬಾಯ್ಗೆ ಬಿದ್ದವಳು,ಪರದೇಶಿ ಕೂಸವಳುಪರರ ಪಾಲೇ ಆದವಳು,ಸಾಕುವೆನೆಂದವಳ ಒಯ್ದುಯಾರಿಗೋ ಮಾರಿದರು,ಇಲ್ಲಸಲ್ಲದ ಸಬೂಬು ಹೇಳಿಮೆಲ್ಲ ಮೆಲ್ಲಗೆ ಜಾರಿದರು,ಮೈಯ ಮಾರಿಕೊಳ್ಳುವವರಮಾರಕಟ್ಟೆಗೆ ದೂಡಿದರು,ಸ್ವಾರ್ಥಕ್ಕೆ ಕೆಂಪಿಯ ಬಾಳನ್ನೇದಾ(ಗಾ)ಳಕ್ಕೆ ಹೂ(ನೀ)ಡಿದರು ಬಂದು ಹೋಗುವವರಲ್ಲಿಯಾರೂ ಬಂಧುಗಳಲ್ಲ,ಮನಬಂದಂತೆ ಭೋಗಿಸಿಕಾಸು ಎಸೆಯುವರಲ್ಲ,ಬೇಕು ಬೇಡಗಳೆನಿತನುಕೇಳುವ ಕಿವಿಗಳಲ್ಲಿಲ್ಲ,ಕಣ್ಣು,ಕರುಳು ಎರಡೂಅರಿಯುತ್ತಲಿರಲಿಲ್ಲ,ಹಗಲು ಇರುಳಿಗೂ ಅಲ್ಲಿವ್ಯತ್ಯಾಸವೇ ಇರಲಿಲ್ಲ,ಯಾಕೆಂದರೆ ‘ಕಾಮ’ಗಾರಿಒಂದು ದಿನವೂ ನಿಲ್ಲಲಿಲ್ಲ ಉದರವ ಹೊರೆಯಲುದರ ನಿಗದಿಯಾಯಿತಲ್ಲ,ಒಲ್ಲದಿದ್ದರೂ ದೇಹವದುಒಗ್ಗಿಕೊಳ್ಳದೇ ವಿಧಿಯಿಲ್ಲ,ದಣಿದು,ಕುಣಿದು,ಮಣಿದುದೇಹದಿ ಏನೂ ಉಳಿದಿಲ್ಲ,ಕೆಂಡವನೇ ನುಂಗಿದವಳೀಕೆಸೆರಗಿಗೆ ಕಟ್ಟಿಕೊಂಡವಳಲ್ಲ, ವ್ಯಥೆಯ ಕಥೆ ಹೇಳಲೆಂದೇಹುಟ್ಟಿ ಬಂದಿರುವಳು,ಆಗಾಗ ತನ್ನೊಡಲ ಕಿಚ್ಚನುಕೊಂಚ ಬಿಚ್ಚಿಡುವಳು,ಸುತ್ತಿ ಸುತ್ತಿ ನೋವಿನತ್ತಲೇಮತ್ತೆ ಹೊರಳುವವಳು,ಮತ್ತೆ ಬರುವವಳು ಕೆಂಪಿಸದ್ಯಕ್ಕೆ ತೆರಳುವಳು,ಅಲ್ಲಿಯತನಕ ಅಯ್ಯೋ!ಪಾಪ…ಎಂದು ಬಿಡಿ ಎಮ್ಮಾರ್ಕೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)” Read Post »

ಕಾವ್ಯಯಾನ

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ”

ಕಾವ್ಯ ಸಂಗಾತಿ ಡಾ ತಾರಾ  ಬಿ ಎನ್ ಧಾರವಾಡ “ಅನುಬಂಧ” ಕಾಣದ ದಾರಿಯಲ್ಲಿಬೆಸೆದ ನಂಟು,ಹೆಸರಿಲ್ಲದರೂ ಹೃದಯಕ್ಕೆಪರಿಚಿತವಾದ ಬಂಧ…ಕಾಲದ ಹೊಳೆ ಹರಿದರೂಕಳೆಯದ ಗುರುತು, ಗಂಟುಅದು ಅನುಬಂಧ.ಮೌನದಲ್ಲೂ ಮಾತಾಡುವಸಂಬಂಧ, ಬಂಧ..ಕಣ್ಣಂಚಿನ ನೀರನ್ನೂಓದುತ್ತದೆ ಒರೆಸುತ್ತದೆ.ಹೃದಯ ಮುರಿದುನೊಂದ ಕ್ಷಣದಲ್ಲಿಅದೃಶ್ಯವಾಗಿ ಕೈಹಿಡಿದುಕೊಳ್ಳುತ್ತದೆ.ಮಣ್ಣಿನ ವಾಸನೆಯಂತೆಸಹಜ,ಬೆಳಗಿನ ಬೆಳಕಿನಂತೆಮೃದುವು.ನಗುವಿನಲ್ಲೂ, ನೋವಿನಲ್ಲೂಉಸಿರಾಡುವ ನಂಟು.ತಾಯಿ–ಮಗುವಿನಹಸಿರು ಪ್ರೀತಿಯಂತೆಸ್ನೇಹಿತರ ನಿಷ್ಕಪಟ ನಗು,ಗುರುವಿನ ಮಾರ್ಗದರ್ಶನ,ಅಸ್ಪಷ್ಟ ಮೌನಅನುಬಂಧದ ಬೇರೆ ಬೇರೆರೂಪಗಳು ಒಂದೇಕಾಲ ದೂರಸಿದರೂ,ಸ್ಮೃತಿ ಪಟದಲ್ಲಿ ಹತ್ತಿರ.ದೇಹಗಳು ದೂರವಾದರೂ,ಮನಗಳು ಒಡಲಿನಂತೆಬಿರುಗಾಳಿಯಲ್ಲಿ ಮರವನ್ನೆತ್ತಿದಬೇರುಗಳಂತೆ, ಗಟ್ಟಿಎತ್ತುವ ಶಕ್ತಿಯೇ ಅನುಬಂಧ.ಜಗತ್ತು ಕೈಬಿಟ್ಟ ಸಂದರ್ಭದಲ್ಲಿಉಳಿಸುವ ನಂಬಿಕೆ.ಅನುಬಂಧವೆಂದರೆಸಂಬಂಧವಲ್ಲ,ಬದುಕಿಗೆ ಅರ್ಥನೀಡುವ ಭಾವನೆ.ನಮ್ಮನ್ನು ನಾವುಗುರುತಿಸುವ ಕನ್ನಡಿ,ಜೀವನದ ದೀರ್ಘಪಯಣದಲ್ಲಿ ಜೊತೆಯಾದ ನೆರಳು.ಅರಿಯದಿದ್ದರೂ,ಮೌಲ್ಯ ಗೊತ್ತಾಗುವುದು.ಅದಕ್ಕಾಗಿಯೇ ಅನುಬಂಧ…ಹೃದಯದೊಳಗೆ ಮೌನವಾಗಿ ,ಹೂ ಬಿಡುವ ಅಮೂಲ್ಯ ವರ. ಡಾ ತಾರಾ ಬಿ ಎನ್ ಧಾರವಾಡ.

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ” Read Post »

ಕಾವ್ಯಯಾನ

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!”

ಕಾವ್ಯ ಸಂಗಾತಿ ಸುಮತಿ ನಿರಂಜನ್‌ “ಪದ್ಯವೆಂದರೆ …. ಉತ್ಸವ !!!” The Hollow Men, The Waste Land ಬರೆದ ಮಹಾನ್ ಕವಿ ಟಿ.ಎಸ್. ಎಲಿಯಟ್ ಯಾವುದೋ ಲಹರಿಯಲ್ಲಿ ಹೇಳಿದನಂತೆ ಒಮ್ಮೆ – “Poetry is a mug’s game..”. ಪದ್ಯವೆಂದರೆಪದಗಳ ದೊಂಬರಾಟಅದು ಬರಿ ಹುಂಬರಾಟ !ಎಂದ ಪಶ್ಚಿಮದ ಕವಿಗೆಕಂಡದ್ದು ಬರಡುಬಂಜರು ಭೂಮಿಬೆಳೆವುದಲ್ಲಿ ಬರಿದೆಪಾಪಾಸುಕಳ್ಳಿ !ಬಟ್ಟೆ ತುಂಬಿಸಿಟ್ಟಬೆದರು ಬೊಂಬೆಗಳುತಲೆ ತುಂಬ ಬೈಹುಲ್ಲುಸುಮ್ಮ ಸುಮ್ಮನೆ ಗುಲ್ಲು … ಮೂಡಣ ಮನೆಯಮುತ್ತಿನ ನೀರುಕಾಣುವುದೇನುಪಡುವಣದಲ್ಲಿ ?ನುಣ್ಣನೆ ಎರಕದಬೆಳ್ಳಿಯ ಹೊಳೆ ಅದುಬರಿ ಬೆಳಗಲ್ಲೋ ಅಣ್ಣಾ !ಇದ ತಿಳಿಯಲು ಬಾರೋಸಾಧನಕೇರಿಗೆ ವಂದಿಸಿಬಾರೋ ಪಾಕಶಾಲೆಗೆಬೆಂದರೆ ಏನಾಗುವೆಯೋತಿಂದು ಹೇಳಲು ಬಾರೋ!,ಕರೆದೊಯ್ಯುವೆನುಕವಿಶೈಲಕೆ ನಿನ್ನಅನಿಕೇತನವೆಂದರೆಏನೆನ್ನಲಿ ಅಣ್ಣಾ !ಹಾಗೆಯೇ ಜೋಗದಸಿರಿ ಬೆಳಕಿನಲಿಕಾಣುವೆ ನೀನಿತ್ಯೋತ್ಸವ !ಪದಗಳ ಹುಂಬರಾಟವಲ್ಲೋಇದು ನಾದಬ್ರಹ್ಮೋತ್ಸವತಂತಿ ನಾಕು ವೇದಕಲರವ… ಸುಮತಿ ನಿರಂಜನ್

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ತಾಯಿಮನೆ” ನಾನು ಹುಟ್ಟಿ ಬೆಳೆದ‌ ನನ್ನ ಆ ಭವ್ಯ ಮನೆಯು ನನ್ನ ತಂದೆಯ ಬೆವರಾಗಿತ್ತು ತಾಯಿಯ ಮಮತೆಯಾಗಿತ್ತು, ನಮ್ಮ ಬದುಕಿಗೊಂದು ಬೆಚ್ಚನೆಯ ಸೂರಾಗಿತ್ತು, ಆದರೆ ಇಂದು ಮರ ಬಿದ್ದಾಗ ಹಕ್ಕಿ ಹಾರಿತು ಗೂಡು ಕಳಚಿ ರಸ್ತೆ ಪಾಲಾಯಿತ್ತು, ಹಕ್ಕಿಗಳು ತಮ್ಮ ತಮ್ಮ ಪಾಡಿಗೆ ಹಾರಿ ಹೋದಂತೆ ಆ ಮನೆಯ ಸ್ಥಿತಿಲತೆಯ ಕಂಡು ನೋವಿಂದ ಬರೆದ ಕವನವಿದು. *ತಾಯಿ ಮನೆ* ಬೆವರ ಸುರಿಸಿ ದುಡಿದುತಂದೆ ಕಟ್ಟಿಸಿದ, ನಮ್ಮ ಮನೆಆಶ್ರಯ ನೀಡಿದ ಆ “ತಾಯಿ ಮನೆ”ಹಲವು ಕನಸುಗಳ ಅವರು ಕಂಡ ಮನೆ,! ನಮ್ಮ ತಾಯಿ ಮನೆನಾವು ಹುಟ್ಟಿ ಬೆಳೆದ ಮನೆಬಾಲ್ಯದಾಟದಲಿ ನಲಿದ ಮನೆತಾಯಿ ಮಮತೆಯ ಕಾರುಣ್ಯ ಮನೆ,! ಮತ್ತೇ ಬೆಳಗೊ ಕಾತರತಂದೆಯ ರಕ್ತದ ಆ ಬೆವರುನಿತ್ಯ ಸುವಾಸಿಸುವ ನಮ್ಮ ತವರುಮರೆಯಲಾರೆವು ನಾವೆಂದು ಕುವರರು,! ಕತ್ತಲಲಿ ಕೊಠಡಿಗಳುಗಾಜು ಹೊಡೆದ ಕಿಟಕಿಗಳುಬೀಡು ಬಿಟ್ಟ ಜೇಡ ಜಾಲಗಳುಕಾಡುತ್ತಿದೆ ಬಾಲ್ಯದ ಆ ನೆನಪುಗಳು,! ಅಂದು ರಾಜ ಮನೆತನಸಂಭ್ರಮ ಮೆರೆದಾಡಿತ್ತು ಕಣ್ಮನವೈವಾಹಿಕ ವೈಭವಗಳ ಜೊತೆ ಜೀವನಕತ್ತಲ ದಾಟಿ ಪಯನ, ವೈಭವದತ್ತ ಬೆಳಕಿನ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ” Read Post »

ಕಾವ್ಯಯಾನ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು

ಕಾವ್ಯ ಸಂಗಾತಿ ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು ಅವಳು  ಶಬ್ಧ  ಅವನು ಕಾವ್ಯ      ಅವನು ರಾಗ ಅವಳು ತಾಳಅವನು ಭಾವ ಅವಳು ಜೀವ.ಅರಳಿವೆ ಶಬ್ಧ ಕಾವ್ಯದಲಿಹೊಮ್ಮಿವೆ ರಾಗಸೂಸುತ ಭಾವ.ತುಂಬಿದಳವಳದಕೆ ಜೀವಧಾರೆಯೆರೆಯುತ  ಒಲವಇಮ್ಮಡಿಸುತ ಗೆಲುವ.ಜಗವೇಈ ಪ್ರೀತಿಯ ನೀನೆಂದರಿವೆನಿನಗಿಲ್ಲ ಇದರ ಪರಿವೆ         ಭಾವನೆಗಳ ಬೆಸುಗೆಗೆಪ್ರತಿದಿನಭೇಟಿಯಾಗ ಬೇಕೆಂದಿಲ್ಲಮಾತಾಡಬೇಕೆಂದಿಲ್ಲಅವ್ಯಕ್ತ ಭಾವನೆಗೆ ಸರಿಸಾಟಿ ಇಲ್ಲಹಿತಬಯಸುವಪ್ರೀತಿ ಹರಿಸುವ  ಉನ್ನತಿ ಹಾರೈಸುವ ಭಾವಎಲ್ಲಿದ್ದರೂ ಹೇಗಿದ್ದರೂ  ನೆಮ್ಮದಿಯಿಂದಿರುಮಾತನಾಡಿದರೂ ಮಾತನಾಡದಿದ್ದರೂಹಾರೈಕೆಯೊಂದೇಎಂದೆಂದಿಗೂ ನೀ ಸಂತಸದಿಂದಿರುಮೌನದಿ ಎಲ್ಲವ  ನುಡಿಯುತಿರುಸೂಸುತಿರು ಅಗೋಚರ ಭಾವನೆಗಳಸ್ಪರ್ಶಿಸುತಿರು ಈ ಮನದಾಳದ ಭಾವಗಳ. ಪ್ರೊ ರಾಜೇಶ್ವರಿ ಶೀಲವಂತ ಪುಣೆ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇನ್ನೂ ಕನಸಿದೆ” ಇನ್ನೂ ಕನಸಿದೆಬಣ್ಣ ಬಣ್ಣದ ಚಿತ್ರಸುಳಿವ ಗಾಳಿಸುರಿವ ಮಳೆಹಕ್ಕಿ ಪಕ್ಷಿಗಳ ಇಂಚರನೀಲಿ ಆಗಸದಲಿ ಹಾರುವ ಬಿಳಿ ಪಾರಿವಾಳಅದೆಷ್ಟೋ ಭಾವಗಳುಕವನವಾಗುವ ಸಮಯಬೆಸಗೊಳ್ಳುತ್ತಿವೆಪದ ಲಯಶಬ್ದಗಳ ಸಂಭ್ರಮಸೂರ್ಯನೇನೀನು ಇಷ್ಟು ಬೇಗಏಕೆ ಉದಯಿಸಿ ಬಿಟ್ಟೆಇನ್ನೂ ಕನಸಿದೆಮಧುರ  ಕ್ಷಣಗಳನ್ನುಕನಸಿನಲ್ಲಾದರೂ ಕಂಡುಕೊಂಚ ನೆಮ್ಮದಿಯಿಂದಇರುತ್ತಿದ್ದೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ” Read Post »

You cannot copy content of this page

Scroll to Top