ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ “ಭಾವೈಕ್ಯದ ಗುಟ್ಟು” ಕಲ್ಲು ಮಣ್ಣಿಗೆ ಕಂತೆ ಕೊಟ್ಟುಅದಕೆ ನೂರು ನಾಮವಿಟ್ಟುಜಾತಿಯೆಂಬ ಕಳಸವಿಟ್ಟುಮನುಜ ಪಥದ ದಾರಿ ಬಿಟ್ಟುಮೌಲ್ಯ ತತ್ವಗಳನು ಸುಟ್ಟುಮೃದು ಭಾವಗಳಿಗೆ ಪೆಟ್ಟುದೂರ ತಳ್ಳು ಕ್ರೋಧ ಸಿಟ್ಟುಬದುಕ ಬೇಡ ದ್ವೇಷ ನೆಟ್ಟುಅಪ್ಪಿಕೋ ಎಲ್ಲರನ್ನೂ ಇಷ್ಟ ಪಟ್ಟುಬೆಳೆಸು ಭಾವೈಕ್ಯದ ಗುಟ್ಟುಸ್ನೇಹ ಪ್ರೀತಿಗೆ ಕೈ ಕಟ್ಟುಸುಖದ ಯಶಕೆ ಬೆನ್ನ ತಟ್ಟು ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು” Read Post »

ಇತರೆ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ

ರಾಷ್ಟ್ರೀಯ ಸಂಗಾತಿ ನಾಗರತ್ನ ಎಚ್ ಗಂಗಾವತಿ “ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” *ಏಳಿ ಎದ್ದೇಳಿ ಎಚ್ಚರಾಗಿ* ಎನ್ನುವ ಸಂದೇಶವನ್ನು ನೀಡಿದಂತಹ ಸ್ವಾಮಿ ವಿವೇಕಾನಂದರು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಿ ಎನ್ನುವ ಮಂತ್ರದೊಂದಿಗೆ ವ್ಯಕ್ತಿತ್ವ ಪ್ರಭಾವ ಪೂರ್ವ ಮತ್ತು ಉತ್ತಮ  ಬರಹಗಳ ಮೂಲಕ ಉತ್ತಮ ಸಂದೇಶ ನೀಡಿದರು  ಸ್ವಾಮೀ ವಿವೇಕಾನಂದರು. ತಮ್ಮ ವಿಚಾರಗಳಿಗೆ ಅನುಗುಣವಾಗಿ ಭಾರತೀಯ ಸಮಾಜವನ್ನು ಬದಲಾವಣೆ ಮಾಡಲು ಬಯಸಿದರು ಹಾಗೂ ವೈಜ್ಞಾನಿಕ ಪ್ರಜಾಪ್ರಭುತ್ವ ಕಲ್ಪನೆಯಲ್ಲಿ ಜಾತಿ ಪದ್ಧತಿಯನ್ನು ಮುಕ್ತವಾದ ನವ ಭಾರತ ನಿರ್ಮಾಣದ ಕನಸನ್ನು ಕಂಡಿದ್ದರು. ಸ್ವಾಮಿ ವಿವೇಕಾನಂದರು ಭಾರತೀಯ ದೇಶಭಕ್ತ ಸುಧಾರಕ ಹಾಗೂ ಸಂಘಟಕರು ಮಾತ್ರವಲ್ಲ ರಾಷ್ಟ್ರೀಯ ಪುನರಸ್ಥಾನದ ಶಕ್ತಿಗಳನ್ನು ಹೊಡೆದ ಆಂಗ್ಲ ಆಡಳಿತದ ಹೊಡೆತಕ್ಕೆ ತತ್ತರಿಸಿ ದಾಸ್ಯದಲ್ಲಿ ಮುಳುಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರಸ್ಥಾನದ ಹಾದಿ ಯನ್ನು ಸುಗಮಗೊಳಿಸಿದ ಅಗ್ರಗಣ್ಯರು ಎನ್ನಬಹುದು.  ಭಾರತದ ಬಡ ಜನರ ಪರವಾಗಿ ಅಷ್ಟೊಂದು ತೀವ್ರ ಮರುಕರಿಂದ ತಡೆಯಲಾರದ ನೋವಿನಿಂದ ಮಾತಾಡಿ ಅವರ ಪರವಾಗಿ ಹೋರಾಡಿದರು. ಹಾಗೂ ಆಧ್ಯಾತ್ಮಿಕ ವ್ಯಕ್ತಿ ದೇಶ ಕಂಡರಿಯದ ಅಪ್ರತಿಮ ಚಿಂತಕರು ಸ್ವಾಮಿ ವಿವೇಕಾನಂದರು ರಾಷ್ಟ್ರೀಯತೆಯ  ಪ್ರತೀಕವಾದರು. ಬಡವರನ್ನ ಹಿಂಸಿಸಿ ಸುಖ-ಸೌಕರ್ಯಗಳಲ್ಲಿ ತೇಲಾಡುವವರನು ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ ಅಂತವರನ್ನು ದೇಶದ್ರೋಹಿ ಅಥವಾ ವಂಚಕರೆಂದು ಕರೆಯುತ್ತಾರೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸ್ವಾಮಿ ವಿವೇಕಾನಂದರು ಜನವರಿ 12 1863ನೇ ಜನಿಸಿದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ನಿರ್ಭಯತೆ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿಸಿದ್ದಾರೆ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು *ರಾಷ್ಟ್ರೀಯ ಯುವ ದಿನವೆಂದು* ಆಚರಿಸಲಾಗುತ್ತದೆ. ಇವರ ಜನ್ಮನಾಮ ನರೇಂದ್ರನಾಥ ದತ್ತಇವರ ತಾಯಿ ಭುವನೇಶ್ವರಿ ದೇವಿ ತಂದೆ ವಿಶ್ವನಾಥನತ್ತ.ಉತ್ತಮ ವೇದಾಂತತ್ವಗಳನ್ನು ಅನುಸರಿಸಿದಂತ ಬಿಟ್ಟ ವ್ಯಕ್ತಿ ಹಾಗೂ ಇವರ ಗುರುಗಳು ರಾಮಕೃಷ್ಣ ಪರಮಹಂಸರು ಅಷ್ಟೇ ಇಲ್ಲದೆ ಹಲವಾರು ಪ್ರಮುಖ ಕೃತಿಗಳನ್ನು ಕೂಡ ರಚನೆ ಮಾಡಿದ್ದಾರೆ ಅವುಗಳೆಂದರೆ ರಾಜಯೋಗ ಕರ್ಮ ಯೋಗ ಭಕ್ತಿ ಯೋಗ ಮತ್ತು ಜ್ಞಾನ ಯೋಗ ವಿಶೇಷವಾಗಿ ರಚನೆ ಮಾಡಿದ್ದಾರೆ ಅಷ್ಟೇ ಅಲ್ಲದೆ. ನರೇಂದ್ರರು 5 ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. ಹಾಗೂ ಭಾರತದ ಪರ್ಯಟನೆಗೆ 1888 ರಲ್ಲಿ  ಹೊರಟರು ಅವರು ಹೋಗುವಾಗ ಅವರ ಜೊತೆಯಲ್ಲಿ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆಯನ್ನು ಒಯ್ಯುತ್ತಿದ್ದರು. ವಿವೇಕಾನಂದರು ಭಾರತದ ತತ್ವ ಜ್ಞಾನ ಯೋಗ ವೇದಾಂತ ಇವೆಲ್ಲವನ್ನ ಪಾಶ್ಚಿಮಾತ್ಯ ದೇಶಗಳಲ್ಲಿ  ಪ್ರಚಾರ ಮಾಡಿದರು ಹಾಗೂ ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು.  ನಂತರ ಚಿಕಾಗೋ ಪ್ರವಾಸ ಕೈಗೊಂಡರು 1893ರಲ್ಲಿ ಹಾಗೂ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು.  ದೇಶದ ಬಡ ಜನರಿಗಾಗಿ ಕೆಲಸ ಮಾಡಲು ಕರೆ ನೀಡಿದರು ಅಷ್ಟೇ ಅಲ್ಲದೆ ಹಿಂದೂ ಧರ್ಮದ ಮೂಲ ತತ್ವಗಳಾದ ವೇದಾಂತ ಮತ್ತು ಯೋಗವನ್ನು ಪಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರು. ಹಾಗೂ ಮಾನವರಲ್ಲಿ ದೈವತ್ವವನ್ನು ಕಂಡರು ಮತ್ತು ಆತ್ಮವಿಶ್ವಾಸ ಧೈರ್ಯ, ಶುದ್ಧತೆ, ತಾಳ್ಮೆ ಮತ್ತು ಏಕಾಗ್ರತೆಗಳ ಮೂಲಕ  ಶ್ರೇಷ್ಠತೆಯನ್ನು ಸಾಧಿಸಬಹುದು ಎಂದು ತಿಳಿಸಿದರು. ಅವರ ಮುಖ್ಯ ಸಂದೇಶವೆಂದರೆ ಆತ್ಮವಿಶ್ವಾಸ *ನಿನ್ನನ್ನು ನೀನು ನಂಬು ನೀನು ಅಸಾಧ್ಯವಾದನ್ನು ಸಾಧಿಸಬಲ್ಲೆ*ಹಾಗೂ ಮಾನವನ ಕಲ್ಯಾಣ ಮತ್ತು ಆಧ್ಯಾತ್ಮಿಕತೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ರಾಮಕೃಷ್ಣ ಮಿಷನ್ 1897ರಲ್ಲಿ ಸ್ಥಾಪಿಸಿದರು.ಹಾಗೂ ವೇದಗಳ ಸಾರವನ್ನು ಆಧುನಿಕ ಸಾರ್ವತ್ರಿಕ ರೂಪದಲ್ಲಿ ಪ್ರಸ್ತುತಪಡಿಸಿದರು.ಎಲ್ಲಾ ಜೀವಗಳಲ್ಲಿ ದೇವರನ್ನು ಕಂಡು ಮಾನವ ಸೇವೆಯ ಮೂಲಕ ದೇವರನ್ನು ಪೂಜಿಸಬೇಕು ಎಂದು ಬೋಧಿಸಿದರು. ಶಿಕ್ಷಣವೆಂದರೆ ಕೇವಲ ಮಾಹಿತಿ ತುಂಬುವುದಲ್ಲ ಅದು ವ್ಯಕ್ತಿತ್ವ ವಿಕಾಸನ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಇಂದಿಗೂ ಕೂಡ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಹಾಗೂ ಆದರ್ಶಗಳು ಜನರಿಗೆ ಉತ್ತಮ ಸ್ಪೂರ್ತಿದಾಯಕ ಸಂದೇಶಗಳಾಗಿವೆ. ನಾಗರತ್ನ ಎಚ್ ಗಂಗಾವತಿ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ Read Post »

ಕಾವ್ಯಯಾನ

“ಭಾವನೆಯ ಬೇಲಿ” ಲತಾ ಎ ಆರ್ ಬಾಳೆಹೊನ್ನೂರು

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಭಾವನೆಯ ಬೇಲಿ” ಹೃದಯದೊಳಗೆ ನೋವ ಹಿಡಿದಿಡಲಾರೆಮನದ ಅಳಲು ಸಹಿಸಲಾರೆಹಿಂಡುವ ವೇದನೆಯ ಭರಿಸಲಾರೆಮೂಖ ವ್ಯಥೆ ಯಲಿ ಬದುಕಿರಲಾರೆ ಎಷ್ಟೆoದು  ನೋವಿನಲಿ ಬೇಯುತಿರುವೆತಿರುವುಗಳ ಜೀವನವ ನೋಡುತ್ತಿರುವೆಯಾರ ಬರುವಿಕೆಗಾಗಿ ಕಾಯುತಿರುವೆಕ್ಷಣ ಕ್ಷಣ ನೋವ ತಿಂದು ಸಾಯುತಿರುವೆ ಭಾವನೆಯ ಬೇಲಿಯಲಿ ಬಂಧಿಯಾದೆಚುಚ್ಚು ಮಾತಿನಲಿ ಗಟ್ಟಿಯಾದೆಬದುಕಲು ಬಿಡದ ಸಮಾಜವಿದೆಬದುಕಿದ್ದು ಜೀವನದಲ್ಲಿ ಸಮಾಧಿಯಾದೆ ಕಾಣದ ಕೈಗಳು ಸೂತ್ರ ಹಿಡಿದಂತೆಆಡಿಸಿದಂತೆ ಆಡಿದ ಗಾಳಿಪಟದಂತೆಎಳೆಯಲು ದಾರ ತುಂಡರಿಸಿದಂತೆಬದುಕಿನ ಯಾತ್ರೆ ಲೋಕದಿ ಮುಗಿದಂತೆ ಲತಾ ಎ ಆರ್ ಬಾಳೆಹೊನ್ನೂರು

“ಭಾವನೆಯ ಬೇಲಿ” ಲತಾ ಎ ಆರ್ ಬಾಳೆಹೊನ್ನೂರು Read Post »

ಇತರೆ, ಜೀವನ

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳನ್ನುಉಳಿಸಿಕೊಳ್ಳಿ” ಈಗ ಆಗಿರತಕ್ಕಂತ ಪ್ರಕೃತಿ ವಿಪತ್ತನ್ನು ನೋಡಿದರೆ ಈ ಜಗತ್ತು ಬೇಗ ನಾಶವಾಗುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲ ಆದರೂ ನಮ್ಮ ಜನಗಳಿಗೆ ಬುದ್ಧಿ ಬರುತ್ತಿಲ್ಲ. ಉದಾಹರಣೆ ಯಾರನ್ನು ಯಾರೂ ಮಾತನಾಡಿಸುತ್ತಿಲ್ಲಾ, ಯಾರ ಬಗ್ಗೆಯೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ,ಸಂಬಂಧಗಳಿಗೆ ಬೆಲೆ ಇಲ್ಲ, ನಾವೇ ಮೊದಲು ಮಾತನಾಡಿಸಿದರೆ ಅವರ ಮುಂದೆ ನಾವು ಸಣ್ಣವರಾಗಿ ಬಿಡುತ್ತೇವೆನು ಅನ್ನುವ ಅಹಂ,ಮತ್ತು ಈ ಮೊಬೈಲ್ಗಳ ಹಾವಳಿ ಮೊಬೈಲ್ ಗಳನ್ನು ಹಿಡಿದು ಮನೆಯಲ್ಲಿರುವ ನಾಲ್ಕು ಜನ ನಾಲ್ಕು ಮೂಲೆಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿರುತ್ತಾರೆ. ಮನೆಯಲ್ಲಿಯೇ ಇದ್ದರೂ ಮನೆಯ ಒಳಗೆ ಏನಾದರೂ ಗೊತ್ತಾಗದೆ ಇರುವಂತಹ ಪರಿಸ್ಥಿತಿ. ಎಲ್ಲಿಗೆ ಹೋಗ್ತಾ ಇದೆ ನಮ್ಮ ಕುಟುಂಬಗಳು ಏನಾಗ್ತಾ ಇದೆ ಸಮಾಜದಲ್ಲಿ ಇದನ್ನೆಲ್ಲ ನೋಡಿದ್ರೆ ಈಗಾಗಿರುವಂತಹ ಪ್ರಕೃತಿ ವಿಕೋಪ ಜಗತ್ತನ್ನ ನಾಶ ಮಾಡಿ ಹೊಸದಾಗಿ ಜಗತ್ತು ಸೃಷ್ಟಿಯಾಗಬಹುದೇನೋ? ನಿಜಕ್ಕೂ ಮನುಷ್ಯರಲ್ಲಿ ಯಾವ ಭಾವನೆಗಳು ಇಲ್ಲದಂತಾಗುತ್ತದೆ .ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಒಬ್ಬರು ಮುಂದೆ ಬಂದರೆ ಅವರನ್ನು ಹೇಗೆ ಹಿಂದಕ್ಕೆ ಎಳೆಯಬೇಕೆಂಬುವ ಯೋಚನೆಯಲ್ಲಿಯೇ ಇರುತ್ತಾರೆ.. ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ ದರೋಡೆ ಅತ್ಯಾಚಾರಗಳು ಇವೆಲ್ಲವೂ ಅಂಗೈಯಲ್ಲಿರುವ ಪ್ರಪಂಚದ ಎಲ್ಲಾ ಆಗುಹೋಗುಗಳಲ್ಲದೆ ಕೆಟ್ಟ ಸಂದೇಶಗಳನ್ನು ಹಾಗೂ ಚಿತ್ರಣಗಳನ್ನು ತೋರಿಸುತ್ತಿರುವ ಮೊಬೈಲ್ ಬಳಕೆಯಿಂದ ಆಗುತ್ತಿದೆ ಎಂದರೇ ತಪ್ಪಾಗಲಾರದು. ಮೊಬೈಲ್ ಬಳಕೆ ಮಕ್ಕಳಿಂದ ದೊಡ್ಡವರವರೆಗೂ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಜಾಸ್ತಿ ಬಳಕೆಯಾಗುತ್ತಿದೆ. ಕಾರಣ ಈ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ದೇವರೇ ಕಾಪಾಡಬೇಕು. ಜನರು ಇನ್ನು ಮುಂದೆಯಾದರೂ ತಾವು ಬದುಕಿರುವ ತನಕ ತಮ್ಮವರು ಸಂಬಂಧಿಕರು ಎಂದು ವಿಚಾರಿಸುವುದು, ಮಾತನಾಡಿಸುವುದು, ಹೋಗಿ ಬಂದು ಅವರ ಆರೋಗ್ಯವನ್ನು ವಿಚಾರಿಸುವುದು ಮಾಡುವ ಮನಸ್ಸು ಮಾಡಬೇಕಾಗಿದೆ .ಯಾರ ಮನೆಯಲ್ಲಿಯೇ ಆಗಲಿ ಒಂದು ಮದುವೆ ಗೃಹಪ್ರವೇಶ ಇದ್ದರೆ ವಾಟ್ಸಪ್ ನಲ್ಲಿ ಪತ್ರಿಕೆ ಕಳಿಸಿದರೆ ಸಾಕು ಮನೆಯಲ್ಲಿರುವ ಎಲ್ಲರೂ ಕಾರ್ಯಕ್ರಮಕ್ಕೆ ಹೋಗುತ್ತೇವೆ ಆದರೆ ಯಾರ ಮನೆಯಲ್ಲಿ ಕಷ್ಟ ನೋವು ಸಾವು ಬಂತು  ಎಂದರೆ ಏಕೆ ಬರುವುದಿಲ್ಲ ?ಅದರಲ್ಲೂ ಯಾರಾದರೂ ಸತ್ತರೆಂದು ಸುದ್ದಿ ಬಂದರೆ ಸಾಕು ಯಾರಾದರೂ ಒಬ್ಬರು ಹೋಗಿ ಹಾರ ಹಾಕಿ ಬನ್ನಿ ಎಲ್ಲರೂ ಹೋಗುವುದೇಕೆ ಎಂದು ಹೇಳುವ ಜನಕ್ಕೆ ಸತ್ತ ವ್ಯಕ್ತಿಯ ಮುಖ ಮತ್ತೆ ನೋಡಲಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗುವುದಿಲ್ಲ. ನಿಜಕ್ಕೂ ಜಮೀನನ್ನು ಕೊಳ್ಳಬಹುದು ಮನೆಯನ್ನು ಕಟ್ಟಿಸಬಹುದು ಆದರೆ ತಂದೆ ತಾಯಿ ರಕ್ತ ಸಂಬಂಧಗಳನ್ನು ಯಾರು ಖರೀದಿ ಮಾಡಲು ಸಾಧ್ಯವಿಲ್ಲ. ನಿಜಕ್ಕೂ ಇದನ್ನು ಬರೆಯುವಾಗ ಇತ್ತೀಚೆಗೆ ಆಗುತ್ತಿರುವ ಅನಾಹುತವನ್ನು ನೋಡಿ ಅನಾಹುತಗಳಲ್ಲಿ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿರುವ ಒಬ್ಬೊಬ್ಬರೇ ಉಳಿದುಕೊಂಡಿರುವ ಅವರನ್ನು ನೋಡಿದರೆ ನಾವು ಬಟ್ಟೆ ಆಹಾರ ಹಣ ಏನಾದರು ಕೊಡಬಹುದು ಕುಟುಂಬದವರನ್ನು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾ ಬರೆದಿರುವೆ. ವನಜ ಮಹಾಲಿಂಗಯ್ಯ ಮಾದಾಪುರ                        

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಸಂಕಥನ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಸಂಕಥನ” ನಿನ್ನೊಡನೆನನಗಿನ್ನೇನು ಮಾತು?ಮನದ ಗುಹೆಯಲಿ ಕತ್ತಲೆಎದೆಯೊಳಗೆತಾಪದ ದಾಖಲೆ ನಿನ್ನೊಡನೆನನಗೇತಕೆ ದಿಗಿಲುತವಕ ತಲ್ಲಣಬದುಕು ಭ್ರಮೆಯಲಿ ಬೆಂದಕೊಳೆತ ಋಣ ನಿನ್ನೊಡನೆನನಗೇತರ ಬಯಕೆನೆನಪಿಸಿದರೆ ಬೆವರುಕಣ್ಣ ಹರವುತುಂಬಿದೆ ನೆತ್ತರು ನಿನ್ನೊಡನೆಮತ್ತೇನಿದೆ ನಮ್ಮಲ್ಲಿನ ಕಸಿವಿಸಿ?ಕವಿತೆಗಳ ಗಾಸಿಬರೆದಿಟ್ಟರೂ……ಅರ್ಥಗಳು ವ್ಯರ್ಥ ಗಾಯ ಮಾದಿದೆಮತ್ತೇಕೆಕೆರೆದುಕೊಳ್ವದು? ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಸಂಕಥನ” Read Post »

You cannot copy content of this page

Scroll to Top