ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ

ವೈವಾಹಿಕ ಸಂಗಾತಿ ವನಜ ಮಹಾಲಿಂಗಯ್ಯ “ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ” “ರಹಸ್ಯ ಪ್ರೀತಿ, ಮದುವೆ ಒಳ್ಳೆಯದಲ್ಲ.”ದುಶ್ಯಂತ ಶಾಕುಂತಳೆಯನ್ನು ಮದುವೆಯಾಗಿರುವುದನ್ನೆ  ಮರೆತುಬಿಟ್ಟಿದ್ದಾನೆ. ಅಲ್ಲಿ ಶಕುಂತಳೆ ಗರ್ಭವತಿಯಾಗಿದ್ದಾಳೆ. ಅವಳನ್ನು ದುಷ್ಯಂತನ ಬಳಿಗೆ ಬಿಟ್ಟುಬರಲು ಕಣ್ವಮಹರ್ಷಿಗಳು ಶಿಷ್ಯ ನೊಂದಿಗೆ ಶಕುಂತಲೆಯನ್ನು ಅರಮನೆಗೆ ಕಳುಹಿಸುತ್ತಾರೆ.ಅಲ್ಲಿ ದುಷ್ಯಂತ ಹಾಗು ಶಿಷ್ಯ ಶಾಂಘ್ರವನಿಗೂ ಮಾತು ಕತೆ ನಡೆಯುತ್ತದೆ. ಶಂಕುತಳೆ ನಿನ್ನ ಹೆಂಡತಿಯೆಂದು ಕಣ್ವರ ಶಿಷ್ಯ ಎಷ್ಟು ಹೇಳಿದರೂ ದುಷ್ಯಂತ ಒಪ್ಪುವುದಿಲ್ಲ. ಆಗ ಶಾಂಘ್ರವನಿಗೆ ಶಕುಂತಳೆಯ ಮೇಲೆ  ಕೋಪ ಬರುತ್ತದೆ.ಕಾರಣ  ಇವಳ ಒಂದು ಕ್ಷಣದ ಅವಿವೇಕದಿಂದ ಎಂತಹ ಅಪಹಾಸ್ಯಕ್ಕೆ ಗುರಿಯಾದಳೆಂದು. ಆಗ ಒಂದು ಮಾತನ್ನು ಹೇಳುತ್ತಾನೆ.ಯಾರಿಗೂ ಗೊತ್ತಿಲ್ಲದಂತೆ ಪ್ರೀತಿಸುವಾಗ ಅಥವಾ ರಹಸ್ಯವಾಗಿ ಮದುವೆಯಾಗುವಾಗ  ಆ ವ್ಯಕ್ತಿಯ ಬಗ್ಗೆ ಚನ್ನಾಗಿಪರೀಕ್ಷೆ ಮಾಡಿರಬೇಕು. ಅವರ ಸ್ವಭಾವ ಸರಿಯಾಗಿ ತಿಳಿಯದಿದ್ದರೆ ಪ್ರೀತಿಯೂ ಸಹ ದ್ವೇಷವಾಗಿ ಮಾರ್ಪಾಡಾಗಲು ತುಂಬಾ ಸಮಯವಾಗುವುದಿಲ್ಲ.ದುಷ್ಯಂತ ಹಾಗು ಶಂಕುತಳೆ ಗುಟ್ಟಾಗಿ ಸೇರಿದವರು. ಅವರಿಬ್ಬರ ಸಂಬಂಧಕ್ಕೆ  ಯಾವ ಸಾಕ್ಷಿಯೂ ಇರಲಿಲ್ಲ. ಇದ್ದ ಒಂದು ಉಂಗುರವೂ ಕಳೆದುಹೋಗಿದೆ. ಅವರಿಬ್ಬರ ಮದುವೆಯಾಗಿದ್ದು ಹಿರಿಯರಿಗೆ ಗೊತ್ತಿದ್ದರೆ ಶಕುಂತಳೆಯನ್ನು ಹೆಂಡತಿಯೆಂದು ದುಷ್ಯಂತ ಒಪ್ಪಿಕೊಳ್ಳಬೇಕಿತ್ತು. ರಹಸ್ಯವಾಗಿ ಮದುವೆಯಾಗಿದ್ದರಿಂದ ಶಕುಂತಳೆಯ ಪೋಷಕರು ಅಸಹಾಯಕರು.   ಅಂದು ಕಾಳಿದಾಸ ಈ ನಾಟಕ ಬರೆದ ಸಮಯ ಈಗಿನ ಸಮಯಕ್ಕೂ ತುಂಬಾ ಅಂತರ ವಿದ್ದರೂ ಪರಿಸ್ಥಿತಿ ಮಾತ್ರವೇ ಬದಲಾಗಿಲ್ಲ. ಇಂದಿನ ಮಕ್ಕಳು ಗುಟ್ಟಾಗಿ ಪ್ರೀತಿಸಿ ಓಡಿಹೋಗಿ ಮದುವೆಯಾಗಿ ಮುಂದಿನ ದಿನಗಳಲ್ಲಿ ಎಡವಟ್ಟಾಗಿ ತುಂಬಾ ನೋವು ಅನುಭವಿಸುತ್ತಾರೆ. ಪಾಲಕರಿಗೂ ಕಷ್ಟ ಕೊಡುತ್ತಾರೆ.ಅದರಲ್ಲೂ ಹೆಚ್ಚು ಕಷ್ಟಕ್ಕೆ ಗುರಿಯಾಗುವವರು ಅಪ್ಪ ಅಮ್ಮ.ಪ್ರಾಯದ ಬಿಸಿಯಲ್ಲಿ  ಪ್ರೀತಿಯ ಗುಂಡಿಗೆ ಬೀಳಲು ಒಂದು ಕ್ಷಣ ಸಾಕು. ಆದರೆ ಒಬ್ಬರನ್ನು ಒಬ್ಬರು ಅರಿತುಕೊಳ್ಳದೇ ಆಕರ್ಷಣೆಗೆಪ್ರೀತಿಸಿದರೆ ಅದು ಹೆಚ್ಚುಕಾಲ ಉಳಿಯವುದು ಅಕ್ಷರಶಃ ಸುಳ್ಳು.  ಯಾವ ವ್ಯಕ್ತಿಯ ಗುಣ ಸರಿಯಾಗಿ ಗೊತ್ತಿರುವುದಿಲ್ಲವೋ ಅಂತಹ ವ್ಯಕ್ತಿಯು ವೈರಿಯಾಗುತ್ತಾನೆ. ಅಂದಾಗಲಿ ಇಂದಾಗಲಿ ಸಂಬಂಧಗಳೇ ಸಾಕ್ಷಿಯನ್ನು ಹೇಳುತ್ತವೆ.  ನಾವಿಬ್ಬರೂ ಮದುವೆಯಾಗಿದ್ದೇವೆ ಎಂದರೆ  ಸಾಕ್ಷಿ ತೋರಿಸಲು ಕೋರ್ಟು ಕೇಳುತ್ತದೆ. ಅಂದು ದುಷ್ಯಂತನು  ಶಕುಂತಳೆಗು ಅದನ್ನೆ ಕೇಳಿದ್ದು.  ಅದಕ್ಕೆ ಗುಟ್ಟಾಗಿ ಮದುವೆ ಮಾಡಿಕೊಂಡು ಹೆತ್ತವರಿಗೂ ಸಂಬಂಧಿಕರಿಗೂ ಅವಮಾನ ಮಾಡಬೇಡಿ. ಜೀವ ಚಿಕ್ಕದು, ಜೀವನ ದೊಡ್ಡದು.  ಎಲ್ಲರ ಒಪ್ಪಿಗೆಯಿಂದ ನಡೆದ ಮದುವೆಗಳಲ್ಲಿ ಏನಾದರೂ ತೊಂದರೆಯಾದರೆ ಹೇಳಲು  ನಿಮ್ಮವರು ಎಲ್ಲರೂ ಇರುತ್ತಾರೆ.ಗುಟ್ಟಾಗಿ ಮದುವೆಯಾಗಿ ಆತ್ಮಹತ್ಯಗೆ ಶರಣಾಗಿ ಹೆತ್ತವರ ಮನಸ್ಸು ನೋಯಿಸಬೇಡಿ. ಅಂದು ದುಷ್ಯಂತ ಶಕುಂತಳೆಯ ಮದುವೆ ಸಾಕ್ಷಿಯಾಗಿದ್ದುದು ಒಂದು ಉಂಗುರ, ಹಾಗು ಕಣ್ವಾಶ್ರಮದಲ್ಲಿದ್ದ ಒಂದು ಜಿಂಕೆ ಮಾತ್ರವೆ.  ಆದರೆ ಉಂಗುರ ಕಳೆದಿತ್ತು .  ಪಾಪ ಜಿಂಕೆ ಸಾಕ್ಷ್ಯ ಯಾರು ಕೇಳುತ್ತಾರೆ?    ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮೈ ಜುಮ್ಮೆನಿಸುತ್ತದೆ. ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ಹುಡುಗಿಯ  ಕತೆ. ಬೇಡ ಮಕ್ಕಳೆ ಯಾರೂ ಅಂತಹ ತಪ್ಪು ಮಾಡಿ  ಜೀವಕಳೆದುಕೊಳ್ಳಬೇಡಿ. ಮದುವೆಯ ವಿಷಯದಲ್ಲಿ ದುಡುಕಬೇಡಿ.  ಗುಟ್ಟು ಮಾಡಬೇಡಿ. ಹೆತ್ತವರಿಗೆ ಅವರ ಜವಾಬ್ದಾರಿ ಗೊತ್ತಿರುತ್ತದೆ. ವನಜ ಮಹಾಲಿಂಗಯ್ಯಅಧ್ಕಕ್ಷರುವಿಶ್ವವಿನೂತನ ಮಹಿಳಾ ಸಮಾಜ ದಾವಣಗೆರೆ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಸುಕನ್ಯೆ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಸುಕನ್ಯೆ” ಅಂದ್ಕೊಂಡುನಾನವಳ ಕಂಡ ಆ ದಿನಪ್ರೀತಿಸ ತೊಡಗಿದೆ ಮನಸಾರೆ,! ಅವಳ ಸೌಂದರ್ಯಕ್ಕೆಮರುಳಾಗಿ ಕಿರು ನಗೆ ಸೂಸಿ ಬಿಟ್ಟೆಕಣ್ಣೋಟಕೆ ಅವಳ, ಅಲ್ಲಿಂದ ಕಾಲ್ಕಿತ್ತೇ,! ಭಯಪಟ್ಟು ಬೆವರಿಳಿಸಿದೆಕೋಪಿಸುವಳೋ ಎಂಬ ಭಯದಿಹೆಜ್ಜೆಯ ವೇಗ ಹೆಚ್ಚಿಸಿ,ಮುನ್ನಡೆದು ಬಿಟ್ಟೆ,! ಮತ್ತೇ ಮತ್ತೇ….ಕಣ್ಣಾರಳಿಸಿದಾರಿ ಕೇರಿಯೊಳು ಸುತ್ತಿ ಅಲೆದುಹೃದಯಕ್ಕೆ ಸಿಕ್ಕಿಸಲಾವಳ ಆಸೆಯ ಪಟ್ಟೆ,! ಸುಕನ್ಯೆ ಅವಳೆಂದು….ಪ್ರೀತಿಸಿ ಸರಸ ಅವಳ ಬಯಸಿದೆಸ್ತ್ರೀ ಅವಳಲ್ಲವೆಂದು ಅರಿತಾಗ ಕೊರಗಿದೆ.! ಮತ್ತೇ ಮತ್ತೇ ಅವಳ…ಸೌಂದರ್ಯಕ್ಕೆ ಮರುಳಾಗಿ ನಾಹುಚ್ಚನಂತೆ ತನ್ನ ತಾನು ಮರೆತು ಬಿಟ್ಟೇ. ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು “ಸುಕನ್ಯೆ” Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ‌ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಸರಳವೆಂತಾರೆ ಬದುಕು ಸರಳವಲ್ಲ ನೋಡಬೇಕು ಸರಳವಾಗಿಯೋಚನೆಗಳಿಗೆ ಕೊನೆಯಿಲ್ಲ ವಿರಾಮ ನೀಡಬೇಕು ಸರಳವಾಗಿ ಸುಗಮವಾಗದು ಬುದ್ಧಿವಂತಿಕೆ ಹೃದಯವಂತಿಕೆಗಳ ಸಂಗಮವಾಸ್ತವದಲಿ ಕನಸುಗಳಿಗೆ ರಾಗ ಕಟ್ಟಿ ಹಾಡಬೇಕು ಸರಳವಾಗಿ ಅವರವರ ವಿಷಯದಲಿ ಸಾಕಷ್ಟಿದೆ ನೋಡಲು ನಮ್ಮ ವಿಷಯದಲಿಇತರರಿಗಿಂತ ಮೊದಲು ನಮ್ಮನ್ನು ನಾವು ಕಾಡಬೇಕು ಸರಳವಾಗಿ ಜೀವನ ಸಾಕೆನಿಸುವುದಕಿಂತ ಮುಂಚೆ ಬೇಕಾದಂತೆ ಬಾಳಬೇಕುಆಸೆಗಳು ಸಾಯಿಸುವ ಮುಂಚೆ ಗೋರಿ ತೋಡಬೇಕು ಸರಳವಾಗಿ ಗೊಂದಲಗಳಿರುವುದು ದುನಿಯಾದಲಿ ಅಲ್ಲ ನಮ್ಮ ಚಿಂತನೆಗಳಲಿಮಲ್ಲಿಗೆಯ ಸುಮದಂತೆ ವಿಚಾರಗಳನು ಹೂಡಬೇಕು ಸರಳವಾಗಿ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ‌ ಗಜಲ್ Read Post »

ಕಾವ್ಯಯಾನ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ”

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಬಚ್ಚಿಟ್ಟುಕೋ” ಎದೆಯೊಳಗೆ ನನ್ನ ಬಚ್ಚಿಟ್ಟುಕೊ,ಉಸಿರ ಪಿಸುಮಾತ ಹಾಗೆ,ಕಣ್ಣಿನಲಿ ನನ್ನ ಕಾಯ್ದಿರಿಸಿಕೊ, ರೆಪ್ಪೆಗಳ ಕಾವಲ ಹಾಗೆ ​ನನ್ನೆಲ್ಲ ನೋವುಗಳ ಮರೆಸಿಬಿಡು, ನಿನ್ನೊಂದು ಕಿರುನಗೆಯಲಿ,ಮತ್ತೆ ಹುಟ್ಟಿ ಬರುವೆ ನಾನು, ಮುಂಜಾವಿನ ಹೊಸ ಕಿರಣದ ಹಾಗೆ ​ಹೃದಯದ ಈ ಬಡಿತದಲಿ ಕೇಳಿಸಲಿ ಬರೀ ನಿನ್ನದೇ ಹೆಸರುಜೊತೆಯಾಗಿ ನಡೆದು ಬರುವೆ ನಾನು, ನಿನ್ನ ನೆರಳಿನ ಹಾಗೆ ​ಜಗದ ಈ ಜಂಜಾಟದಲಿ ನಾ ಕಳೆದು ಹೋದರೂ ಚಿಂತೆಯಿಲ್ಲಮರಳಿ ಸೇರುವೆ ನಿನ್ನ ಮಡಿಲನು, ಸಂಜೆಯ ಹಕ್ಕಿಯ ಹಾಗೆ ​ ಬರೆಯುವೆ ನಿನ್ನ  ಪ್ರೀತಿಯ ಹೆಸರ  ಪುಟ ಪುಟದ ಸಾಲಿನಲಿಅಳಿಯದಂತೆ ಉಳಿದುಬಿಡು ನೀನು, ಕವಿತೆಯ ಮೌನದ ಹಾಗೆ … ಡಾ ವಿಜಯಲಕ್ಷ್ಮಿ ಪುಟ್ಟಿ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ” Read Post »

ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಅಂಕಣ ಸಂಗಾತಿ
ಭಾರತದಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್

ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿ ರಾಬ್ರಿ ದೇವಿ
(ಅಧಿಕಾರ ಅವಧಿ: ೭ವರ್ಷ ೧೯೦ ದಿನಗಳು)

Read Post »

ಇತರೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು ಸಂಗಾತಿಗೆ ಹೆಚ್ಚು ಬರೆಯದೇ ಹೋದರು ತಮ್ಮ ಬರಹಗಳಬಗ್ಗೆತಮ್ಮ ಪುಸ್ತಕಗಳ ಬಗ್ಗೆ ಜೊತೆಗೆ ತಮಗಿಷ್ಟವಾದ ಸಾಹಿತ್ಯ ಚಟುವಟಿಕೆಗಳ ಬ ಗ್ಗೆ ನಮ್ಮೊಂದಿಗೆ ಸದಾ ಮಾಹಿತಿ ಹಂಚಿಕೊಳ್ಳುತ್ತಿದ್ಷದರುಈಗವರು ನಮ್ಮೊಂದಿಗಿಲ್ಲ ಎನ್ನುವುದನ್ನು ನಮಗೆ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿದೊರೆಯಲೆಂದು ಸಂಗಾತಿ ಪತ್ರಿಕೆ ಪ್ರಾರ್ಥಿಸುತ್ತದೆ ಸಂಪಾದಕೀಯ ಮಂಡಳಿ,ಸಂಗಾತಿ ಸಾಹಿತ್ಯ ಪತ್ರಿಕೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು Read Post »

You cannot copy content of this page

Scroll to Top