ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪದ್ಯವೆಂದರೆ
ಪದಗಳ ದೊಂಬರಾಟ
ಅದು ಬರಿ ಹುಂಬರಾಟ !
ಎಂದ ಪಶ್ಚಿಮದ ಕವಿಗೆ
ಕಂಡದ್ದು ಬರಡು
ಬಂಜರು ಭೂಮಿ
ಬೆಳೆವುದಲ್ಲಿ ಬರಿದೆ
ಪಾಪಾಸುಕಳ್ಳಿ !
ಬಟ್ಟೆ ತುಂಬಿಸಿಟ್ಟ
ಬೆದರು ಬೊಂಬೆಗಳು
ತಲೆ ತುಂಬ ಬೈಹುಲ್ಲು
ಸುಮ್ಮ ಸುಮ್ಮನೆ ಗುಲ್ಲು …

ಮೂಡಣ ಮನೆಯ
ಮುತ್ತಿನ ನೀರು
ಕಾಣುವುದೇನು
ಪಡುವಣದಲ್ಲಿ ?
ನುಣ್ಣನೆ ಎರಕದ
ಬೆಳ್ಳಿಯ ಹೊಳೆ ಅದು
ಬರಿ ಬೆಳಗಲ್ಲೋ ಅಣ್ಣಾ !
ಇದ ತಿಳಿಯಲು ಬಾರೋ
ಸಾಧನಕೇರಿಗೆ ವಂದಿಸಿ
ಬಾರೋ ಪಾಕಶಾಲೆಗೆ
ಬೆಂದರೆ ಏನಾಗುವೆಯೋ
ತಿಂದು ಹೇಳಲು ಬಾರೋ!
,
ಕರೆದೊಯ್ಯುವೆನು
ಕವಿಶೈಲಕೆ ನಿನ್ನ
ಅನಿಕೇತನವೆಂದರೆ
ಏನೆನ್ನಲಿ ಅಣ್ಣಾ !
ಹಾಗೆಯೇ ಜೋಗದ
ಸಿರಿ ಬೆಳಕಿನಲಿ
ಕಾಣುವೆ ನೀ
ನಿತ್ಯೋತ್ಸವ !
ಪದಗಳ ಹುಂಬರಾಟವಲ್ಲೋ
ಇದು ನಾದಬ್ರಹ್ಮೋತ್ಸವ
ತಂತಿ ನಾಕು ವೇದಕಲರವ…


About The Author

2 thoughts on “ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!””

  1. ಚಂದದ ಅರ್ಥಪೂರ್ಣ ಕವನ. ಅಭಿನಂದನೆಗಳು ಸುಮತಿ. ಶುಭಾಶಯಗಳು.
    ಎ ಎಸ್ ಎನ್ ಹೆಬ್ಬಾರ್, ಕುಂದಾಪುರ.

Leave a Reply

You cannot copy content of this page

Scroll to Top