ಕಾವ್ಯ ಸಂಗಾತಿ
ಶ್ರೀನಿವಾಸ ಖರೀದಿ
” ಕ್ಯಾಲೆಂಡರ್ ದಿನ”


ನಿನ್ನೆಯ ಕ್ಯಾಲೆಂಡರ್ನ ದಿನಗಳು,
ಮುದುಡಿ ಇತಿಹಾಸದ ಪುಟವ ಸೇರಿವೆ..
ಹೊಸ ವರುಷವು, ಹೊಸ ನಿರೀಕ್ಷೆಗಳೊಂದಿಗೆ,
ರೆಕ್ಕೆ ಬಿಚ್ಚಿ ಅರಳಿವೆ॥
ಉದಯರವಿಯ ಮೊದಲ ಕಿರಣದಂತೆ,
ಬೆಳಗಲಿ ನಮ್ಮೆಲ್ಲರ ಬದುಕು..
ಮೂಡಣ ಸೂರ್ಯನಂತೆ, ಪ್ರತಿಯೊಬ್ಬರ ಜೀವನದಲ್ಲಿ
ಶಾಂತಿ-ನೆಮ್ಮದಿ ಮನೆಮಾಡಲಿ॥
ನಿನ್ನೆಗಳ ತಪ್ಪುಗಳು,
ಇಂದು ಪಾಠಗಳಾಗಲಿ..
ನಾಳೆಯ ಕನಸುಗಳು,
ಭರವಸೆಯೊಂದಿಗೆ ಮೂಡಲಿ॥
ಬದುಕು ಸದಾ ಹಾಡಲಿ,
ಸಾರ್ಥಕತೆಯ ಗೀತೆ..
ಮನ–ಮನೆಗಳಲ್ಲಿ ಬೆಸೆಯಲಿ,
ಬದುಕಿನ ಮಧುರ ಸಂಗೀತೆ॥
ಬಂದಿದೆ ಸಂಭ್ರಮದಿ
ಹೊಸ ವರುಷ..
ಹೊತ್ತು ತರಲಿ ಸಡಗರದಿ,
ನವ ಹರುಷ॥
ಶ್ರೀನಿವಾಸಖರೀದಿ




ತುಂಬಾ ಚೆನ್ನಾಗಿ ಮೂಡಿಬಂದಿದೆ, ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು