ಕಾವ್ಯ ಸಂಗಾತಿ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
“ಸಂಕಥನ”


ನಿನ್ನೊಡನೆ
ನನಗಿನ್ನೇನು ಮಾತು?
ಮನದ ಗುಹೆಯಲಿ ಕತ್ತಲೆ
ಎದೆಯೊಳಗೆ
ತಾಪದ ದಾಖಲೆ
ನಿನ್ನೊಡನೆ
ನನಗೇತಕೆ ದಿಗಿಲು
ತವಕ ತಲ್ಲಣ
ಬದುಕು ಭ್ರಮೆಯಲಿ ಬೆಂದ
ಕೊಳೆತ ಋಣ
ನಿನ್ನೊಡನೆ
ನನಗೇತರ ಬಯಕೆ
ನೆನಪಿಸಿದರೆ ಬೆವರು
ಕಣ್ಣ ಹರವು
ತುಂಬಿದೆ ನೆತ್ತರು
ನಿನ್ನೊಡನೆ
ಮತ್ತೇನಿದೆ ನಮ್ಮಲ್ಲಿನ ಕಸಿವಿಸಿ?
ಕವಿತೆಗಳ ಗಾಸಿ
ಬರೆದಿಟ್ಟರೂ……
ಅರ್ಥಗಳು ವ್ಯರ್ಥ
ಗಾಯ ಮಾದಿದೆ
ಮತ್ತೇಕೆ
ಕೆರೆದುಕೊಳ್ವದು?
ಶರಣಪ್ಪ ತಳ್ಳಿ ಕುಪ್ಪಿಗುಡ್ಡ



