ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

          ಒಂದನೊಂದು ಕಾಲದಲ್ಲಿ ಪಿ.ಯು.ಸಿ.ಶಿಕ್ಷಣಕ್ಕೆ ಮಂಗಳ ಹಾಡಿ, ಜೀವನಕ್ಕೆ ಭದ್ರವಾದ ಬುನಾದಿ ಹಾಕಲು ಹಲವು ‘ಉದ್ಯೋಗ ‘ ಎಂದು ಎಲ್ಲಾಡೆ ಓಡಾಡಿದ್ದರೂ ಹೆಚ್ಚಿನ ಫಲ ಮಾತ್ರ ದೊರೆಯಲಿಲ್ಲ….! ದುಡಿದು ಸಂಪಾದಿಸುತ್ತಿದ್ದ ಕಾಸು ಹೊಟ್ಟೆ – ಬಟ್ಟೆ – ಇನ್ನಿತರ ಖಚು೯ಗಳಿಗೆ ಖಾಲಿಯಾಗಿಬಿಡುತ್ತಿತ್ತು…!ಒಂದು ಮಧುರವಾದ ಕನಸು ಕಾಣುತ್ತಾ ‘ನಿದ್ರೆ’ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ….! ಆದರೆ ಜೀವನದಲ್ಲಿ ಏನಾದ್ದರೂ ಒಂದು ‘ಸಾಧನೆ’ ಮಾಡುವಂತಹ ಗುರಿ ಮಾತ್ರ ಇತ್ತು…!

   ಕಾಲಚಕ್ರ ತಿರುಗ ತೊಡಗಿತ್ತು…. ನಂತರ ಒಂದು ವಿದೇಶ ಪ್ರಯಾಣ…. ಮದುವೆ…. ಮಕ್ಕಳು ಎಂದು ಹೇಳುತ್ತಾ, 40ರ
ವಯಸ್ಸಿನ ಗಡಿ ತಲುಪಿದೇ ತಿಳಿಯಲಿಲ್ಲ…! ಬದುಕು ಸಾಗಿಸಲು ಒಂದು ಮಾರುತಿ ವ್ಯಾನ್ ನಲ್ಲಿ, ಬ್ರೆಡ್ – ಬನ್-ಕೇಕ್ – ಮಸಾಲೆ ಕಡಲೆಯಂತಹ ‘ ಬೇಕರಿ ‘ತಿಂಡಿ – ತಿನಿಸುಗಳನ್ನು ತುಂಬಿಸಿಕೊಂಡು, ವಿವಿಧ ಗ್ರಾಮಗಳ ಹೋಟೆಲ್ – ಅಂಗಡಿಗಳಿಗೆ ಈ ತಿಂಡಿ-ತಿನಿಸುಗಳನ್ನು ತಲುಪಿಸಿ, ಒರ್ವ ‘ ವ್ಯಾಪಾರಿ’ ಎಂಬ ಹಣೆಪಟ್ಟಿ ದೊರೆಯಿತ್ತು…! ಜೊತೆಗೆ ವ್ಯಾಪಾರವು ಬಹಳ ಚೆನ್ನಾಗಿ ನಡೆಯುತ್ತಿದ್ದ ಕಾರಣ, ಈ ಹಿಂದೆ ಕಂಡ ಕನಸುಗಳು ಮೆಲ್ಲನೆ
ನನಸಾಗ ತೊಡಗಿತ್ತು….!!
       ಈ ಕನಸುಗಾರ…. ಸಾಧನೆಗಾರ….. ಕೊಡಗು ಜಿಲ್ಲೆಯ
ಕುಶಾಲನಗರದ ನ್ಯೂ ಹೌಸಿಂಗ್ ಬೋಡ್೯ ನಿವಾಸಿ   ಪರಮೇಶ್..!ಹೀಗೆ ಈ ವ್ಯಾಪಾರವು ಯಾವುದೇ ವಿಘ್ನ ಇಲ್ಲಾದೇ ಸಾಗುತ್ತಿದ್ದಾಗ, ಪ್ರಪಂಚವನ್ನು ನಡುಗಿಸಿದ ‘ಕೊರೋನಾ’ ಮಾರಿಯಿಂದ ಇವರ ವ್ಯಾಪಾರಕ್ಕೆ ತುಸು ಇಳಿಕೆ ಕಂಡು ಬಂತು.. ಯಾವುದೇ ಕಡೆ ಓಡಾಡುವಂತೆ ಇಲ್ಲ….! ನಾಲ್ಕು ಗೋಡೆಗಳ ನಡುವೆ ‘ಹಗ್ಗ ‘ಇಲ್ಲಾದೇ ಎಲ್ಲಾರ ರೀತಿ ಇವರನ್ನು ಸಹ ಕೊರೋನಾ ಮಾರಿ ಕಟ್ಟಿಹಾಕಿತ್ತು…!

      ಆ ಸಮಯದಲ್ಲಿ ಈ ಹಿಂದೆ ಇವರು ಕನಸು ಕಂಡಿದ್ದ ‘ ಪದವಿ’ ಯ ಕನಸು ಪುನಃ ಮನಸ್ಸಿನಲ್ಲಿ ಮೊಳಕೆ ಹೊಡೆಯಿತ್ತು…! ಈಗ ಪುನಃ ಓದು ಮುಂದುವರಿಸಿ ಹೆಸರು ನೊಂದಿಗೆ ಕೇವಲ ‘ಪದವಿ’ ಸೇರಿಸಿ ಪ್ರಯೋಜನ ಇಲ್ಲ…. ಈ ಪದವಿಯಿಂದ ಸಮಾಜದಲ್ಲಿ ಹತ್ತು ಮಂದಿಗೆ ಪ್ರಯೋಜನವಾಗ ಬೇಕೆಂದು, ಅವರ ಮನ ನುಡಿಯಿತ್ತು…! ಆಗ ಅವರನ್ನು ಕೈ ಬೀಸಿ ಕರೆದದ್ದು ಲಾ…. ಎಲ್.. ಎಲ್.ಬಿ.
ಶಿಕ್ಷಣ…!ಇದು ಇವರಿಗೆ ಸುಲುಭದ ಮಾತುವಾಗಿರಲಿಲ್ಲ !
       ಈ ಹಿಂದೆ ಪಿ.ಯು.ಸಿ.ಶಿಕ್ಷಣವನ್ನು ಮುಗಿಸಿ ಸುಮಾರು 24 ವಷ೯ಗಳೇ ಕಳೆದು ಹೋಗಿದ್ದ ಕಾರಣ, ಓದು -ಬರಹ ಸುಲುಭದ ವಿಚಾರವಾಗಿರಲಿಲ್ಲ…! ಆದರೂ ಧೈರ್ಯ ಮಾಡಿ ಮೈಸೂರಿನ ‘ಕನಾ೯ಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ, ಕಾನೂನು ಕಲಿಕೆ ವಿದ್ಯಾಥಿ೯ಯಾಗಿ ದಾಖಲುಯಾಗಿಬಿಟ್ಟರು….!ಐದು ವಷ೯ಗಳ ಓದು…! ಜೊತೆಗೆ ವ್ಯಾಪಾರವು ಎಂದಿನಂತೆ ಸಾಗಬೇಕು,..! ಮನದಲ್ಲಿ ಒಂದು ಧೃಡವಾದ ಗುರಿ ಮತ್ತು ಕನಸು ಇದ್ದ ಕಾರಣ, ನಿತ್ಯ ಕುಶಾಲನಗರದಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತಾ, ಪುನಃ ಅವರ ಬಾಳಿನಲ್ಲಿ ಮತ್ತೊಂದು ‘ಕಾಲೇಜ್ ಲೈಫ್’
ಶುರುವಾಯಿತ್ತು…!
        ನಿತ್ಯ ಬೆಳಿಗ್ಗೆ ಐದು ಗಂಟೆಗೆ ಕುಶಾಲನಗರದಿಂದ ಬಸ್ ಏರಿ, ಮೈಸೂರುಗೆ ತಲುಪಿ, ಅಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಬನ್ನೂರು ರಸ್ತೆಯಲ್ಲಿರುವ ಕಾಲೇಜ್ ಗೆ
ಹೋಗಿ ಜಾಣ ವಿದ್ಯಾಥಿ೯ಯಾಗಿ ಓದು ಪ್ರಾರಂಭಿಸಿಯೇ ಬಿಟ್ಟರು…! ಕೈಯಲ್ಲಿರುವ ದೊಡ್ಡ-ದೊಡ್ಡ ಗಾತ್ರದ ಪುಸ್ತಕಗಳನ್ನು ನೋಡುವಾಗ ಮನಸ್ಸಿನ ಒಂದು ಮೂಲೆಯಲ್ಲಿ ಭಯವಾಗುತ್ತಿತ್ತು…! ಆದರೂ ಮನಸ್ಸು ಗಟ್ಟಿಯಾಗಿದ್ದ ಕಾರಣ, ಓದು ಸುಗಮವಾಗಿ ಸಾಗುತ್ತಿತ್ತು…!
ಕಾಲೇಜ್ ಓದು ಮುಗಿಸಿ, ಮನೆಗೆ ತಲುಪಿ ನಂತರ ಎಂದಿನಂತೆ ‘ವ್ಯಾಪಾರ’ದ ಚಟುವಟಿಕೆಗಳು ಪ್ರಾರಂಭವಾಗುತ್ತಿತ್ತು!ಈ ಕೆಲಸ ಮುಗಿಯುವ ವೇಳೆಗೆ ರಾತ್ರಿ
ಹನ್ನೊಂದು -ಹನ್ನೇರಡು ಗಂಟೆಯಾಗುತ್ತಿತ್ತು….! ನಂತರ ಒಂದು ಸಣ್ಣ. ‘ಕೋಳಿ ನಿದ್ರೆ’..! ಮರುದಿನ ಎಂದಿನಂತೆ ಕಾಲೇಜ್ – ವ್ಯಾಪಾರ ಎಂದು ಬದುಕಿನ ಬಂಡಿ ಸಾಗುತ್ತಿತ್ತು.!!

   ಮನಸ್ಸಿನಿಂದ ಸೋಮಾರಿತನವನ್ನು ಓಡಿಸಿ, ಮನಸ್ಸುನಲ್ಲಿ
ಗುರಿ ಮತ್ತು ಕನಸುಗೆ ಭದ್ರವಾದ ಸ್ಥಾನ ನೀಡಿದ್ದ ಫಲವಾಗಿ ,
ಐದು ವಷ೯ದ ಕಾನೂನು ಪದವಿ ಪರೀಕ್ಷೆ ಬರೆದು ಮುಗಿಸಿ ಫಲಿತಾಂಶ ಹೊರಬಂದಾಗ, ಈ ವ್ಯಾಪಾರಿ ಉತ್ತಮ ಅಂಕದೊಂದಿಗೆ ವಕೀಲರು ಯಾಗಿ, ಅರಳಿ ಬಿಟ್ಟರು…! ಕನಸು ನನಸಾಯಿತ್ತು….! ಪರಿಶ್ರಮಕ್ಕೆ ದೇವರು ತಕ್ಕ ಪ್ರತಿಫಲವನ್ನು ನೀಡಿತ್ತು..!ಈಗ ವ್ಯಾಪಾರಿ ಪರಮೇಶ್,
ವಕೀಲ.. ಲಾಯರ್ ಪರಮೇಶ್….!ಹೆಸರು ಜೊತೆ ಪದವಿ..!
      ಈಗ ಪರಮೇಶ್ ನವರ ಕೈಯಲ್ಲಿ ಎರಡು ‘ತಕ್ಕಡಿ’ಗಳು ಇದೆ..!ಒಂದು ವ್ಯಾಪಾರದ ಲಾಭ-ನಷ್ಟಗಳ ಲೆಕ್ಕಚಾರದ ತಕ್ಕಡಿ…! ಮತ್ತೊಂದು ಅನ್ಯಾಯ-ನ್ಯಾಯಗಳನ್ನು ತೂಕ ಮಾಡಿ, ನೊಂದ ಮನಸ್ಸುಗಳಿಗೆ ನ್ಯಾಯ ಒದಗಿಸುವ ನ್ಯಾಯದ ತಕ್ಕಡಿ…!
      ಈ ಶುಭ ವೇಳೆಯಲ್ಲಿ ಎರಡು ತಕ್ಕಡಿಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಪರಮೇಶ್ ನವರಿಗೆ ಹೇಳಿದ್ದರೇ, ಅವರಿಗೆ ಬಲು ಕಷ್ಟವಾಗುತ್ತದೆ…! ಏಕೆಂದರೆ ವ್ಯಾಪಾರದ ತಕ್ಕಡಿ ಅವರನ್ನು ಕಷ್ಟ ಕಾಲದ ದಿನಗಳಲ್ಲಿ ಕೈ ಹಿಡಿದು ಮೇಲೆ ಕ್ಕೆ ಎತ್ತಿ, ಈ ಸಮಾಜದಲ್ಲಿ ಒಂದು ಬೆಲೆ – ಗೌರವದಿಂದ ಬಾಳುವಂತಹ ರೀತಿಯಲ್ಲಿ ಕೆತ್ತನೆ ಮಾಡಿದ್ದು…!ಈಗ ಕೈಯಲ್ಲಿ ಇರುವ ನ್ಯಾಯದ ತಕ್ಕಡಿ ಸುಮ್ಮನೆ ‘ ಟೈಂ ಪಾಸ್’ ಅಥವಾ ಅದೃಷ್ಟ ಬಲದಿಂದ ದೊರೆತದ್ದು ಅಲ್ಲ…..!ಇದಕ್ಕಾಗಿ ಐದು ವಷ೯ಗಳ ಕಾಲ ಸರ್ವ ಮೋಜು- ನಿದ್ರೆ ಹಾಳು ಮಾಡಿಕೊಂಡು, ಓಡಾಡಿ ಓದಿದ ಫಲವಾಗಿ ಮಾತ್ರ ಈ
‘ಕರಿಕೋಟು’ ಧರಿಸುವಂತಹ ಸೌಭಾಗ್ಯ ಸಿಕ್ಕಿದ್ದು….!
    ಈಗ ಪರಮೇಶ್ ನವರು ಪತ್ನಿ ಸುಮಿ ಮತ್ತು ಮಕ್ಕಳಾದ ಅಭಯ್ -ಜಿನಿಯೊಂದಿಗೆ ಕುಶಾಲನಗರದಲ್ಲಿ ಬದುಕನ ಬಂಡಿ ಸಾಗಿಸುತ್ತಿದ್ದಾರೆ….!ಕರಿಕೋಟು ಧರಿಸಿ ಕೋರ್ಟ್ ಗೆ
ಹೋಗುವ ವೇಳೆ, ಪ್ರೀತಿಯಿಂದ ಪತ್ನಿಯಿಂದ ಒಂದು ನೋಟ ನೋಡಿ ಮುಂದಕ್ಕೆ ಸಾಗುತ್ತಾರೆ..!ಏಕೆಂದರೆ ಇವರ ಈ ಗೆಲುವಿನ ಹಿಂದೆ ಪತ್ನಿಯ ಪರಿಶ್ರಮವು ಬಹಳ ಇದೆ ಎಂದು ಹೇಳಲು ಪರಮೇಶ್ ಮರೆಯುವುದಿಲ್ಲ…!
   ಪರಮೇಶ್ ನವರ ಈ ಸಾಧನೆಯ ಕಥೆ ಕೇಳಿದಾಗ, ನಿಮ್ಮ ಯಾವುದಾದರೂ ಬಾಡಿ ಹೋಗಿರುವ ಕನಸುಗಳಿಗೆ ಜೀವ ತುಂಬಲು ಮತ್ತು ಪರಮೇಶ್ ನವರಿಗೆ ಒಂದು ಅಭಿನಂದನೆ ತಿಳಿಸಲು 8296521805 ನಂಬರಿಗೆ ಒಂದು ಕರೆ ಮಾಡಿ..!


About The Author

Leave a Reply

You cannot copy content of this page

Scroll to Top