ಕಾವ್ಯ ಸಂಗಾತಿ
ಮಮತಾ ಜಾನೆ
“ಹಸಿರು ಕಾಯುವ ರೈತ”


ನೇಗಿಲು ಹಿಡಿದು ಬೆವರನು ಸುರಿಸಿ
ಮಣ್ಣಲಿ ಕನಸನು ಬಿತ್ತುವನು
ರಜೆಗಳ ಲೆಕ್ಕಿಸದ ರೈತ
ನಾಡಿಗೆ ಅನ್ನವ ನೀಡುವನು
ಮೌನದಲಿ ಕಾಯಕ ತೋರುತ
ದೇಶ ಸೇವೆಯ ಮಾಡುವನು
ಬಿತ್ತುವ ಬೀಜಕ್ಕೆ ಜೀವವ ತುಂಬುತ
ಭೂಮಿಯ ಹಸಿರನು ಕಾಯುವನು
ಶ್ರಮವನ್ನು ಹರಿಸುತ ರೈತ
ಬೆಳೆಯನು ಬೆಳೆದು ಅನ್ನವ ನೀಡುವನು
ದೇಶಕ್ಕೆ ಬೆನ್ನೆಲುಬು ಆಗಿರುವ ರೈತ
ಸರ್ವರಿಗೂ ಅನ್ನದಾತನು ಆಗಿರುವನು
ಮಮತಾ ಜಾನೆ



