ವಿಚಾರ ಸಂಗಾತಿ
ವನಜ ಮಹಾಲಿಂಗಯ್ಯ
“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”


ಹಿಂದಿನ ಕಾಲದಲ್ಲಿ ಈ ಜ್ಯೋತಿಷ್ಯಕ್ಕೆ ಈಗ ಕೊಡುವಷ್ಟು ಪ್ರಾಮುಖ್ಯತೆಯನ್ನು ಕೊಡತ್ತಿರಲಿಲ್ಲ. ಯಾಕೆಂದರೆ ಕಷ್ಟಪಟ್ಟು ದುಡಿಯೋದು ಹೊಟ್ಟೆತುಂಬ ತಿನ್ನೋದು ಕಣ್ತುಂಬ ನಿದ್ದೆ ಮಾಡೋದು ಅಷ್ಷೆ. ಕಲ್ಲನ್ನು ಜೋಡಿಸಿ ಮಣ್ಣು ಕಲಸಿ ಮೆತ್ತಿ ಮನೆ ಕಟ್ಟಿ, ಅದಕ್ಕೆ ಸುಣ್ಣ, ಕೆಂಪುಬಣ್ಣ (ಉರುಮಂಜು) ಬಳಿದು ಕೊಂಡು ಬಂಗಾರದ ಬದುಕು ಬದುಕಿದವರು ನಮ್ಮ ಹಿರಿಯರು. ಹಬ್ಬ, ಮದುವೆ ಗಳಿಗೆ ಸಂಬಂಧಿ ಕರೆಲ್ಲ ಕೂಡಿಕೊಂಡು ಅವರ ಸಂಭ್ರಮ ಹೇಳತೀರದು. ಆಗ ಮನಸ್ಸನ್ನು ಹಾಳುಮಾಡುವ ಈ ಟಿ ವಿ , ಮೊಬೈಲು, ಅಲ್ಲದೆ ಬೈಕು ಕಾರು ಇವ್ಯಾವು ಇರಲಿಲ್ಲ. ಅಂದು ಎತ್ತಿನ ಗಾಡಿ, ಕುದುರೆ ಸಾರೋಟ, ಸೈಕಲ್,ಇವ್ಯಾವು ಇಲ್ಲ ಅಂದ್ರೆ ಕಾಲ್ನಡಿಗೆ ಅಷ್ಟೇ. ಆದರೂ ಅಂದಿನಜನರೆಲ್ಲ ನೆಮ್ಮದಿಯಿಂದ ಸಮಾಧಾನದಿಂದ ಪ್ರೀತಿ ವಿಶ್ವಾಸ ನಂಬಿಕೆಯಿಂದ ಹೊಂದಾಣಿಕಯಿಂದ ಜೀವಿಸುತ್ತಿದ್ದರು.
ಎಲ್ಲವೂ ತನ್ನಷ್ಟಕ್ಕೆ ತಾನು ನಡೆಯುತ್ತಾ ಹೋಗುತ್ತಿತ್ತು. ಅಂದರೆ ಪ್ರಕೃತಿಯ ನಿಯಮಗಳನ್ನು ಪಾಲಿಸುತ್ತಾ ಜನ ಸೌಖ್ಯವಾಗಿ, ಖಷಿಯಿಂದ , ಹೊಂದಾಣಿಕೆಯಿಂದಬದುಕುತ್ತಿದ್ದರು. ಆಡಂಬರವಿಲ್ಲ, ಅತಿಯಾಸೆ ಇಲ್ಲ, ಅಸೂಯೆಯಿಲ್ಲ . ಕಂಪ್ಲೇಟಿಲ್ಲ , ಕೋರ್ಟು ಕಚೇರಿಗಳಿಲ್ಲ.

ಆದರೆ ಈಗ ವಿದ್ಯಾವಂತರು ಜಾಸ್ತಿಯಾಗಿ , ಅವರವರೇ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅಂದರೆ ಬದುಕಿನ ಅರ್ಥವೇ ಬದಲಾಗಿದೆ. ಎಲ್ಲವೂ ಕ್ಷಣಿಕ ಎನ್ನಿಸಿದೆ.ಕಾರಣ ಅವಸರದ ಅಪಾಯದ ಪಯಣ. ತಂತ್ರಜಾನದ ಮುಂದೆ ಯಾಂತ್ರಿಕ ಜೀವನ.10 ರಿಂದ 1 ಲಕ್ಷದವರೆಗಿನ ಅಂಗೈಯಲ್ಲಿರುವ ಮೊಬೈಲ್ ಎಲ್ಲವನ್ನು ಎಲ್ಲರನ್ನೂ ಬದಲಾಯಿಸಿದೆ. ಟಿ ವಿ ಧಾರಾವಾಹಿಗಳ ಅಬ್ಬರ. ಸಂಬಂಧಗಳ ದೂರ ತೀರ, ಎಲ್ಲವೂ ಆನ್ಲೈನ್, ಅಮ್ಮನ ಕೈರುಚಿಯಿಂದ ವಂಚಿತರಾಗಿ, ದುಡ್ಡೇ ದೊಡ್ಡಪ್ಪ ಅದಿಲ್ಲ ಅಂದರೆ ಬದುಕೇ ಇಲ್ಲಪ್ಪ ಅನ್ನುವ ಹಾಗೆ, ಬೇರೆ ಬೇರೆ ಊರು, ರಾಜ್ಯ, ದೇಶಗಳಿಗೆ ದುಡಿಯಲೆಂದು ಹೋದ ಮಕ್ಕಳು ತಂದೆ ತಾಯಿಯ ಸುಖಕ್ಕಲ್ಲ ಅವರ ಶವಕ್ಕು ಬರದಂತಹ ಪರಿಸ್ಥಿತಿಯಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದರೆ ಎಲ್ಲಿಗೋಯಿತು? ನಮ್ಮ ಜೀವನ? ಅದರ ನಡು ವೆ ಜ್ಯೋತಿಷ್ಯ, ವಾಸ್ತು ಅಂತ ಜನ ಮುಗಿಬಿದ್ದಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಎಲ್ಲಾ ನ್ಯೂಸ್ ಚಾನಲ್ಗಳಲ್ಲಿ ಬರುವ ಜ್ಯೋತಿಷಿಗಳು ಅವರ ಬದುಕೆ ಅದ್ವಾನಕ್ಕಿಟ್ಟಿರುತ್ತದೆ , ಅದರೆ ಅವರು ಎಲ್ಲರ ಬದುಕಿನ ಬಗ್ಗೆ ಹೇಳಲು ಕೂತಿರುತ್ತಾರೆ. ಅವರ ಹಿನ್ನೆಲೆ ಹೇಗಿದೆ, ಅವರಿಗೆ ಅವರ ಭವಿಷ್ಯದ ಬಗ್ಗೆಯೇ ಅವರಿಗೆ ಗೊತ್ತಿಲ್ಲ, ಇತ್ತೀಚೆಗೆ ನಡೆದ ಜ್ಯೊತಿಷಿಯ ಕೊಲೆಯನಂತರವಾದರು ,
ಟಿ ವಿ ಮಾಧ್ಯಮಗಳು ಅಂತಹ ಕಾರ್ಯಕ್ರಮಳಿಗೆ ಹಾಗೂ ಟಿವಿಗಳಲ್ಲಿ ಬರುವ ಕೆಲವು ಜಾಹೀರಾತುಗಳು ನಿಜಕ್ಕೂ ಮನೆ ಮಂದಿಯನ್ನು ಮುಜುಗರ ಪಡಿಸುತ್ತಿವೆ. ಅದೂ ಅಲ್ಲದೆ ಮಹಿಳೆರ ಒಳ ಉಡುಪುಗಳ ಜಾಹೀರಾತು ಗಳು ಹಾಗೂ ಪ್ಯಾಡ್ ಮತ್ತು IVF ಜಾಹೀರಾತು ಗಳು ನಿಜಕ್ಕೂ ಬೇಜಾರು ತರುತ್ತವೆ. ಹಾಗೆಯೇ ಕೆಲವು ರಿಯಾಲಿಟಿ ಷೋಗಳು ಡಬಲ್ ಮೀನಿಂಗ್ ಬಳಸುವುದು ಹಾಗೂ ಕೆಟ್ಟ ಕೆಟ್ಟ ದೃಶ್ಯ ಗಳನ್ನು ವೈಭವೀಕರಿಸಿ ತೋರಿಸುವುದು ನಿಜಕ್ಕೂ ಅಸಹ್ಯವಾಗುತ್ತಿದೆ.
ಇದಕ್ಕೆಲ್ಲ ಕಡಿವಾಣ ಹಾಕಬೇಕಿತ್ತು ಅಲ್ಲವೇ ? ಕಡಿವಾಣ ಹಾಕುವವರು ಯಾರು?
ವನಜ ಮಹಾಲಿಂಗಯ್ಯ



