ಕಾವ್ಯ ಸಂಗಾತಿ
ಲತಾ ಎ ಆರ್ ಬಾಳೆಹೊನ್ನೂರು
“ಸಂಕ್ರಾಂತಿ”


ಬಂದಿತೋ ಬಂದಿತು ಮೊದಲ ಹಬ್ಬ
ಸರಿಸಿ ಎಲ್ಲರ ಮನದ ಮಬ್ಬ
ಸವಿಯಲು ಕರೆಯಿತು ಸಿಹಿ ಕಬ್ಬ
ಒಟ್ಟಿಗೆ ಆಡೋಣ ಎತ್ತರದ ದಿಬ್ಬ
ದ್ವೇಷದ ಯೋಚನೆ ಎಂದಿಗೂ ಸಲ್ಲ
ಒಟ್ಟಿಗೆ ಸವಿಯೋಣ ಎಳ್ಳು ಬೆಲ್ಲ
ಸ್ನೇಹ ಸಂಪಾದಿಸೋಣ ಮೆಲ್ಲ ಮೆಲ್ಲ
ಪ್ರೀತಿಯಲಿ ಸಿಹಿ ಮಾತಾಡೋಣ ಎಲ್ಲಾ
ಉತ್ತರಾಯಣದ ಪುಣ್ಯಪರ್ವ ಕಾಲವಿದು
ಮಕರ ಸಂಕ್ರಮಣದ ಜ್ಯೋತಿಯಿದು.
ಸೂರ್ಯದೇವನ ಕರುಣೆ ನಮಗೆಂದು
ಮನುಕುಲದ ಉನ್ನತಿಗೆ ಸಹಕರಿಸೆಂದು
ಮಾನವರಲ್ಲಿ ತುಂಬಿರಲಿ ಪ್ರೀತಿ ಶಾಂತಿ
ಮನದಿಂದ ದೂರಗಲಿ ಕಲ್ಮಶದ ಬ್ರಾಂತಿ
ಸಾದಿಸಲು ಬೇಕಿದೆ ಸ್ವಲ್ಪ ಕ್ರಾಂತಿ
ಅದಕಾಗಿ ಬಂದಿಹುದು ಮಕರ ಸಂ…..ಕ್ರಾಂತಿ.
ದಬ್ಬಾಳಿಕೆ ಕಂಡರೆ ವಿರೋಧವಿರಲಿ
ಲಂಚದ ಅಧಿಕಾರಕ್ಕೆ ತಲೆ ಬಾಗದಿರಲಿ
ಪ್ರತಿ ಹೆಜ್ಜೆಯಲಿ ನಮ್ಮತನದ ದೃಢತನವಿರಲಿ
ದಿಟ್ಟತನದ ಬದುಕು ಎಂದೆಂದೂ ಸಾಗುತಿರಲಿ.
ಲತಾ ಎ ಆರ್ ಬಾಳೆಹೊನ್ನೂರು.



