ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನೊಳಗಿನ ನಿಶ್ಶಬ್ದವೇ
ನನಗೆ ಅರ್ಥವಾಗದೆ ಸಾಯುತ್ತಿದೆ;
ಇನ್ನು ಎದುರಿಗಿರುವವರ ಮೌನವನು
ನಾನೇಗೆ ತಾನೇ ಅರಿಯಲಿ?

ಹೇಗಾದರೂ ಮಾಡಿ ಈ ಮೌನಕ್ಕೆ
ಒಂದು ಪರಿಹಾರ ಕಂಡುಕೊಳ್ಳಬೇಕು;
ಜಗದ ಮಾತುಗಳೆಲ್ಲವೂ
ಬತ್ತಿ ಹೋಗುವ ಮುನ್ನವೇ
ಒಂದು ‘ನಿಶ್ಶಬ್ದರತ್ನಾಕರ’ವ ರೂಪಿಸಿಕೊಳ್ಳಬೇಕು.
ನಿಶ್ಶಬ್ದದ ಮರ್ಮಕ್ಕೆ ಸಾವಕಾಶವಾಗಿ
 ಟೀಕು-ಟಿಪ್ಪಣಿಗಳನ್ನು ಬರೆದಿಡಬೇಕು;

ಎದುರಿಗಿರುವವರ ಮೌನವನ್ನ
ಅವರ ಪಾಡಿಗೆ ಬಿಟ್ಟರೆ-
ಕನಿಷ್ಠ ಪಕ್ಷ, ಆಗಲಾದರೂ
ನನ್ನ ನಿಶ್ಶಬ್ದ
 ನನಗೆ ಅರ್ಥವಾಗಬಹುದೇನೋ!


About The Author

Leave a Reply

You cannot copy content of this page

Scroll to Top