ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 12 1904 ರಲ್ಲಿ ಜನಿಸಿದರು. ಇವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವತಂತ್ರಕ್ಕಾಗಿ ಅವಿರತವಾಗಿ ಹೋರಾಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಮತ್ತು ಪ್ರಮಾಣಿಕತೆ ಅವರ ಜೀವನದುದ್ದಕ್ಕೂ ಎದ್ದು ಕಾಣಿಸುತ್ತದೆ. ರೈಲ್ವೆ ಸಚಿವರಾಗಿದ್ದಾಗ ಸಂಭವಿಸಿದ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು, ಪ್ರಧಾನಿಯಾದ ನಂತರ ಕಡಿಮೆ ವೇತನಕ್ಕೆ ತೃಪ್ತಿ ಪಟ್ಟಿ ಕೊಂಡು ಕಠಿಣ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ್ದು ಇವರ ಸರಳತೆಗೆ ಉದಾಹರಣೆಗಳು ಜಾತಿ ಪದ್ಧತಿಯನ್ನು ವಿರೋಧಿಸಿ ತಮ್ಮ ಹೆಸರಿನಲ್ಲಿದ್ದ ಜಾತಿ ಸೂಚಕವ ಪದವನ್ನು ತೆರೆದಿದ್ದು ಅವರ ಸರಳ ಮನೋಭಾವವನ್ನು ತೋರಿಸುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆಯ ಉದಾಹರಣೆಗಳು

. *ನೈತಿಕ ಹೊಣೆಗಾರಿಕೆ:* ರೈಲ್ವೆ ಸಚಿವರಾಗಿದ್ದಾಗ ಕಲ್ಲೇಕುಚಿ ರೈಲು ದುರಂತ ಸಂಭವಿಸಿ ಅನೇಕ ಜನರು ಸಾವನ್ನಪ್ಪಿದಾಗ ಅದಕ್ಕೆ ನೈತಿಕಹೊಣೆ ಬರಲು ಅವರ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

 *ಆರ್ಥಿಕ ಸರಳತೆ* ಪ್ರಧಾನಿಯಾಗಿದ್ದರೂ ಅವರು ಕೇವಲ 400 ತಿಂಗಳಿಗೆ ವೇತನ ಪಡೆಯುತ್ತಿದ್ದರು ತಮ್ಮ ಕುಟುಂಬದ ನಿರ್ವಹನಿಗೆ ಇದು ಸಾಕು ಎಂದು ಅವರು ಹೇಳಿದ್ದರು. ಅವರ ದೊಡ್ಡ ಮನೆ ನಿರ್ಮಾಣ ಮಾಡದೆ ತಮ್ಮ ಹಳೆಯ ವಾಸಸ್ಥಾನದಲ್ಲಿ ಮುಂದುವರೆದರು.

ಜಾತಿ ಪದ್ಧತಿ ವಿರೋಧ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕ ಪದವನ್ನು ಅವರು ತೊರೆದರು. ಇದರ ಬದಲಾಗಿ ಕಾಶಿ ವಿದ್ಯಾರ್ಥಿದಲ್ಲಿ ಪದವಿ ಪಡೆದ ನಂತರ ಸಿಕ್ಕ ಶಾಸ್ತ್ರ ಎಂಬ ಬಿರುದನ್ನು ಅವರು ಬಳಸಲು ಪ್ರಾರಂಭಿಸಿದರು.

ಜನರೊಂದಿಗೆ ನಿಕಟ ಸಂಬಂಧ ಆಹಾರ ಕೊರತೆಯ ಸಂದರ್ಭದಲ್ಲಿ ಅವರು ಜನರಿಗೆ ವಾರಕ್ಕೆ ಒಂದು ದಿನ ಉಪವಾಸ ಮಾಡಲು ಕರೆ ನೀಡಿದರು. ಇದು ಅವರ ಸರಳ ಜೀವನ ಶೈಲಿ ಮತ್ತು ಬದ್ಧತೆಯನ್ನು ತೋರಿಸುತ್ತದೆ.

ಜೈ ಜವಾನ್ ಜೈ ಕಿಸಾನ್

ಘೋಷಣೆ “1965ರ ಭಾರತ್ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದರು. ಇದು ದೇಶದ ಸೈನಿಕರು ಮತ್ತು ರೈತರ ಶ್ರಮವನ್ನು ಮತ್ತು ದೇಶದ ಏಕತೆಯನ್ನು ಸಾರಿತು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಗಲ್ ಸೈರಾಂನಲ್ಲಿ ಜನಿಸಿದರು ಅವರು ಭಾರತೀಯ ಹೋರಾಟದಲ್ಲಿ ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾಗಲು 1921 ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ತಮ್ಮ ಅಧ್ಯಯನವನ್ನು ಸ್ಥಗಿತಗೊಳಿಸಿದರು. 1926ರಲ್ಲಿ ಕಾಶಿ ವಿದ್ಯಾಪೀಠದಿಂದ ಪದವಿ ಪಡೆದ ನಂತರ ಅವರಿಗೆ ಶಾಸ್ತ್ರಿ ಎಂಬ ಬಿರುದು ನೀಡಲಾಯಿತು. ಸ್ವತಂತ್ರ ಹೋರಾಟಗಾರರಾಗಿ ಅನೇಕ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರು. ಸ್ವತಂತ್ರ ನಂತರ ಅವರು ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದರು. ಮತ್ತು ಅರಿಯಲೂರ್ ರೈಲ್ವೆ ಅಪಘಾತ ಜವಾಬ್ದಾರಿಯನ್ನು ತೆಗೆದುಕೊಂಡು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು 1964 ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾದರು.

*ಜೀವನದ ಪ್ರಮುಖ* *ಘಟ್ಟಗಳು*

ಆರಂಭಿಕ ಜೀವನ ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಘಲ್ ರಾಯನಲ್ಲಿ ಜನಿಸಿದರು. ಅವರ ತಂದೆ ಶಾರದಾ ಪ್ರಸಾದ್ ಶ್ರೀವಾಸ್ತವ್ ಮತ್ತು ತಾಯಿ ರಾಮ ಧೂಲಾರಿ ದೇವಿ ಆರು ತಿಂಗಳು ಮಗುವಾಗಿದ್ದಾಗ ತಂದೆ ನಿಧನರಾದರು.

ಸ್ವತಂತ್ರ ಚಳುವಳಿ 1921 ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡರು ಅವರು 1926 ರಲ್ಲಿ ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಪದವಿಯನ್ನು ಪಡೆದರು. ಸ್ವತಂತ್ರ ಹೋರಾಟದಲ್ಲಿ ಹಲವಾರು ಬಾರಿ ಜೈಲು ಶಿಕ್ಷೆ ಅನುಭವಿಸಿದರು. 1930ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎರಡುವರೆ ವರ್ಷ ಜೈಲು ಸೇರಿದರು.

ರಾಜಕೀಯ ವೃತ್ತಿ 1937ರಲ್ಲಿ ಉತ್ತರ ಪ್ರದೇಶದ ಸಂಸದೀಯ ಮಂಡಳಿಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸ್ವತಂತ್ರದ ನಂತರ ಅವರು ಉತ್ತರ ಪ್ರದೇಶದ ಪೊಲೀಸ್ ಸಚಿವರಾಗಿ ನೇಮಕಗೊಂಡರು. ಮತ್ತು ಗಲಭೆ ಕೋರರನ್ನು ಚದುರಿಸಲು ಲಾಠಿಗಳ ಬದಲಿಗೆ ನೀರಿನ ಫಿರಂಗಿಗಳನ್ನು ಬಳಸಲು ಸೂಚಿಸಿದರು. 1956 ರಲ್ಲಿ ಅರಿಯಲೂರ್ ರೈಲು ಗಾತ್ರದ ಜವಾಬ್ದಾರಿಯನ್ನು ಹೊತ್ತು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು.

ಪ್ರಧಾನ ಮಂತ್ರಿ 1964ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾಗಲು ಅವರು ತಮ್ಮ ಸರಳತೆ ನೈತಿಕತೆ ಮತ್ತು ಆಂತರಿಕ ಶಕ್ತಿಗಾಗಿ ಹೆಸರುವಾಸಿಯಾಗಿದ್ದರು. “ಜೈ ಜವಾನ್ ಜೈ ಕಿಸಾನ್” ಎಂಬ ಅವರ ಘೋಷಣೆ ಕೃಷಿಕರನ್ನು ಮತ್ತು ಸೈನಿಕರನ್ನು ಬೆಂಬಲಿಸುತ್ತದೆ.
 ನಿಧನ 1966 ರಲ್ಲಿ ತಾಸ್ಕೆಂಟ್ ನಲ್ಲಿ ನಿಧನರಾದರು ಅವರ ಅಕಾಲಿಕ ಮರಣ ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತು.


About The Author

1 thought on ““ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು”ವಿಜಯಲಕ್ಷ್ಮಿ ಹಂಗರಗಿ”

Leave a Reply

You cannot copy content of this page

Scroll to Top