ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಭಾರತದ ಮಹಿಳಾ ಮುಖ್ಯಮಂತ್ರಿಗಳು,ಸುರೇಖಾ ರಾಾಠೋಡ್

ಅಂಕಣ ಸಂಗಾತಿ ಭಾರತದ ಮಹಿಳಾ ಮುಖ್ಯಮಂತ್ರಿಗಳು, ಸುರೇಖಾ ರಾಾಠೋಡ್ ಮಾಯಾವತಿ ಭಾರತದ ಮೊದಲ ಮಹಿಳಾದಲಿತ ಮಂತ್ರಿ ಮಾಯಾವತಿ(ಆಡಳಿತ ಅವಧಿ ೭ ವರ್ಷ ೫ದಿನಗಳು) ಇವರು ಜನವರಿ ೧೫, ೧೯೫೬ ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಂದೆ ಪ್ರಭು ದಾಸ. ತಂದೆ ಅಂಚೆ ಕಛೇರಿ ಉದ್ಯೋಗಿಯಾಗಿದ್ದರು. ಇವರ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಕಳುಹಿಸಿದರೆ ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಮಾಯಾವತಿಯವರು ೧೯೭೫ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ವಿಭಾಗದಿಂದ ಎಲ್‌ಎಲ್‌ಬಿ ಪದವಿ ಪಡೆದರು. ವಿಎಂಎಲ್‌ಜಿ ಕಾಲೇಜಿನಿಂದ ಬಿಎಡ್ ಪದವಿಯನ್ನು ಪಡೆದರು. ನಂತರ ಇವರು ಕೆಲ ದಿನಗಳವರೆ ಶಿಕ್ಷಕಿಯಾಗಿ ಕೆಲಸ ಮಾಡಿದರು. ಹಾಗೆಯೆ ಐಎಎಸ್ ಪರೀಕ್ಷೆ ತಯಾರಿ ನಡೆಸುವಾಗ ೧೯೭೭ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ರಾಜಕಾರಣಿಯಾದ ಕಾನ್ಶಿರಾಮ್ ಅವರು ಇವರ ಕುಟುಂಬಕ್ಕೆ ಭೇಟಿ ನೀಡಿದರು. ಅಜಯ್ ಬೋಸ್ ಅವರ ಬಯೋಗ್ರಾಫಿಯಲ್ಲಿ ಮಾಯಾವತಿಯವರಿಗೆ ರಾಮ್ ಅವರು ಒಂದು ಮಾತನ್ನು ಹೇಳುತ್ತಾರೆ ‘ನಾನು ನಿಮಗೆ ಒಂದು ದಿನ ಇಷ್ಟು ದೊಡ್ಡ ನಾಯಕಿಯಾನ್ನಾಗಿ ಮಾಡುತ್ತೇನೆಂದರೆ ನಿಮ್ಮ ಆದೇಶಗಳಿಗಾಗಿ ಒಂದಲ್ಲ ಸಾಲುಗಟ್ಟಲೇ ಐಎಎಸ್ ಅಧಿಕಾರಿಗಳು ಕಾಯುತ್ತಾರೆಂದು’. ೧೯೮೪ರಲ್ಲಿ ಕಾನ್ಶಿರಾಮ್ ಅವರು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದಾಗ ಮಾಯಾವತಿಯವರಿಗೆ ಸದಸ್ಯರನ್ನಾಗಿ ಸೇರಿಸಿಕೊಂಡರು. ಹೀಗೆ ಮಾಯಾವತಿಯವರು ರಾಜಕಿಯವನ್ನು ಪ್ರವೇಶ ಪಡೆದರು. ಇವರು ಮೊದಲ ಬಾರಿಗೆ ೧೯೮೯ರಲ್ಲಿ ಸಂಸತ್ತಿಗೆ ಆಯ್ಕೆಯಾದರು. ಮಾಯಾವತಿಯವರು ಡಾ. ಬಾಬಾ ಸಾಹೇಬ್ ಅಂಬೆಡ್ಕರ್ ಅವರ ವಿಚಾರಧಾರೆಗಳಿಂದ ತುಂಬಾ ಪ್ರಭಾವಿತರಾಗಿದ್ದವರು. ಇವರು ತಮ್ಮ ಅಧಿಕಾರವಧಿಯಲ್ಲಿ ದಲಿತರ ಪರವಾಗಿ ದಮನಿತರ ಪರವಾಗಿ ಅನೇಕ ಕೆಲಸಗಳನ್ನು ಮಾಡಿದರು. ಜನರು ಇವರನ್ನು ಸಹೋದರಿ(ಬೆಹೆನಜಿ) ಎಂದು ಕರೆಯುತ್ತಿದ್ದರು. ‘ಬೆಹೆನಜಿ ತುಮ್ ಸಂಘರ್ಷ ಕರೋ, ಹಮ್ ತುಮಾರೇ ಸಾಥ್ ಹೈ”(ಸಹೋದರಿ ನಿಮ್ಮ ಹೋರಾಟಗೊಂದಿಗೆ ಮುಂದುವರೆಯಿರಿ, ನಾವು ನಿಮ್ಮೊಂದಿಗೆ ಇದ್ದೇವೆ) ಎಂದು ಹೇಳುತ್ತಿದ್ದರು. ೧೯೮೪ರಲ್ಲಿ ನಡೆದ ತನ್ನ ಮೊದಲ ಚುನಾವಣಾ ಪ್ರಚಾರದಲ್ಲಿ ಬಿಎಸ್‌ಪಿ ಮಾಯಾವತಿಯವರನ್ನು ಮುಜಫರ್ ನಗರ ಜಿಲ್ಲೆಯ ಕೈರಾನಾ ಲೋಕಸಭಾ ಸ್ಥಾನಕ್ಕೆ, ೧೯೮೫ರಲ್ಲಿ ಬಿಜ್ನೋರ್‌ನಿಂದ ಮತ್ತು ೧೯೮೭ರಲ್ಲಿ ಹರಿದ್ವಾರದಿಂದ ಕಣಕ್ಕಿಳಿಸದರು. ಇವರು ೧೯೮೯ರಲ್ಲಿ ಬಿಜ್ನೋರ್‌ನಿಂದ ಪ್ರತಿನಿಧಿಯಾಗಿ ಆಯ್ಕೆಯಾದರು.ಮಾಯಾವತಿಯವರು ಮೊದಲ ಬಾರಿಗೆ ೧೯೯೪ರಲ್ಲಿ ಉತ್ತರ ಪ್ರದೇಶದ ರಾಜ್ಯಸಭೆಗೆ ಆಯ್ಕೆಯಾದರು. ೧೯೯೫ರಲ್ಲಿ ಇವರು ತಮ್ಮ ಪಕ್ಷದ ಮುಖ್ಯಸ್ಥರಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು. ಇವರು ಅತ್ಯಂತ ಕಿರಿಯ ಮತ್ತು ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿಯಾದರು. ೧೯೯೬ರಲ್ಲಿ ಅವರು ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ೧೯೯೭ರಲ್ಲಿ ಎರಡನೆ ಮತ್ತು ಮೂರನೇ ಅವಧಿಗೆ ೨೦೦೨ ರಿಂದ ೨೦೦೩ವರೆಗೆ ಭಾರತೀಯ ಜನತಾ ಪಕ್ಷದೊಂದಿಗಿನ ಒಕ್ಕೂಟದಲ್ಲಿ ಮತ್ತೆ ಮುಖ್ಯ ಮಂತ್ರಿಯಾದರು. ಮತ್ತೆ ೨೦೦೭ರ ಮೇ ೧೩ರಂದು ನಾಲ್ಕನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.೨೦೦೧ರಲ್ಲಿ ರಾಮ್ ಅವರು ಪಕ್ಷದ ನಾಯಕತ್ವದ ಉತ್ತರಾಧಿಕಾರಿಯಾಗಿ ಇವರನ್ನು ಘೋಷಿಸಿದರು. ೨೦೦೩ ರಂದು ಇವರು ಮೊದಲ ಬಾರಿಗೆ ಬಿಎಸ್‌ಪಿಗೆ ರಾಷ್ಟಿçÃಯ ಅಧ್ಯಕ್ಷರಾಗಿ ಆಯ್ಕೆಯಾದರು. ೨೦೦೬ರಲ್ಲಿ ಮತ್ತೆ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೨೦೧೪ ರಲ್ಲಿ ಮೂರನೇ ಬಾರಿ ಮತ್ತು ೨೦೧೯ರಲ್ಲಿ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೧೯೯೯ ರಿಂದ ೨೦೦೨ ೧೩ನೇ ಲೋಕಸಭೆಯಲ್ಲಿ ಅಕ್ಬರ್‌ಪುರದಿಂದ ಸಂಸದ ಸದಸ್ಯರಾದರು. ೨೦೦೭ ರಿಂದ ೨೦೧೨ವರೆಗೆ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಎಂಎಲ್‌ಸಿಯಾಗಿ ಕಾರ್ಯನಿರ್ವಹಿಸಿದರು. ೨೦೧೨ ರಿಂದ ೨೦೧೭ರ ವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಯ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಇವರ ಕುರಿತು ಸಾಹಿತ್ಯ ಕೂಡ ರಚನೆಯಾಗಿವೆ. ಅವುಗಳೆಂದರೆ ‘ಐರನ್ ಲೇಡಿ’, ‘ಮೇರೆ ಸಂಘರ್ಷಮೈ ಜೀವನ ಏವಂ ಬಹುಜನ ಚಳುವಳಿ ಕಾ ಸಫರ್ನಾಮಾ’, ‘ಬೆಹೆಂಜಿ’. ಇವರಿಗೆ ಅನೇಕ ಪ್ರಶಸ್ತಿಗಳು ದೊರತಿವೆ. ಅವುಗಳೆಂದರೆ ೨೦೦೩ರಲ್ಲಿ ಯುನಿಸ್ಕೋ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ರೋಟರಿ ಇಂಟರ್ನ್ಯಾಷನಲ್ ಪಾಲ್ ಹ್ಯಾರಿಸ್ ಫೆಲೋ ಪ್ರಶಸ್ತಿಯನ್ನು ನೀಡಿತು. ರಾಜರ್ಷಿ ಶಾಹು ಸ್ಮಾರಕ ಟ್ರಸ್ಟ್ನಿಂದ ರಾಜರ್ಷಿ ಶಾಹು ಪ್ರಶಸ್ತಿಯನ್ನು ನೀಡಿದೆ. ೨೦೦೮ರಲ್ಲಿ ಪೋರ್ಬ್ಸ್ ವಿಶ್ವದ ೧೦೦ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಮಾಯಾವತಿಯವರು ೫೯ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೨೦೦೭ರಲ್ಲಿ ನ್ಯೂಸ್‌ವೀಕ್‌ನ ಉನ್ನತ ಮಹಿಳಾ ಸಾಧಕರ ಪಟ್ಟಿಯಲ್ಲಿ ಕೂಡ ಇವರು ಸ್ಥಾನ ಪಡೆದರು. ೨೦೦೭ರಲ್ಲಿ ಟೈಮ್ ನಿಯತಕಾಲಿಕೆಯು ಮಾಯಾವತಿಯವರನ್ನು ಭಾರತದ ೧೫ ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ಹೆಸರಿಸಿತು. ಸುರೇಖಾ ರಾಠೋಡ್

ಭಾರತದ ಮಹಿಳಾ ಮುಖ್ಯಮಂತ್ರಿಗಳು,ಸುರೇಖಾ ರಾಾಠೋಡ್ Read Post »

ಕಾವ್ಯಯಾನ

ಅನುರಾಧಾ ಶಿವಪ್ರಕಾಶ್ ಅವರ ಕವಿತೆ, “ಆಂತರ್ಯ”

ಕಾವ್ಯ ಸಂಗಾತಿ ಅನುರಾಧಾ ಶಿವಪ್ರಕಾಶ್ “ಆಂತರ್ಯ” ಅರಿಯಲಾರೆನು ನಿನ್ನ ಮನವನುತೆರೆದು ತೋರೆಯ ಆಂತರ್ಯವಭಾವಬಂಧಕೆ ತೊಡಕು ನೀಡಲುಕಾಣಲಾರೆನು ಸೌಂದರ್ಯವ/೧/ ಎದೆಯ ಗುಡಿಯಲಿ ಇನಿತು ಪ್ರೀತಿಯಬಯಸಿ ಬಂದಿಹೆ ನಲಿಯುತವಿಧಿಯ ಆಟಕೆ ಮುರುಟಿ ಹೋಯಿತೆಮನವು ನಲುಗಿತು ಮರುಗುತ/೨/ ಮಾತು ನಗುವನು ನುಂಗಿ ಹಾಕುವಸಿಡಿಲ ಭರವನು ತಾಳೆನುಕುಳಿತು ಕಲೆತು ಬೆರತು ಉಂಡಿಹಸಿಹಿಯ ಎಂದೂ ಮರೆಯೆನು/೩/ ಬದುಕ ಪಥದಲಿ ಕವಲು ದಾರಿಯಎಣಿಸಬಲ್ಲೆವೇ ಈ ಕ್ಷಣಹಾದಿ ಸವೆಸಲು ಪಾಠ ಹಲವಿದೆಕಲಿಯ ಬೇಕಿದೆ ಪ್ರತಿಕ್ಷಣ/೪/ ಮೌನದೊಳಗಿನ ಭಾವವೆಲ್ಲವುಚಿಪ್ಪಿನೊಳಗಿನ ಮುತ್ತದುಕಲ್ಲು ಬಂಡೆಯ ತೆರದಿ ಬಾಳಲುಚಿಂತೆ ಎಂದೂ ಮುತ್ತದು /೫/ ಅನುರಾಧಾ ಶಿವಪ್ರಕಾಶ್

ಅನುರಾಧಾ ಶಿವಪ್ರಕಾಶ್ ಅವರ ಕವಿತೆ, “ಆಂತರ್ಯ” Read Post »

ಇತರೆ

“ಹಾಸ್ಯ ಕವಿ ಬೀಚಿ…ಸವ್ಯಸಾಚಿ” ಜಯಲಕ್ಷ್ಮಿ  ಕೆ

ವ್ಯಕ್ತಿ ಸಂಗಾತಿ ಜಯಲಕ್ಷ್ಮಿ  ಕೆ “ಹಾಸ್ಯ ಕವಿ ಬೀಚಿ…ಸವ್ಯಸಾಚಿ” “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೂ ಸ್ವಾಗತ ” ಇದು ತಮ್ಮ ಬಯೋಗ್ರಫಿಯಲ್ಲಿ ಬೀಚಿಯವರು ಬರೆದ ಮಾತು. “ಯಾರೊಬ್ಬನ ಬಾಳು ಕೂಡ ಬದುಕಲಿಕ್ಕೇ ಆಗದಷ್ಟು ಕಠಿಣವೂ ಅಲ್ಲ,  ಲೀಲಾಜಾಲವಾಗಿ ಸಾಗುವ ಸುಲಲಿತ ಯಾನವೂ ಅಲ್ಲ. ಏನೇ ಕಷ್ಟ ಬಂದರೂ ನಾವು ವಾರದಲ್ಲಿ ಮೂರು ದಿನಗಳಾದರೂ ನಗುತ್ತಾ ಇರಬೇಕು. ಅದು ನಿನ್ನೆ ಇವತ್ತು ಮತ್ತು ನಾಳೆ”. ಹೀಗೆ ಹೇಳುತ್ತಲೇ ಹಾಸ್ಯ ಬರಹದ ಮೂಲಕ ಜನರ ಬದುಕಿನಲ್ಲಿ  ಸದಾ ಭರವಸೆ ತುಂಬುತ್ತಿದ್ದ ಹಾಸ್ಯ ಕವಿ ಬೀಚಿಯವರು ಮರೆಯಾಗಿ ಇಂದಿಗೆ 45 ವರ್ಷಗಳು ಉರುಳಿವೆ. ಆದರೆ ಅವರ ನವಿರಾದ ಹಾಸ್ಯ ನಮ್ಮೆಲ್ಲರ ಮನದಲ್ಲಿ ಜೀವನೋತ್ಸಾಹ ತುಂಬುತ್ತಾ ಸದಾ ಜೀವಂತವಾಗಿದೆ. ಹಾಸ್ಯ ಎಂದರೆ ಬೀಚಿ, ಬೀಚಿ ಎಂದರೆ ಹಾಸ್ಯ. ಒಂದೇ ನಾಣ್ಯದ ಎರಡು ಮುಖಗಳು!! 1913ರಲ್ಲಿ  ಹರಪನಹಳ್ಳಿಯ ಶ್ರೀನಿವಾಸರಾವ್ ಮತ್ತು ಭಾರತಮ್ಮನವರ ಪುತ್ರನಾಗಿ ಜನಿಸಿದ ರಾಯಸಂ  ಭೀಮಸೇನರಾವ್ ‘ಬೀಚಿ’ ಎಂದೇ ಪ್ರಸಿದ್ಧರು. “ಹಾಸ್ಯ ಬ್ರಹ್ಮ” ಬೀಚಿಯವರು  ಕನ್ನಡದ ಮೊದಲ ಹಾಸ್ಯ ಕವಿಯಲ್ಲದಿದ್ದರೂ ಹಾಸ್ಯವನ್ನೇ ತಮ್ಮ ಕೃತಿಗಳ  ಪ್ರಮುಖ ಮಾಧ್ಯಮವನ್ನಾಗಿಸಿಕೊಂಡ ಕವಿಗಳಲ್ಲಿ ಇವರು ಮೊದಲಿಗರು. ನಗುವಿನ ಬಗೆಗಿನ ಅವರ ಸಿದ್ಧಾಂತ ಬಹಳ ಶುದ್ಧವಾದದ್ದು. ನಗುವಿನ ಸಂದರ್ಭಗಳಲ್ಲಿ ನಗು ಸಹಜವಾಗಿ ಹೊರ ಹೊಮ್ಮುತ್ತದೆ. ಆದರೆ ನೋವಿನ ಸನ್ನಿವೇಶಗಳಲ್ಲಿ ಕೂಡ ಮೊಗದಲ್ಲಿ ನಗುವನ್ನು ಅರಳಿಸುವುದು  ಕಷ್ಟದ ಮಾತು. ಆದರೆ ಆ ಶಕ್ತಿ ಬೀಚಿಯವರ ಸಾಹಿತ್ಯಕ್ಕೆ ಇದೆ. ಸರ್ವರ ಸಮ್ಮುಖದಲ್ಲಿಯೂ ಹಂಚಿಕೊಳ್ಳಬಹುದಾದ ನವಿರಾದ ಹಾಸ್ಯದ ತುಣುಕುಗಳು ಸಾಹಿತ್ಯ ಲೋಕಕ್ಕೆ ಇವರಿತ್ತ ಅಪೂರ್ವ ಕೊಡುಗೆ. ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡ ಬೀಚಿಯವರು ತಮ್ಮ ಆರನೇ ವಯಸ್ಸಿನಲ್ಲಿ ತಾಯಿಯನ್ನು ಕೂಡ ಕಳೆದುಕೊಂಡರು. ಅವರೇ ಹೇಳುವಂತೆ ” ಬಡತನವೋ ಸಿರಿತನವೋ ಭೂಮಿಗೆ ಬಂದ ಮಗು ಆಯುಸ್ಸಿದ್ದರೆ  ಯಾರದೋ ಆಸರೆಯಲ್ಲಿ  ಬೆಳೆದೇ ಬೆಳೆಯುತ್ತದೆ. ಹಾಗೆ ಅವರಿಗೂ ಆಸರೆ ಸಿಕ್ಕಿತು. ಅದು ಅವರ ಸೋದರ ಮಾವನ ಆಸರೆ. ಬಡತನದಲ್ಲಿಯೂ ಅತ್ತೆ ಮಾವ ಅಕ್ಕರೆಯ ಆರೈಕೆಗೇನೂ ಕಡಿಮೆ ಮಾಡಲಿಲ್ಲ. ಅವರು ಓದಿದ್ದು ತೆಲುಗುಮಯವಾಗಿದ್ದ ಅಂದಿನ ಬಳ್ಳಾರಿಯಲ್ಲಿ. ಅಲ್ಲಿ ಒಂದೆರಡು ವರ್ಷ ಕನ್ನಡ ಕಲಿತದ್ದು ಬಿಟ್ಟರೆ ಉಳಿದಂತೆ ಶಿಕ್ಷಣಾಭ್ಯಾಸವೆಲ್ಲ ನಡೆದದ್ದು ಇಂಗ್ಲಿಷ್ ಮತ್ತು ತೆಲುಗು ಭಾಷೆಯಲ್ಲಿ. ಆದರೆ ಅಪ್ರತಿಮ ಸಾಹಿತ್ಯ ಸೃಷ್ಟಿಸಿ  ಹೆಸರು ಗಳಿಸಿದ್ದು ಮಾತ್ರ ಕನ್ನಡದಲ್ಲಿ!! ಬಡತನದಲ್ಲಿಯೇ ಸೀತಾಬಾಯಿಯವರೊಡಗೂಡಿ  ಬಾಳ ದೋಣಿಯನ್ನು ಸಾಗಿಸಿದ ಭೀಮಸೇನರಾವ್ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನೂ ಚೆನ್ನಾಗಿ ಓದಿಸಿದರು. ಆದರೆ ಪದವಿ ಮುಗಿಸಿದ ಕಿರಿಯ ಮಗ ರವೀಂದ್ರನನ್ನು ಟೈಫಾಯಿಡ್ ಜ್ವರ ಬಲಿ ತೆಗೆದುಕೊಂಡುಬಿಟ್ಟಿತ್ತು. “ಕತ್ತಲಿನ ಬಸಿರಲ್ಲಿ ಬೆಳಕು ಹುಟ್ಟಿತು: ಬೆಳಕಿನ ಫಲವೂ ಮತ್ತೆ ಕತ್ತಲು  “… ಬೀಚಿ ದಂಪತಿಗಳಿಗೆ ಅತೀವ ವೇದನೆಯನ್ನು ತಂದೊಡ್ಡಿದ ಘಟನೆ ಇದು. ಬೀಚಿಯವರ ಮೊದಲ ಲೇಖನ ಪ್ರಕಟವಾದದ್ದು ಪ್ರಜಾವಾಣಿಯಲ್ಲಿ. ಅ. ನ ಕೃ ರವರ ಹಾಸ್ಯರಾಗ ಇವರ ಮೇಲೆ  ಪರಿಣಾಮ ಬೀರಿದ ಮೊದಲ ಕೃತಿ. ‘ ಗರುಡ ಪುರಾಣ ‘, ‘ ನಾನೇ ಸತ್ತಾಗ ‘, ‘ ರೇಡಿಯೋ ನಾಟಕಗಳು ‘ ಮೊದಲಾದ ಹಲವಾರು ಅಪೂರ್ವ ಕೃತಿಗಳನ್ನು ಇವರು ಬರೆದಿದ್ದಾರೆ. ” ನಿನ್ನಂತೆ ನೀನಾಗು, ನಿನ್ನ ನೀ ಅರಿ ಮೊದಲುಚೆನ್ನೆಂದು ದೊಡ್ಡವರ ಅನುಕರಿಸಬೇಡ  ಏನಾಯ್ತು ಮರಿ ಕತ್ತೆ?ಚೆಲುವಿತ್ತು, ಮುದ್ದಿತ್ತು,ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ್ಮ… “ ಯಾವುದೇ ಬರಹಗಾರನ ವೈಯಕ್ತಿಕ ಪ್ರತಿಭೆ  ಅನುಕರಣೆಯ ಮರಳಿನಲ್ಲಿ ಹೂತು ಹೋಗಬಾರದು ಎನ್ನುವುದು ಅವರ ನಿಲುವಾಗಿತ್ತು. ‘ರೈತವಾಣಿ’ ವಾರಪತ್ರಿಕೆಯಲ್ಲಿ ನಿರಂತರವಾಗಿ   ‘ ಬೇವಿನಕಟ್ಟೆ ತಿಮ್ಮ ‘ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಬರೆಯುತ್ತಿದ್ದ ಇವರ ಬರಹಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿವೆ. ‘ತಿಂಮ್ಮನ ತಲೆ ‘ ಹಲವು ಬಾರಿ ಮುದ್ರಣ  ಕಂಡಿದೆ. ‘ದಾಸ ಕೂಟ ‘ ಕನ್ನಡಕ್ಕೆ ಇವರು ನೀಡಿದ ಮೊತ್ತ ಮೊದಲ ಹಾಸ್ಯ ಪ್ರಧಾನ ಕಾದಂಬರಿ. ” ಮಗಳನ್ನು ಬೆಂಗಳೂರಿಗೆ ಕೊಟ್ಟಿದ್ದೇವೆ “.. ಎಂದವರಿಗೆ, ಹಾಂ!!! ಇಡೀ ಬೆಂಗಳೂರಿಗಾ!!! ” ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ ಬೀಚಿಯವರಿಗೆ ” ಮಗಳನ್ನಾಗಲೀ, ಮತವನ್ನಾಗಲಿ, ಅಯೋಗ್ಯರಿಗೆ ಕೊಡಬಾರದು ಎನ್ನುವ ಪ್ರಬುದ್ಧ ಚಿಂತನೆ ಇತ್ತು. ಇವರ ಹಲವಾರು ಚುಟುಕುಗಳಲ್ಲಿ, ಹನಿ ಕವನಗಳಲ್ಲಿ, ಮೇಲ್ನೋಟಕ್ಕೆ ಹಾಸ್ಯ ಕಂಡರೂ, ಒಳಾರ್ಥದಲ್ಲಿ ಸಮಾಜದ ಸ್ಥಿತಿಗತಿಗಳ ಬಗೆಗಿನ ಟೀಕೆಯಿದೆ, ಸಮಾಜಮುಖಿ ಚಿಂತನೆಗಳಿವೆ. ” ಮಗುವಿಗೆ ಅಳುಹೆಣ್ಣಿಗೆ ನಗುಅವಿವೇಕಿಗೆ ಧೈರ್ಯಅಪ್ರಾಮಾಣಿಕನಿಗೆ ರಾಜಕಾರಣಅತ್ಯುತ್ತಮ ಆಯುಧಗಳು  ”  ಎಂದು ನಿರ್ಭೀತಿಯಿಂದ ಬರೆದವರು ಬೀಚಿ. ‘ ಕೋಳಿ ರುಚಿ ಕಂಡವನು  ಹೋಳಿಗೆ ತಿನ್ನಲಾರ. ಹಾಗೆಯೇ ಸಾರ್ವಜನಿಕ ಹಣದ ರುಚಿ ಕಂಡವನು ದುಡಿದು ತಿನ್ನಲಾರ  ಎನ್ನುವ ಬೀಚಿ  ಸಮಾಜದಲ್ಲಿ ನಡೆಯುವ ಅನ್ಯಾಯ ಭ್ರಷ್ಟಾಚಾರ ವಂಚನೆ ಎಲ್ಲದರ  ಬಗೆಗಿನ ತಮ್ಮ ನಿಲುವನ್ನು  ಕೇವಲ ನಾಲ್ಕು – ಆರು ಸಾಲುಗಳಲ್ಲಿಯೇ ಸ್ಪಷ್ಟಪಡಿಸಬಲ್ಲ, ಅನ್ಯಾಯವನ್ನು ಪ್ರತಿಭಟಿಸಬಲ್ಲ ಅಪ್ರತಿಮ ಬರಹಗಾರರಾಗಿದ್ದರು. ‘ ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ ಎಂದು  ನವಿರಾದ ಹಾಸ್ಯವನ್ನು ಬಿಂಬಿಸುತ್ತಿದ್ದ ಅವರು  ಗೊಡ್ಡು  ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿ ಬರೆದದ್ದೂ ಇದೆ. ” ಹೆಣ್ಣು ಚಿನ್ನವನ್ನುರಾಜಕಾರಣಿ ಅಧಿಕಾರವನ್ನುಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ ”  ಎನ್ನುವ ಬೀಚಿಯವರ ಬರಹ ಪ್ರಳಯದ ಬಗೆಗಿನ  ಹೊಸ  ವ್ಯಾಖ್ಯಾನವೆನಿಸಿದರೂ ಅಲ್ಲೊಂದು ಸತ್ಯ ನಿಷ್ಟುರತೆಯಿದೆ. ಜನಜೀವನದ ಎಲ್ಲ ಮುಖಗಳು ಅವರ ಲೇಖನಿಯ ಮೂಲಕ ಹೊರಹೊಮ್ಮಿವೆ. ನ್ಯಾಯ ನಿಷ್ಠುರದ ಮಾತುಗಳನ್ನು ಅಲ್ಲದವರಿಗೆ ಅವರ ಬರಹಗಳು ಕಹಿ ಎನಿಸಿದರೂ ಕವಿಯ ಭಾವನೆಗಳು ಮಾತ್ರ ನಿರ್ಭೀತಿಯಿಂದ ಕೃತಿ ರೂಪ ತಾಳಿವೆ. ಸತ್ಯ, ನ್ಯಾಯ, ಧರ್ಮ, ಸಮಾನತೆಯ ಸೋಗು ಹಾಕಿ  ಅವುಗಳ ವಿರುದ್ಧ ಹಾದಿಯನ್ನು ಕ್ರಮಿಸುವವರಿಗೆ ಕರೆಗಂಟೆಯಂತೆ ಎಚ್ಚರಿಸುವ ಅವರ ಬರಹಗಳು ಸಾಮಾಜಿಕ ಮೌಲ್ಯಗಳನ್ನು ಸಾರುವ  ನಿತ್ಯನೂತನ ಸಾಲುಗಳಾಗಿವೆ. ವಾಸ್ತವಿಕತೆಯನ್ನು  ಆಳವಾದ ಹಾಸ್ಯದೊಂದಿಗೆ ಜನಮನಕ್ಕೆ ತಲುಪಿಸುವ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದ ಕವಿ ಬೀಚಿ ಕನ್ನಡ ಸಾಹಿತ್ಯ ಲೋಕದ, ಹಾಸ್ಯ ಪ್ರಪಂಚದ  ಸವ್ಯಸಾಚಿ. ಜಯಲಕ್ಷ್ಮಿ  ಕೆ,

“ಹಾಸ್ಯ ಕವಿ ಬೀಚಿ…ಸವ್ಯಸಾಚಿ” ಜಯಲಕ್ಷ್ಮಿ  ಕೆ Read Post »

ಕಾವ್ಯಯಾನ

ಪ್ರಮೋದ ಜೋಶಿ “ಅಡಗಿ ಕುಳಿತ ಮಾತು”

ಕಾವ್ಯಸಂಗಾತಿ ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” ಮೌನದೊಳು ಮಾತು ಅಡಗಿಕುಳಿತಿದೆತರ್ಕಬದ್ಧಿತ ಧೀರ್ಘಾವಧಿ ಯೊಚನೆಗೋಲೆಕ್ಕಿತ ಲಾಭದ ಮೋಹಕೊಆಡದೆ ನಿಶಬ್ದವಾಗಿದೆ ಬಂಧ ಸಂಬಂಧಗಳ ಬಂಧನದಿನಿರ್ಗಮಿಸಲಾಗದೇ ಒಳಗೆ ಸಿಲುಕಿತನ್ನ ತನವನ್ನೂ ಬಿಡಲಾಗದೆದ್ವಂಧ್ವತ್ವದೊಳು  ಮುಳುಗಿರಲು ನಂಬಿಕೆ ಭಾವದ ಹೊದಿಕೆಯೊಳುಬೆನ್ನಿಗೆ ಇರಿದ ಚೂರಿಯಿಂದರಕುತ ಬಾರದ ಗಾಯಕೆವೆಚ್ಚಿಸಿ ತಂದ ಮದ್ದಿಗಾಗಿ ದ್ವಿಭಾವದ ಮನಸಿನ ಏಕೈಕ ತನುಇಡುವ ಹೆಜ್ಜೆಯ ತಳಮಳತನಕೆಹೆಜ್ಜೆಯೂ ಇಡಲಾಗದಂತ ಕ್ಷಣಕೆನಿಂತಲ್ಲೆ ನಿಂತ ಸ್ಥಿತಿಗಾಗಿ ಆಡುವ ಮಾತಿಗೆ ಕೇಳದ ಕಿವಿಆಸೆ ಆಮೀಷಕೆ ಒಳಗಾಗಿನೈಜ ಗುರುವ ಹಿಂದಿಕ್ಕಿಹಣವಂದನ್ನೆ ಗುರುವಾಗಿಸಿದಾಗ ಬದುಕಿನೊಳ ಆಗು ಹೊಗುಗಳಿಗೂಬಲಿಪಶುಮಾಡಿ ತೆಗಳುತಒಂಟಿ ಮಾಡಿ ಇಟ್ಟ ಕ್ಷಣಕೆಉತ್ತರವಿಲ್ಲದೇ ಶರಣಾಗತನಾದಾಗ ನನ್ನ ನಾನೆ ಕಂಡ ನನಗೆಅರಿಯದೇ ದೂಷಿಸಿ ಕೀಳಾಗಿ ನಿಂತಾಗನಿದಿರೆ ದಾರಿಯೂ ದೂರಾಗಿ ಕಂಡಾಗಭ್ರಮನಿರಶನ ಮರೀಚಿಕೆ ಕ್ಷಣಕೆ ಮೌನದೊಳು ಮಾತು ಅಡಗಿ ಕುಳಿತುಹೊರ ಬಾರದೇ ಸತ್ತದ್ದಕ್ಕೆಹೊತ್ತ ಮನ ರೋಸಿಹೋಗಿಇದ್ದ ತನವ ಕುಗ್ಗಿಸಿದೆ —————- ಪ್ರಮೋದ ಜೋಶಿ

ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” Read Post »

ಕಾವ್ಯಯಾನ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ ಚಳಿಗಾಲದಲ್ಲಿ ಭುವಿ – ರವಿ ಮಂಜಿನ ಮುಸುಕು ಹೊದ್ದು ಕುಳಿತ ಧರಿತ್ರಿ ,ಷೋಡಶ ಶೃಂಗಾರದ  ಮಧುವಣಗಿತ್ತಿ ,ಉದಯ ರವಿಯ ಸ್ವರ್ಣ ರಶ್ಮಿಯು ತಾಗಿದಾಗ ,ನಸು ನಾಚಿ ಕೆಂಪಾಗುವಳುಆ ನವಿರಾದ ಸ್ಪರ್ಶಕೆ …… ಮದ್ಯಾಹ್ನದ ವೇಳೆಗೆ ಸುಡುವ ಸೂರ್ಯನುಧರಣಿಯನು ದಹಿಸುವನು.ತಾಳ್ಮೆಯಿಂದಲೇ ಸಹಿಸುವಳು.ಅವಳ ಮೈ ಮೇಲಿನ ಹಸಿರೆಲ್ಲವೂ ಮೆಲ್ಲನೆಒಣಗಿ ಮಾಯವಾಗುವುದು…. ಸಂಜೆ ಬೀಸುವ ಶೀತಲ ಮಂದ ಮಾರುತ ,   ಇಡೀ ದಿನ ಕಾದು ಬೆಂದ ಪ್ರಕೃತಿಯಲಿತುಸು ತಂಪಿನ ಸಿಂಚನದ ಅನುಭವ.ಮೋಡದ ಆ ಅಂಚಿನಲ್ಲಿ ಕೈ ಬೀಸುತ್ತಹೋರಟ ಆದಿತ್ಯ. ಅದೇನು ಮುನಿಸೊ ಅವನಿಗೆ ,ಆ ಭೂ ರಮಣೀಯ ಮೇಲೆ ,ದಿನವೂ ಮರೆಯಾಗುವನು ಇರುಳಿಗೆ .ಬೆಳಗಿನ ಒಲವು ರಾತ್ರಿಗಿಲ್ಲ ,ಬಹುಶಃ ಇರುವಳೇನೊ ,ಒಬ್ಬ ಸವತಿ ಭುವಿಗೂ ….. ಇನಿಯನ ಬರುವಿಕೆಗಾಗಿಕಾಯುವ ಭೂರಮೆ ,ವಸಂತನ ಆಗಮನಕೆಹಾತೊರೆಯುವ ಪ್ರಕೃತಿ ,ಜಗದ  ಈ  ಚಕ್ರ ಉರುಳುವುದು ಹೀಗೆ ,ಒಮ್ಮೆ ನಗಿಸಿ , ಮತ್ತೊಮ್ಮೆ ಅಳಿಸಿ…… ———- ಪರವಿನ ಬಾನು ಯಲಿಗಾರ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ Read Post »

You cannot copy content of this page

Scroll to Top