ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು

ಕಾವ್ಯ ಸಂಗಾತಿ ವ್ಯಾಸ ಜೋಶಿ ಚಳಿಗಾಲದ ತನಗಗಳು  ಚಳಿಯೇ ಚಳಿಯಲ್ಲಿ ಕಂಪಿಸಿ ನಡುಗಿದೆ. ಥಂಡೀ ತಾಳಲಾರದೆ ಸೂರ್ಯನ ಕರೆದಿದೆ.  ಭೂಮಿಯೇ ನಡುಗಿದೆ ಈ ಪರಿಯ ಥಂಡಿಗೆ ಮನೆಗೇ ಹೊಚ್ಚಬೇಕುದೊಡ್ಡ ಕೌದಿ ಬೆಚ್ಚಗೆ.  ಉರಿಯುವ ರವಿಗೆಬೈಯುವರು ‘ಮೇ’ನಲ್ಲಿ,ಕರೆವರಾದರದಿಹೇಮಂತ ಋತುವಲ್ಲಿ.  ಇಷ್ಟು ವರ್ಷ ಬಂದ್ಹೊಯ್ತು ಎಷ್ಟೊಂದು ಚಳಿಗಾಲ, ಈ ಸಾರಿ ಬೆಚ್ಚಗಿದೆ ಎಂದನು ಮದುಮಗ. ನವದಂಪತಿಗಳುಗೆಲ್ಲಲು ಚಳಿಯನ್ನದೊಡ್ಡ ಕಂಬಳಿಗಿಂತಅಪ್ಪುಗೆ ವರದಾನ. ಎಷ್ಟೊಂದು ಚಳಿಯಲ್ಲೂಮಧುಚಂದ್ರದಿ ಜೋಡಿಗೆಲ್ಲುವರು ಚಳಿಯಸ್ಕೂಬಾ ಡೖವಿಂಗು ಮಾಡಿ.   ಓ ಸೂರ್ಯ ಬಂದುಬಿಡು ಗೆಳೆಯನಂತೆ ಹತ್ರ, ಅದಕ್ಕೆ ನಿನಗೊಂದು ಅನ್ವರ್ಥನಾಮ ‘ಮಿತ್ರ’. ವ್ಯಾಸ ಜೋಶಿ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು Read Post »

ಕಾವ್ಯಯಾನ

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ಕಾವ್ಯ ಸಂಗಾತಿ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು ರಗ್ಗು ಮಧುರ ಪ್ರಿಯನಿಗೆ ಚಳಿಯ ಚಿಂತೆ ಇಲ್ಲಬಳಿ ಇರುವಾಗ ಮೊ(ನ)ಲ್ಲೆಯ ಮೊಗ್ಗು !‘ಮಧು’ ಪ್ರಿಯನಿಗೂ ಚಳಿಯ ಹಂಗಿಲ್ಲಒಳ ಹೋದೊಡೆ ಒಂದು ಪೆಗ್ಗುಹೊತ್ತಂತೆ ಎರಡೆರಡು ರಗ್ಗು !!               ***ಈ ‘ಚಳಿ’ಗೆ ಚಳಿಯಾಗುವುದಿಲ್ಲವೆ !?ಊರೆಲ್ಲ ಸುತ್ತಿ ಎಲ್ಲರಿಗೂಚಳಿಯಲ್ಲಿ ನಡುಗಿಸುತ್ತದೆ,ಮನೆಯ ಮೂಲೆ ಸೇರಿಬೆಚ್ಚನೆ ಕೂರಬಾರದೆ !?            ***ಚಳಿಗೆ ಬೆಚ್ಚನೆ ಕಾಫಿ ಹೀರಲು ಕುಳಿತ್ತಿದ್ದೆಗಡ ಗಡ ನಡುಗುತ್ತ ಬಳಿ ಬಂದ ಚಳಿತನಗೊಂದು ಲೋಟ ಕಾಫಿಗೆ ಅಂಗಲಾಚಿತು!ಕೈಯಲ್ಲದ್ದ ಕಾಫಿ ಲೋಟ ಚಾಚಿದೆಮನದಲ್ಲಿ ಚಳಿಯ ಚಳಿ ಹೋಗಲಾಡಿಸಿದ ಬೆಚ್ಚನೆಯ ಅನುಭವ !!                 ***ನೀರಿಗೂ ಚಳಿ ಆಗಬಾರದೆಂದುಬಿಸಿ ಮಾಡಿಮೆಲ್ಲನೆ ಕೈ ಹಿಡಿದುಕೊಂಡು ಕರೆದ್ಹೋಗುತ್ತೇನೆ ಸ್ನಾನಕ್ಕೆ !!             ***ಅತಿ ಯಾಯಿತು ಈ ಚಳಿಯ ಗಲಾಟೆಸೂರ್ಯ ಮೆರೆಯಾಗುವುದೇ ತಡಬಂದು ಬಿಡುತ್ತಾನೆ ನಡುಗಿಸಲು ಗಡ ಗಡ ————————— ರಾಜು ಪವಾರ್ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು Read Post »

ಕಾವ್ಯಯಾನ

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್

ಕಾವ್ಯ ಸಂಗಾತಿ “ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ ಸ್ಪರ್ಧೆ ಎನಿಸಿದರೆ‌ ನಿಮಗೆನ್ನಕಾಯಕ‌ವದರ ದೋಷಿ‌ಯು ನಾನಲ್ಲ||ಕೆರೆಯುತಲಿದ್ದು ಮಾಯುವುದಕ್ಕೆಡೆ ಕೊಡದೆ ನಂಜಾಗುತಿರೆ ಗಾಯ ದೋಷಿ‌ಯು ನಾನಲ್ಲ|| ನಾನಾಡುವ‌ ದಿಟ ಮಾತು ಸದಾಕಟುವೆನಿಸಿದರಕೆ ದೋಷಿಯು ನಾನಲ್ಲ||ನಾ ಬಲ್ಲೆ ಎನ್ನರಿವು‌ ಹರಿವಿನ ಹಿತಮಿತಅಹಂ‌ ಅನಿಸಿದರದು‌ ತಮಗೆ ದೋಷಿ‌ ನಾನಲ್ಲ|| ಎನ್ನ‌ ಬಾಹ್ಯ‌-ಆಂತರ್ಯ‌ ಸೊಬಗಿಗೆ ನಿಮ್ಮಕಣ್ಗಳು ಸೋಲುಂಬುದಕೆ ದೋಷಿ‌ಯು ನಾನಲ್ಲ||ಮುನ್ನ ಕೃತಿ ಪ್ರೌಢಿಮೆಯ‌ ಆಳವರಿಯದೆವರ್ಜಿಸಿ ಕಳೆದುಕೊಳ್ಳುವುದಕೆ ದೋಷಿ‌ಯು ನಾನಲ್ಲ|| ಎನ್ನಾತ್ಮ‌ ಮೆಚ್ಚುವಂತೆ ಮಾಡುವ‌ ಕೆಲಸ‌ನಿಮ್ಮ ಕಾಡಿದರದರ ದೋಷಿಯು ನಾನಲ್ಲ||ಬೆನ್ನಂತೆ ಕಾಣದಿರುವ ನಿಮ್ಮ‌ ಗುಣ‌ವ ನೀವೆ ತಿಳಿಯದಿರುವುದಕೆ ದೋಷಿಯು ನಾನಲ್ಲ|| ಆವುದನ್ನು ತಲೆಗೇರಿಸಿ‌ಕೊಳ್ಳದೆ ಇಷ್ಟದೊಂದಿಗೆ‌ ಬಾಳುತಿರುವ ಅಂತರ್ಧ್ಯಾನಿ ನನಗಾವ ದೋಷವಿಲ್ಲ||ಆಕರ್ಷ ಜಗಕೆ‌ ಮರುಳಾಗುತಿರುವ‌ ಮೋಹಿ ನೀ ನಿನ್ನ ಅರಿಯದಕೆ ಅನಿಸುತ್ತಿದೆ ನಿಮಗೆ ದೋಷವೇ ಎಲ್ಲ || ಕೊ//ಮಾಳೇಟಿರ ಸೀತಮ್ಮ ವಿವೇಕ್, ಹಾಸನ.

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದೂರಾದವಳ ಮೇಲೆ ದೂರೊಂದ ನೀಡಬೇಕಿತ್ತುಮೌನವಾದವಳ ಜತೆ ಮಾತೊಂದ ಆಡಬೇಕಿತ್ತು ಇಟ್ಟ ಹೆಜ್ಜೆ ಕೊಟ್ಟ ಭಾಷೆ ಅರ್ಥ ಕಳೆದುಕೊಂಡಿವೆಕಟ್ಟಿದ ಕಾಲ್ಗೆಜ್ಜೆಯದು ಸದ್ದೊಂದ ಮಾಡಬೇಕಿತ್ತು ಪ್ರಮಾಣಿಸಿ ನೋಡದುದರ ಪರಿಣಾಮ ಘೋರಬರಿಗಣ್ಣಿಂದಲ್ಲ ಎದೆಯ ಕಣ್ಣಿಂದ ನೋಡಬೇಕಿತ್ತು ಗೂಡು ತೊರೆದ ಹಕ್ಕಿಗಂತೂ ಹೇಳತೀರದ ಪಾಡುನೋವ ಮರೆಸುವಂತ ಹಾಡೊಂದ ಹಾಡಬೇಕಿತ್ತು ಅವಳ ಆ ನಿಮಿಷ ಕುಂಬಾರನಿಗೆ ವರುಷವೇ ಸರಿಕಳೆದ ನೆನಹು ಬಿಡದೇ ಒಂದೊಂದ ಕಾಡಬೇಕಿತ್ತು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಇತರೆ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ.

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ”                                                   ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಮರ್ಥ್ಯ ತನ್ನ ಇರುವಿಕೆಯ ಮಹತ್ವವನ್ನು ಸಾರಿ ಹೇಳುತ್ತದೆ. ಸಾಮರ್ಥ್ಯವಿಲ್ಲದೇ ಸಣ್ಣ ಪುಟ್ಟ ಕೆಲಸಗಳನ್ನೂ ಚೆನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಸಮರ್ಥನಾದವನ ಕೆಲಸದ  ಗುಣಮಟ್ಟ ಸೂಜಿಗಲ್ಲಿನಂತೆ  ಸೆಳೆಯುತ್ತದೆ. ಸಾಮರ್ಥ್ಯವೆನ್ನುವುದು ಒಮ್ಮಿಂದೊಮ್ಮೆಲೇ ಉದ್ಭವಿಸುವುದಿಲ್ಲ. ಶ್ರದ್ಧೆಯಿಂದ, ನಿರಂತರವಾಗಿ, ಕಷ್ಟ ಪಟ್ಟು ಶ್ರಮವಹಿಸಿದಾಗ ಮಾತ್ರ ಒಲಿಯುವಂಥದ್ದು. ಮಾನವನ ಅತ್ಯಂತ ಅಗತ್ಯಗಳಲ್ಲಿ ಸಾಮರ್ಥ್ಯ ಅಗ್ರಸ್ಥಾನ ಪಡೆಯುತ್ತದೆ. ಉಪ್ಪಿಲ್ಲದೇ ಅಡುಗೆಯಿಲ್ಲ ಹಾಗೆಯೇ ಸಾಮರ್ಥ್ಯವಿಲ್ಲದೇ ಜೀವನದಲ್ಲಿ ಏನೂ ಇಲ್ಲ. ‘ನಾವು ಕಲಿಯುವುದನ್ನು ಬಿಟ್ಟರೆ ಕೆಲವು ರೀತಿಯಲ್ಲಿ ಸಾಯಲು ಪ್ರಾರಂಭಿಸುತ್ತೇವೆ.’ ನಾವು ಯಾವುದೇ ಪದವಿಯನ್ನು ಗಳಿಸಿದ್ದರೂ ಅಥವಾ ನಮ್ಮ ಹೆಸರಿನ ನಂತರ ಯಾವುದೇ ಮೊದಲಕ್ಷರಗಳು ಬಂದರೂ, ಪ್ರತಿದಿನವೂ ನಾವು ಸಾಮರ್ಥ್ಯವನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಹೇಗೆ ಕಲಿಯುವುದು? ಸಾಮಾನ್ಯನನ್ನು ಅಸಾಮಾನ್ಯನಾಗಿಸುವುದೇ ಸಾಮರ್ಥ್ಯ. ಜಗದ ಬಹುತೇಕ ಸಾಧಕರು ಸಾಧಿಸಿದ ಅತ್ಯದ್ಭುತ ಗೆಲುವು ಅವರ ಸಾಮರ್ಥ್ಯದಿಂದಲೇ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸಾಮರ್ಥ್ಯದ ಸದುಪಯೋಗ ಪ್ರಗತಿಗೆ ದಾರಿ. ಸಮರ್ಥರಾದವರು ಜಗತ್ತಿನ ಎಲ್ಲ ವಸ್ತುಗಳಿಂದಲೂ  ಕಲಿಯುವ  ಸಾಮರ್ಥ್ಯವನ್ನು ಬೆಳೆಸಿಕೊಂಡಿರುತ್ತಾರೆ. ಇದನ್ನೇ ವರಕವಿ ಬೇಂದ್ರೆ ‘ಜಾಣನಾದವನು ಕೋಣನಿಂದಲೂ ಕಲಿಯಬಲ್ಲ.’ ಎಂದು ಹೇಳಿದ್ದಾರೆ. ‘ನಾನು ವಾಚಾಳಿಗಳಿಂದ ಮೌನವನ್ನೂ, ಅಸಹನೆಯ ವ್ಯಕ್ತಿಗಳಿಂದ ಸಹನೆಯನ್ನೂ ಕ್ರೂರಿಗಳಿಂದ ಕರುಣೆಯನ್ನು ಕಲಿತಿದ್ದೇನೆ.’ ಎನ್ನುತ್ತಾನೆ ಜಗತ್ಪ್ರಸಿದ್ಧಚಿಂತಕ ಖಲಿಲ್ ಗಿಬ್ರಾನ್.ಇದನ್ನೇ ಸರ್ವಜ್ಞನ ಒಂದು ವಚನದಲ್ಲಿ ನೋಡಿದರೆ,“ಸರ್ವಜ್ಞನೇನು ಗರ್ವದಿಂದ ಆದವನೆಸರ್ವರೊಳಗೆಒಂದೊಂದು ನುಡಿಗಲಿತುವಿದ್ಯದಾ ಪರ್ವತವೇ ಆದ ಸರ್ವಜ್ಞ .”ಸರ್ವಜ್ಞನ ಪ್ರಕಾರ ಬೇರೆ ಬೇರೆ ವ್ಯಕ್ತಿಗಳಲ್ಲಿ ಪ್ರಾಣಿಗಳಲ್ಲಿ ಬೇರೆ ಬೇರೆ ಉತ್ತಮ ಸಂಗತಿಗಳು ಇರುತ್ತವೆ. ಅವುಗಳನ್ನು ಅಹಂ ಬಿಟ್ಟು ಕಲಿಯಬೇಕೆಂಬುದು ಸ್ಪಷವಾಗಿ ತಿಳಿಯುತ್ತದೆ. ಮೊದಲ ಹೆಜ್ಜೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೊದಲ ಹೆಜ್ಜೆ ನೀವು ಇನ್ನೂ ತಲುಪಿಲ್ಲ ಎಂದು ಅರ್ಥ ಮಾಡಿಕೊಳ್ಳುವುದು. ನೀವು ಬೆಳೆಯಲು ಯಾವುದೇ ಸ್ಥಳವಿಲ್ಲ ಎಂದು ನೀವು ಭಾವಿಸಿದರೆ, ನೀವು ಬೆಳೆಯುವುದಿಲ್ಲ. ನಿಮ್ಮ ಜೀವನದಲ್ಲಿ ಸುಧಾರಣೆಗೆ ಕ್ಷೇತ್ರಗಳಿವೆ ಎಂದು ನೀವು ಒಮ್ಮೆ ನೋಡಿದ ನಂತರ ಆ ಕ್ಷೇತ್ರಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ನಿಜವಾಗಿಯೂ ತುಂಬಾ ಸರಳವಾಗಿದೆ. ಪರಿಗಣಿಸಿ ಯಶಸ್ಸಿನ ಪ್ರಮುಖ ಅಧಿಕಾರಿ ನೆಪೊಲಿಯನ್ ಹಿಲ್ ಹೇಳಿದರು, ’ಪ್ರತಿಯೊಂದು ಪ್ರತಿಕೂಲತೆಯು ಅದರೊಂದಿಗೆ ಸಮಾನ ಪ್ರಯೋಜನದ ಬೀಜವನ್ನು ತರುತ್ತದೆ.’ನೀವು ಪ್ರತಿಯೊಂದು ಸಂಘರ್ಷ, ಪ್ರತಿ ವಿಳಂಬ ಮತ್ತು ಪ್ರತಿ ಹತಾಶೆಯನ್ನು ಈ ಬೆಳಕಿನಲ್ಲಿ ನೋಡಲು ಸಿದ್ಧರಿದ್ದರೆ ನಿಮ್ಮ ಇಡೀ ಜೀವನವು ಕಲಿಕೆಯ ಅವಕಾಶವಾಗುತ್ತದೆ. ಸಾಮರ್ಥ್ಯವು ಇನ್ನಿಲ್ಲದಂತೆ ಬೆಳೆಯುತ್ತದೆ. ನಾಯಕರು ಹುಟ್ಟಿನಿಂದಲೇ ಯಾರೂ ನಾಯಕರು ಆಗಿಲ್ಲ. ನಾಯಕನ ಸಾಮರ್ಥ್ಯವನ್ನು ಬೆಳೆಸಿಕೊಂಡೇ ನಾಯಕರಾಗಿದ್ದಾರೆ. ನಾಯಕ ತನ್ನ ಸಾಮರ್ಥ್ಯದಿಂದ ಕೇವಲ ವ್ಯಕ್ತಿಯಾಗುವುದಿಲ್ಲ. ದೊಡ್ಡದೊಂದು ಶಕ್ತಿಯಾಗಿ ಬೆಳೆಯುತ್ತಾನೆ. ಪ್ರಬಲ ನಾಯಕರು ಚಿಂತಕರು ಅವರ ಹಿಂಬಾಲಕರ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ನಿಮಗಿಂತ ಹೆಚ್ಚು ಯಶಸ್ವಿ ಹೆಚ್ಚು ಸಮರ್ಥ ಮತ್ತು ಹೆಚ್ಚು ಅರ್ಹತೆ ಹೊಂದಿರುವ ಜನರೊಂದಿಗೆ ನೀವಿದ್ದರೆ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವದು ಖಚಿತ. ಬಹುತೇಕ ಪ್ರತಿಯೊಬ್ಬ ನಾಯಕನು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾರ್ಗದರ್ಶಕನನ್ನು ಹೊಂದಿಯೇ ಇರುತ್ತಾನೆ. ನೀವು ಬಯಸಿದರೆ ಅದು ಸಿಕ್ಕೇ ಸಿಗುತ್ತದೆ. ದೌರ್ಬಲ್ಯ ಸಾಮರ್ಥ್ಯ ನಮ್ಮಲ್ಲಿರುವ ಮನೋಶಕ್ತಿಯನ್ನು ಸೂಚಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಬದುಕಿಗೆ ಅರ್ಥ ನೀಡುತ್ತದೆ. ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳು ಹಿನ್ನೆಡೆಯನ್ನು ಸಮಸ್ಯೆ ಎಂದು ಕರೆಯದೇ ಅದನ್ನು ತಮ್ಮ ಸಾಮರ್ಥ್ಯವನ್ನು ಎತ್ತರಕ್ಕೇರಿಸಲು ಬಳಸಿಕೊಂಡಿದ್ದಾರೆ. ಸದಾ ನಮ್ಮನ್ನು ಹಿಂಬಾಲಿಸುವ ನೆರಳನ್ನು ಬೆಳಕಿಗೊಡ್ಡಿದರೆ ಮಾಯವಾಗುತ್ತದೆ. ಅದೇ ರೀತಿ ವೈಯುಕ್ತಿಕ ದೌರ್ಬಲ್ಯಗಳನ್ನು ಗುರುತಿಸಿ ಆ ಕುರಿತು ಕಾರ್ಯಪ್ರವೃತ್ತರಾದಾಗ ಪ್ರಾಬಲ್ಯ ಮೆರೆಯಬಹುದು.ತನ್ಮೂಲಕ ಟೀಕಾಕಾರರ ಮುಂದೆಯೂ ತಲೆಯೆತ್ತಿ ನಿಲ್ಲಬಹುದು. ಸಮಯ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಟಿವಿ ನೋಡುವುದು ಅಥವಾ ವಿಡಿಯೋಗಳು ಟ್ರಾಫಿಕ್ ನಲ್ಲಿ ಕುಳಿತುಕೊಳ್ಳುವುದು ಸಭೆ ಪ್ರಾರಂಭವಾಗಲು ಕಾಯುವುದು ಇನ್ನೂ ಮುಂತಾದ ಅರ್ಥಹೀನ ಕೆಲಸಗಳನ್ನು ಮಾಡುತ್ತ ಸಮಯ ವ್ಯರ್ಥವಾಗುತ್ತದೆ. ಕಾರಿನಲ್ಲಿ ಹೋಗುವಾಗ ಪಾಡ್ ಕ್ಯಾಸ್ಟ್ಗಳನ್ನು ಕೇಳುವ ಮೂಲಕ, ಆ ಖಿನ್ನತೆಯ ಕ್ಷಣಗಳಿಂದಾಗಿ ನಿಮ್ಮ ಕಂಪ್ಯೂಟರ್ ಅಥವಾ ಫೋನ್‌ಗೆ ಪ್ರಸ್ತಕಗಳನ್ನು ಲೋಡ್ ಮಾಡುವ ಮೂಲಕ, ಅವುಗಳನ್ನು ಆಲಿಸಿದರೆ ಜ್ಞಾನ ವೃದ್ಧಿಯಾಗುವುದು. ಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸುವುದು. ವ್ಯರ್ಥ ಕ್ಷಣಗಳ ಲಾಭ ಪಡೆಯಲು ಉಪಯೋಗಿಸಿ. ಇದರಿಂದ ಸಾಮರ್ಥ್ಯ ದಿನೇ ದಿನೇ ಬೆಳೆಯುತ್ತ ಹೋಗುವುದು ಖಂಡಿತ. ತಂತ್ರಜ್ಞಾನ “ಒಳ್ಳೆಯ ಪುಸ್ತಕಗಳನ್ನು ಓದದ ಮನುಷ್ಯನಿಗೆ ಅವುಗಳನ್ನು ಓದಲು ಬಾರದ ಮನುಷ್ಯನಿಗಿಂತ ಯಾವುದೇ ಅನುಕೂಲವಿಲ್ಲ.” ಎಂದು ಮಾರ್ಕ್ ಟ್ವೇನ್ ಹೇಳಿದ್ದಾನೆ. ಒಳ್ಳೆಯ ಪುಸ್ತಕಗಳನ್ನು ಖರೀದಿಸಿ. ನಿಮಗೆ ಸವಾಲು ಹಾಕುವ ಪುಸ್ತಕಗಳನ್ನು ಓದಿ. ಇತ್ತೀಚಿಗೆ ಪುಸ್ತಕಗಳನ್ನು ಕೇಳುವ ಅವಕಾಶ ತಂತ್ರಜ್ಞಾನದಿಂದ ಲಭಿಸಿದೆ. ಇದರಿಂದ ಒಂದೇ ಕಡೆ ಕುಳಿತು ಓದಬೇಕಂತಿಲ್ಲ. ಪುಸ್ತಕಗಳನ್ನು ಆಲಿಸಿ ಅದರಲ್ಲಿನ ತಿರುಳನ್ನು ತಿಳಿಯಬಹುದು. ತಂತ್ರಜ್ಞಾನವು ನಿರಂತರವಾಗಿ ಸುಧಾರಿಸುತ್ತಿದೆ. ಕಲಿಯಲು ಅದು ಒದಗಿಸುವ ಅವಕಾಶಗಳನ್ನು ಬಳಿಸಿಕೊಳ್ಳಬೇಕು. ಸಮಸ್ಯೆಗಳು ಶಕ್ತಿಯ ಮಿತಿಯಾಚೆಗಿರುವ  ಸಮಸ್ಯೆಗಳು ಎಂದು ಭಾವಿಸಿರುವಂಥವು  ನಮ್ಮ ಅಸಾಮರ್ಥ್ಯದ ನೆಪದಲ್ಲಿ ಅಟ್ಟಹಾಸ ಮೆರೆಯುತ್ತಿರುತ್ತವೆ. ನಿಜ ಹೇಳಬೇಕೆಂದರೆ ಇಂಥ ತಲೆ ಕೆಡಿಸುವ ಸಂಗತಿಗಳೇ ನಾವು ಹೆಚ್ಚೆಚ್ಚು ಸಮರ್ಥರಾಗಲು ದೊಡ್ಡ ಅವಕಾಶಗಳಾಗುತ್ತವೆ. ‘ಇತರರ ಬಗ್ಗೆ ನಮ್ಮಲ್ಲಿ ಕಿರಿಕಿರಿ ಉಂಟು ಮಾಡುವ ಸಂಗತಿಗಳು ನಮ್ಮನ್ನು ಅರ್ಥ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಬಹುದು.’  ಎಂದೊಮ್ಮೆ ಪ್ರಸಿದ್ಧಮನಃಶಾಸ್ತ್ರಜ್ಞ ಕಾರ್ಲಜಂಗ್ ಹೇಳಿದ್ದ ಮಾತು ದಿಟವಾದುದು. ಜ್ಞಾಪಿಸಿಕೊಳ್ಳಿ ನಾನು ಸಾಮಾನ್ಯ ನನ್ನಲ್ಲಿ ಹೇಳಿಕೊಳ್ಳುವ ಸಾಮರ್ಥ್ಯಗಳು ಯಾವವೂ ಇಲ್ಲ ಎಂದುಕೊಳ್ಳುವಾಗ ‘ನೀವು ಏನೂ ಪರಿಣಾಮ ಬೀರಲು ಸಾಧ್ಯವಾಗದಷ್ಟು ಸಣ್ಣವರೆಂದು ಭಾವಿಸಿಕೊಳ್ಳುವುದಾದರೆ ಸೊಳ್ಳೆ ಪರದೆಯೊಳಗಿರುವ ಸೊಳ್ಳೆಯನ್ನು ಜ್ಞಾಪಿಸಿಕೊಳ್ಳಿ” ಎಂದು ಮಾರ್ಮಿಕವಾಗಿ ಹೇಳಿದ್ದಾಳೆ ‘ದ ಬಾಡಿ ಶಾಪ್’ನ ಸಂಸ್ಥಾಪಕಿ ಅನಿತಾ ರಾಡಿಕ್. ಆಯ್ಕೆ ಹದ್ದು ಬಾನೆತ್ತರಕ್ಕೆ ಹಾರಬಲ್ಲದು.. ಇರುವೆ ಅತೀ ಚಿಕ್ಕದಾದರೂ, ತನ್ನ ತೂಕಕ್ಕಿಂತ ಹೆಚ್ಚು ಪಟ್ಟು ವಸ್ತುವನ್ನು ಹೊತ್ತೊಯ್ಯುವ ಸಾಮರ್ಥ್ಯ ಗಳಿಸಿಕೊಂಡಿದೆ. ಏನೆಲ್ಲವನ್ನು ದಕ್ಷತೆಯಿಂದ ನಿರ್ವಹಿಸಲು ನಾನು ಸಮರ್ಥ ಎಂಬ ಅಹಂಭಾವ ತಲೆಗೇರಿದರೆ ರಿಚರ್ಡ್ ಕ್ಯಾರಿಯನ್ ಹೇಳಿದಂತೆ, ‘ಯಶಸ್ಸು ಸೋಲನ್ನೂ ಸೃಷ್ಟಿಸುತ್ತದೆ.’ ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆಯೇ ಸರಿ. ನಮ್ಮಲ್ಲಿರುವ ಶಕ್ತಿಯನ್ನು ನಾವೇ ನಿರಾಕರಿಸುವುದು ಅಸಮರ್ಥತೆ. ಅಸಮರ್ಥರಾಗಿ ವೈಫಲ್ಯಗಳಿಗೆ ಬಲಿಪಶುಗಳಾಗುವುದಕ್ಕಿಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಯಶಸ್ವಿ ವ್ಯಕ್ತಿಗಳಾಗುವುದು ಉತ್ತಮ. ಆಯ್ಕೆ ನಮ್ಮ ಕೈಯಲ್ಲಿದೆ. ಜಯಶ್ರೀ ಜೆ ಅಬ್ಬಿಗೇರಿ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ. Read Post »

You cannot copy content of this page

Scroll to Top