ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  
ಎಲ್ಲವನು ಕಳೆದುಕೊಂಡೆ
ತನುವು ಮನವು
ಒಲವು ಬಲವು
ಈ ಚಳಿಯ
ರಾತ್ರಿಗೆ!

ಏಕಾಂತದ ನಡುಕ
ಎದೆಯೊಳಗೆ
ವಿರಹದ ಉರಿ
ಅರಿವು ಜರಿದು
ಮರೆವು ಮಸೆದು

ಹೊರಗೆ-
ರಂಧ್ರ ಕೊರೆವ ಚಳಿ
ಒಳಗೆ-
ದಹಿಸುವ ನಿನ್ನ
ನೆನಪ ಸುಳಿ

ನೀನಿರದ ವೇಳೆ
ಜೀವ ಬಾದಿತ
ನಿದಿರೆ ಬಾರದೆ
ನೆಮ್ಮದಿ ಗದ್ಗದಿತ

ಮೆಲ್ಲುವ ವೇದನ
ಕನ್ನಡಿ ನಗುತ
ಕಾಯಿಲೆಗೆ ಕೆಡವಿದ
ಮೇಧಾವಿ ಶಕುನ

ಗಡಿಯಾರದ ಮುಳ್ಳುಗಳ
ಶಬ್ಧವು-
ಕಿವಿಯೊಳಗೆ
ಸಲಾಕೆ ಬಾರಿಸಿದ ಹಾಗೆ
ಮಿಣುಕು ದೀಪ
ಅಣಕಿಸಿದ ಹಾಗೆ

ನೀನಿರದ
ಈ ಚಳಿಯ ರಾತ್ರಿ
ಹಿಂಡುತಿವೆ
ಕರಳು ನರಳಗಳನು
ಹಿಮದ ಗರ್ಭದೊಳಗೆ
ಮಲಗಿಸಿ

——–

About The Author

Leave a Reply

You cannot copy content of this page

Scroll to Top