ಕಾವ್ಯ ಸಂಗಾತಿ
ವ್ಯಾಸ ಜೋಶಿ
ಚಳಿಗಾಲದ ತನಗಗಳು


ಚಳಿಯೇ ಚಳಿಯಲ್ಲಿ
ಕಂಪಿಸಿ ನಡುಗಿದೆ.
ಥಂಡೀ ತಾಳಲಾರದೆ
ಸೂರ್ಯನ ಕರೆದಿದೆ.
ಭೂಮಿಯೇ ನಡುಗಿದೆ
ಈ ಪರಿಯ ಥಂಡಿಗೆ
ಮನೆಗೇ ಹೊಚ್ಚಬೇಕು
ದೊಡ್ಡ ಕೌದಿ ಬೆಚ್ಚಗೆ.
ಉರಿಯುವ ರವಿಗೆ
ಬೈಯುವರು ‘ಮೇ’ನಲ್ಲಿ,
ಕರೆವರಾದರದಿ
ಹೇಮಂತ ಋತುವಲ್ಲಿ.
ಇಷ್ಟು ವರ್ಷ ಬಂದ್ಹೊಯ್ತು
ಎಷ್ಟೊಂದು ಚಳಿಗಾಲ,
ಈ ಸಾರಿ ಬೆಚ್ಚಗಿದೆ
ಎಂದನು ಮದುಮಗ.
ನವದಂಪತಿಗಳು
ಗೆಲ್ಲಲು ಚಳಿಯನ್ನ
ದೊಡ್ಡ ಕಂಬಳಿಗಿಂತ
ಅಪ್ಪುಗೆ ವರದಾನ.
ಎಷ್ಟೊಂದು ಚಳಿಯಲ್ಲೂ
ಮಧುಚಂದ್ರದಿ ಜೋಡಿ
ಗೆಲ್ಲುವರು ಚಳಿಯ
ಸ್ಕೂಬಾ ಡೖವಿಂಗು ಮಾಡಿ.
ಓ ಸೂರ್ಯ ಬಂದುಬಿಡು
ಗೆಳೆಯನಂತೆ ಹತ್ರ,
ಅದಕ್ಕೆ ನಿನಗೊಂದು
ಅನ್ವರ್ಥನಾಮ ‘ಮಿತ್ರ’.
ವ್ಯಾಸ ಜೋಶಿ




