ಕಾವ್ಯಸಂಗಾತಿ
ರಾಜೇಶ್ವರಿ ಶೀಲಾವಂತ್ ಅವರ ಎರಡು ಕವಿತೆಗಳು

ಕವಿತೆ- ಒಂದು

ಅವಳು ಕವಿಯೂ ಅಲ್ಲ
ಸಾಹಿತಿಯೂ ಅಲ್ಲ
ನಿಸ್ವಾರ್ಥ ಮನದ ಗೆಳತಿ
ಮನಸ್ಥಿತಿಗೆ ತಕ್ಕಂತೆ
ಕಾವ್ಯದಲ್ಲಿ ಸಾಹಿತ್ಯದಲ್ಲಿ ಅವನ ಗೋಚರ
ಅವನ ಮನಸ್ಥಿತಿಗಿಲ್ಲ
ಅವಳ ಭಾವಗಳ ವಿಚಾರ
ಭಾವಗಳೇ
ಸಾರೀ ಸಾರೀ ಹೇಳಿ ಸಾಹಿತಿಗಳಿಗೆ
ಕೂಗಿ ಕೂಗಿ ಹೇಳಿ ಕವಿಗಳಿಗೆ
ಅವಳದು ಪುಟ್ಟ ನೊಂದ
ಭಾವುಕ ಹೃದಯ
ಅದಕಿಲ್ಲ ಸಾಮರ್ಥ್ಯ
ಆ ನೋವ ಭರಿಸುವ
ತಿಳಿಸಿರವರಿಗೆ ಭಾವನೆಗಳ ಸ್ಪಂದನವ
ಅವಳ ಮನದಾಳದ ನೋವ.
*****
ಕವಿತೆ-ಎರಡು

ತಾಯಿ,ಅಬ್ಬೆ, ಅವ್ವಾ, ಅಮ್ಮ
ಹಲವಾರು
ನಾಮಧೇಯ ನಿನಗೆ
ನೀನು ಮಮತೆ
ಜವಾಬ್ದಾರಿಯ ಸಾಕಾರ
ನೀ ಹಂಚಿದೆ ಸಮ ಪ್ರೀತಿ
ನಿನ್ನೆಲ್ಲ ಮಕ್ಕಳಿಗೆ
ನಿನ್ನೊಬ್ಬಳಿಗೆ ನೀಡಲಾರರು
ಆ ಪ್ರಬುದ್ಧ ಮಕ್ಕಳು
ಹಿಂತಿರುಗಿ ಆ ಪ್ರೀತಿ
ಅವರಿಗಿಲ್ಲ
ನಿನ್ನ ಸಲಹುವ ತವಕ
ಅವರೆಲ್ಲ
ತಮ್ಮ ಹೆಂಡತಿ ಮಕ್ಕಳಿಗೆ ಭಾವುಕ
ನಿನಗೆ ಮಾತ್ರ
ವೃದ್ಧಾಶ್ರಮದ ಆಸರೆ
ಅವ್ವಾ ಬೇಕಿತ್ತಾ
ನಿನಗೆ ಇದೆಲ್ಲದರ ಹೊರೆ
ಇನ್ನಾದರೂ ನಿನ್ನಷ್ಟಕ್ಕೆ ನೀನೆ ಇರೆ.
ರಾಜೇಶ್ವರಿ ಶೀಲಾವತ್



