ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರಗ್ಗು 
ಮಧುರ ಪ್ರಿಯನಿಗೆ ಚಳಿಯ ಚಿಂತೆ ಇಲ್ಲ
ಬಳಿ ಇರುವಾಗ ಮೊ(ನ)ಲ್ಲೆಯ ಮೊಗ್ಗು !
‘ಮಧು’ ಪ್ರಿಯನಿಗೂ ಚಳಿಯ ಹಂಗಿಲ್ಲ
ಒಳ ಹೋದೊಡೆ ಒಂದು ಪೆಗ್ಗು
ಹೊತ್ತಂತೆ ಎರಡೆರಡು ರಗ್ಗು !!
               ***
ಈ ‘ಚಳಿ’ಗೆ ಚಳಿಯಾಗುವುದಿಲ್ಲವೆ !?
ಊರೆಲ್ಲ ಸುತ್ತಿ ಎಲ್ಲರಿಗೂ
ಚಳಿಯಲ್ಲಿ ನಡುಗಿಸುತ್ತದೆ,
ಮನೆಯ ಮೂಲೆ ಸೇರಿ
ಬೆಚ್ಚನೆ ಕೂರಬಾರದೆ !?
            ***
ಚಳಿಗೆ ಬೆಚ್ಚನೆ ಕಾಫಿ ಹೀರಲು ಕುಳಿತ್ತಿದ್ದೆ
ಗಡ ಗಡ ನಡುಗುತ್ತ ಬಳಿ ಬಂದ ಚಳಿ
ತನಗೊಂದು ಲೋಟ ಕಾಫಿಗೆ ಅಂಗಲಾಚಿತು!
ಕೈಯಲ್ಲದ್ದ ಕಾಫಿ ಲೋಟ ಚಾಚಿದೆ
ಮನದಲ್ಲಿ ಚಳಿಯ ಚಳಿ ಹೋಗಲಾಡಿಸಿದ ಬೆಚ್ಚನೆಯ ಅನುಭವ !!
                 ***
ನೀರಿಗೂ ಚಳಿ ಆಗಬಾರದೆಂದು
ಬಿಸಿ ಮಾಡಿ
ಮೆಲ್ಲನೆ ಕೈ ಹಿಡಿದುಕೊಂಡು ಕರೆದ್ಹೋಗುತ್ತೇನೆ ಸ್ನಾನಕ್ಕೆ !!
             ***
ಅತಿ ಯಾಯಿತು ಈ ಚಳಿಯ ಗಲಾಟೆ
ಸೂರ್ಯ ಮೆರೆಯಾಗುವುದೇ ತಡ
ಬಂದು ಬಿಡುತ್ತಾನೆ ನಡುಗಿಸಲು ಗಡ ಗಡ

—————————

About The Author

Leave a Reply

You cannot copy content of this page

Scroll to Top