ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಮಾನವರಾಗಿ”


ದೇವನು ಭೂಮಿಯ
ಸೃಷ್ಟಿಸಿ ಜಗತ್ತು ಎಂದಾಗಿ
ಪ್ರಕೃತಿಯಿಂದ ಆಲಂಕರಿಸಿದ,
ನಾವು ಜಗತ್ತಾಗಿಸಿ ದೇಶಗಳಾಗಿ
ವಿಂಗಡಿಸಿ ಕೊಂಡು ಬಿಟ್ಟೆವು,!
ಮನುಷ್ಯನನ್ನು ಸೃಷ್ಟಿಸಿ
ಭೂಮಿಗೆ ಕಳುಹಿಸಿ ಕೊಟ್ಟನು
ಆ ಪರಮಾತ್ಮನ ನೆನೆಸಿ ಕೊಳ್ಳದೆ
ನಾವು ಹಿಂದು ಮುಸ್ಲಿಂ ಕ್ರೈಸ್ತರಾಗಿ
ವಿಂಗಡಿಸಿ ಕೊಂಡು ಬಿಟ್ಟೆವು.!
ಹಮೀದ್ ಹಸನ್ ಮಾಡೂರು.
ʼ



