ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್

ಹೊಕ್ಕಳ ಬಳ್ಳಿ ಹೃದಯದ ಬಡಿತ ನೀನಲ್ಲವೆ
ಜಗಮರೆಸುವ ಕಂದ ನಗುವ ಹಿತ ನೀನಲ್ಲವೆ
ಪ್ರಪಂಚದಲಿ ಒಂಟಿಯಲ್ಲ ಜೊತೆ ನೀನಿರಲು
ಪ್ರೀತಿ ವಾತ್ಸಲ್ಯ ಬಾಂಧವ್ಯದ ತುಡಿತ ನೀನಲ್ಲವೆ
ಮರುಭೂಮಿಯಲಿ ಒಯಸಿಸ್ ಸಿಕ್ಕಂತಾದೆ
ಅಕ್ಕರೆ ಆಸರೆ ಕಾರಂಜಿಯ ಪುಟಿತ ನೀನಲ್ಲವೆ
ಪಾಲನೆಯಲಿ ಕಳೆದ ದಿನಗಳು ತಿಳಿಯಲಿಲ್ಲ
ಇಳಿ ವಯಸ್ಸಿನ ಉತ್ಸಾಹದ ಮಿಡಿತ ನೀನಲ್ಲವೆ
ತುಂಬಿದ ನವಮಾಸದಲ್ಲಿ ಬಂದ ಜೀವ ನೀನು
ಮಾಜಾ ಜನುಮಜನುಮದ ಸೆಳೆತ ನೀನಲ್ಲವೆ
ಮಾಜಾನ್ ಮಸ್ಕಿ




ನೈಸ್
Super