ಕಾವ್ಯಸಂಗಾತಿ
ಪ್ರಮೋದ ಜೋಶಿ
“ಅಡಗಿ ಕುಳಿತ ಮಾತು”


ಮೌನದೊಳು ಮಾತು ಅಡಗಿಕುಳಿತಿದೆ
ತರ್ಕಬದ್ಧಿತ ಧೀರ್ಘಾವಧಿ ಯೊಚನೆಗೋ
ಲೆಕ್ಕಿತ ಲಾಭದ ಮೋಹಕೊ
ಆಡದೆ ನಿಶಬ್ದವಾಗಿದೆ
ಬಂಧ ಸಂಬಂಧಗಳ ಬಂಧನದಿ
ನಿರ್ಗಮಿಸಲಾಗದೇ ಒಳಗೆ ಸಿಲುಕಿ
ತನ್ನ ತನವನ್ನೂ ಬಿಡಲಾಗದೆ
ದ್ವಂಧ್ವತ್ವದೊಳು ಮುಳುಗಿರಲು
ನಂಬಿಕೆ ಭಾವದ ಹೊದಿಕೆಯೊಳು
ಬೆನ್ನಿಗೆ ಇರಿದ ಚೂರಿಯಿಂದ
ರಕುತ ಬಾರದ ಗಾಯಕೆ
ವೆಚ್ಚಿಸಿ ತಂದ ಮದ್ದಿಗಾಗಿ
ದ್ವಿಭಾವದ ಮನಸಿನ ಏಕೈಕ ತನು
ಇಡುವ ಹೆಜ್ಜೆಯ ತಳಮಳತನಕೆ
ಹೆಜ್ಜೆಯೂ ಇಡಲಾಗದಂತ ಕ್ಷಣಕೆ
ನಿಂತಲ್ಲೆ ನಿಂತ ಸ್ಥಿತಿಗಾಗಿ
ಆಡುವ ಮಾತಿಗೆ ಕೇಳದ ಕಿವಿ
ಆಸೆ ಆಮೀಷಕೆ ಒಳಗಾಗಿ
ನೈಜ ಗುರುವ ಹಿಂದಿಕ್ಕಿ
ಹಣವಂದನ್ನೆ ಗುರುವಾಗಿಸಿದಾಗ
ಬದುಕಿನೊಳ ಆಗು ಹೊಗುಗಳಿಗೂ
ಬಲಿಪಶುಮಾಡಿ ತೆಗಳುತ
ಒಂಟಿ ಮಾಡಿ ಇಟ್ಟ ಕ್ಷಣಕೆ
ಉತ್ತರವಿಲ್ಲದೇ ಶರಣಾಗತನಾದಾಗ
ನನ್ನ ನಾನೆ ಕಂಡ ನನಗೆ
ಅರಿಯದೇ ದೂಷಿಸಿ ಕೀಳಾಗಿ ನಿಂತಾಗ
ನಿದಿರೆ ದಾರಿಯೂ ದೂರಾಗಿ ಕಂಡಾಗ
ಭ್ರಮನಿರಶನ ಮರೀಚಿಕೆ ಕ್ಷಣಕೆ
ಮೌನದೊಳು ಮಾತು ಅಡಗಿ ಕುಳಿತು
ಹೊರ ಬಾರದೇ ಸತ್ತದ್ದಕ್ಕೆ
ಹೊತ್ತ ಮನ ರೋಸಿಹೋಗಿ
ಇದ್ದ ತನವ ಕುಗ್ಗಿಸಿದೆ
—————-
ಪ್ರಮೋದ ಜೋಶಿ



