ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್


ದುಃಸ್ವಪ್ನಗಳಿಗೆ ಹೆದರಿ ನಿದ್ದೆಮಾಡದಿದ್ದರೆ ಹೇಗೆ ಸಖಿ
ಕಲ್ಲು-ಮುಳ್ಳಿಗೆ ಹೆದರಿ ಹೆಜ್ಜೆಯಿಡದಿದ್ದರೆ ಹೇಗೆ ಸಖಿ
ಕತ್ತಲಲ್ಲೂ ಬೆಳಕನು ಹೊತ್ತು ಚಂದಿರ ಬರುವನಂತೆ
ಕವಿದ ಇರುಳಿಗೆ ಹೆದರಿ ಕಣ್ತೆರೆಯದಿದ್ದರೆ ಹೇಗೆ ಸಖಿ
ಆ ಮರುಭೂಮಿಯಲ್ಲೂ ಬುಗ್ಗೆ ಲಗ್ಗೆಯಿಡುವದಂತೆ
ಬಿರುಬಿಸಿಲಿಗೆ ಹೆದರಿ ಹೊರಬರದಿದ್ದರೆ ಹೇಗೆ ಸಖಿ
ಕಲ್ಲು ಉಳಿಯ ಪೆಟ್ಟು ಉಂಡು ಶಿಲೆಯಾಗುವದಂತೆ
ಹಣೆ ಬರಹಕೆ ಹೆದರಿ ತಲೆಯೆತ್ತದಿದ್ದರೆ ಹೇಗೆ ಸಖಿ
ಕುಂಬಾರನೆದೆ ಪಾತ್ರೆ ಸುಟ್ಟಷ್ಟೇ ಗಟ್ಟಿಯಾಗುವದಂತೆ
ಕಡುಕಷ್ಟಗಳಿಗೆ ಹೆದರಿ ಎದುರಿಸದಿದ್ದರೆ ಹೇಗೆ ಸಖಿ
ಎಮ್ಮಾರ್ಕೆ




ಸಖಿಗೆ ಧೈರ್ಯ ತುಂಬುವ, ಉತ್ಸಾಹಿ ಕುಂಬಾರನ ಬರವಣಿಗೆ ಹೀಗೆ ಮುಂದೆ ಸಾಗಲಿ….