ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅರಿಯಲಾರೆನು ನಿನ್ನ ಮನವನು
ತೆರೆದು ತೋರೆಯ ಆಂತರ್ಯವ
ಭಾವಬಂಧಕೆ ತೊಡಕು ನೀಡಲು
ಕಾಣಲಾರೆನು ಸೌಂದರ್ಯವ/೧/

ಎದೆಯ ಗುಡಿಯಲಿ ಇನಿತು ಪ್ರೀತಿಯ
ಬಯಸಿ ಬಂದಿಹೆ ನಲಿಯುತ
ವಿಧಿಯ ಆಟಕೆ ಮುರುಟಿ ಹೋಯಿತೆ
ಮನವು ನಲುಗಿತು ಮರುಗುತ/೨/

ಮಾತು ನಗುವನು ನುಂಗಿ ಹಾಕುವ
ಸಿಡಿಲ ಭರವನು ತಾಳೆನು
ಕುಳಿತು ಕಲೆತು ಬೆರತು ಉಂಡಿಹ
ಸಿಹಿಯ ಎಂದೂ ಮರೆಯೆನು/೩/

ಬದುಕ ಪಥದಲಿ ಕವಲು ದಾರಿಯ
ಎಣಿಸಬಲ್ಲೆವೇ ಈ ಕ್ಷಣ
ಹಾದಿ ಸವೆಸಲು ಪಾಠ ಹಲವಿದೆ
ಕಲಿಯ ಬೇಕಿದೆ ಪ್ರತಿಕ್ಷಣ/೪/

ಮೌನದೊಳಗಿನ ಭಾವವೆಲ್ಲವು
ಚಿಪ್ಪಿನೊಳಗಿನ ಮುತ್ತದು
ಕಲ್ಲು ಬಂಡೆಯ ತೆರದಿ ಬಾಳಲು
ಚಿಂತೆ ಎಂದೂ ಮುತ್ತದು /೫/


About The Author

Leave a Reply

You cannot copy content of this page

Scroll to Top