ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
“ಹಲವು ಬಲಿದಾನಗಳು”


ಸುಧಾರಣೆಯಾಗುತ್ತವೆ..ಹೀಗೆ
ಅಂದುಕೊಳ್ಳುತ್ತೇವೆ.
ಕೆಲವು ಆಹುತಿಯಿಂದ
ಕೆಲವು ಬಲಿದಾನದಿಂದ
ಹಾಗೆಯೇ ನನ್ನ ವಾತಾವರಣವೂ..
ಅರೆ..! ಏನಾಗಿಹೋಯ್ತು..
ಅಂತ ಚಿಂತಿಸಬಾರದು..
ಬಲಿದಾನಕ್ಕೆ ಬೆದರಬಾರದು..
ಆಹುತಿಗೆ ಅಂಜಬಾರದು..
ಇಲ್ಲದಿರೆ..;
ಭಗತಸಿಂಗ್ ಶಹೀದನಾಗುತ್ತಿರಲಿಲ್ಲ..
ಲಕ್ಷೀಬಾಯಿ ಸಂತಾನ ಕಳೆದುಕೊಳ್ಳುತ್ತಿರಲಿಲ್ಲ..!
ನಿಜ..!
ದೇವರೂ ಸಹ ವರ ದಯಪಾಲಿಸಲು
ತಪಸ್ಸು ಬೇಡುತ್ತಾನೆ
ಹವಿಸ್ಸಿನ ನಂತರವೇ ಕಣ್ಣು ತೆರೆಯುತ್ತಾನೆ..!
ಇದಕ್ಕಲ್ಲವೆ..,
ಪಾನಾ ಹೈತೋ ಕುಛ ಖೋನಾ ಹೈ..!
ಹಸನಾ ಹೈ ತೋ ಕುಛ ರೋನಾ ಹೈ..
ಇಷ್ಟೇ….,
ನಾವು ಬಂದದ್ದು ಏಕೆಂದು
ಇರುವುದು ಏಕೆಂದು
ತಿಳಿದರೆ ಸಾಕು…
ಒಂದು,ಆಂದೋಲನ
ಒಂದು ಕ್ರಾಂತಿ ಆಗಬೇಕಾದರೆ
ಹಲವು ಬಲಿದಾನವೂ ಬೇಕು..!
ಹಲವು ಗಂದಗಿ ತೊಲಗಲು
ಗಂಧ ಹೊತ್ತ ಮರುತ ಬೇಕು
ಹಾಗಾದರೆ ಮಾತ್ರ
ಸುಧಾರಣೆಯ ಸುಗಂಧ ಹರಡೀತು..!!
ಅನಸೂಯ ಜಹಗೀರದಾರ



