ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ ಅವರ
ಗಜಲ್


ಮಾತಿನ ಪದಗಳು ತೊದಲುತಿವೆ ಇಂದು
ಕತ್ತಲೆಗೆ ಕನಸುಗಳು ನಡುಗುತಿವೆ ಇಂದು
ಎಷ್ಟು ಹುಡುಕಿದರು ಸಿಗದು ಸಮಾಧಾನ
ಪಡೆದ ಬಯಕೆಗಳು ಬಳಲುತಿವೆ ಇಂದು
ನಿಸ್ತೇಜ ಚಲನೆಗೆ ಕಣ್ಣುಗಳೇ ಸಾಕ್ಷಿ ಅಲ್ಲವೆ
ಮುಡಿದ ಮಲ್ಲಿಗೆಗಳು ಬಾಡುತಿವೆ ಇಂದು
ಗಲ್ಲೆನ್ನುವ ಬಳೆಗಳು ಸರಿದು ಸ್ತಬ್ಧವಾಗಿವೆ
ಹೊಳೆಯುವ ಕಿರಣಗಳು ಕರಗುತಿವೆ ಇಂದು
ಮನ್ಮಥನ ಜಾಲಕ್ಕೆ ಅಂದು ಸಿಲುಕಿದ ಮಾಜಾ
ಮಾಯೆ ಮೋಹಗಳು ತೊರೆಯುತಿವೆ ಇಂದು
ಮಾಜಾನ್ ಮಸ್ಕಿ




