ಕಾವ್ಯ ಸಂಗಾತಿ
ವೈ ಎಂ ಯಾಕೊಳ್ಳಿ
ಗಜಲ್

ನಾನು ಎಂಬುದು ಹೋಗಲಾರದ ವ್ಯಾಧಿ
ನನ್ನದು ಎಂಬುದು ಬಿಡಲಾರದ ವ್ಯಾಧಿ
ಮಾಡಿದೆನೆಬುದು ಮರೆಯಲಾರದ ವ್ಯಾಧಿ
ಬಿಡೆನೆಂಬುದು ದೂರವಾಗದ ವ್ಯಾಧಿ
ಎಲ್ಲ ನನ್ನಿಂದಲೇ ಎಂಬುದು ಇನ್ನಿರದ ವ್ಯಾಧಿ
ಎಲ್ಲಕೂ ಕಾರಣ ನಾನೆಂಬುದು ನೂರಂದದ ವ್ಯಾಧಿ
ಇರದೇ ನಡೆಯದೆಂಬುದು ಅರ್ಥವಾಗದ ವ್ಯಾಧಿ
ಬರದೇ ಸಾಗದೆಂಬುದು ವ್ಯರ್ಥವಾದ ವ್ಯಾಧಿ
ಹೋದರೆ ಎಲ್ಲ ನಿಲ್ಲುವುದೆಂಬುದು ಹುಸಿಯಾದ ವ್ಯಾಧಿ
ಜೋಗಿ ಇರದೆ ಜಗವಿಲ್ಲೆಂಬುದು ಮೂರ್ಖವಾದ ವ್ಯಾಧಿ
ವೈ. ಎಂ. ಯಾಕೊಳ್ಳಿ





ಅತ್ಯಂತ ವಾಸ್ತವ, ತಾತ್ವಿಕ ಚಿಂತನೆಗಳ ಗಜಲ್
Anubhaavad abhivyaktigolisuva
arthavattaad Gajal Chandavo chand
ಒಳ್ಳೆಯ ಗಜಲ್
ಇಂಥೆಲ್ಲ ವ್ಯಾಧಿಗಳ ಕಳೆಯುವ ವೈದ್ಯನನ್ನು ಹುಡುಕಿಕೊಂಡರೆ ಮಾತ್ರ ಬದುಕು ಸಾರ್ಥ,ಕವಾಗುತ್ತದೆ.