ಪತ್ರ ಸಂಗಾತಿ
ಗಾಯತ್ರಿ ಸುಂಕದ ಬಾದಾಮಿ
ʼಪತ್ರ ಬರಹ ದಿನʼ
ವಿಶೇಷ ಲೇಖನ


ಹಲೋ
ಹೇಗಿದ್ದೀರಾ?
ಕಂಪ್ಯೂಟರ್ ಬಂದ ಮೇಲೆ ನಮಗೆ ಬಹುಶಃ ಬರೆಯುವ ರೂಢಿಯು ಹೋಗಿ ಬಿಟ್ಟಿದೆ ಎನಿಸುತ್ತದೆ. ನಾವು ಚಿಕ್ಕವರಿದ್ದಾಗ ಕಾಪಿ ರೈಟಿಂಗ್ ಬರೆಯುವ ನಿಯಮ ಇತ್ತು..ಅಕ್ಷರಗಳು ದುಂಡಗೆ ಆಗಲಿ ಎಂದು ನಮ್ಮ ಮೇಷ್ಟ್ರು ಬರೆಯಲಿಕ್ಕೆ ಹಚ್ಚುತ್ತಿದ್ದರು.ಆಗಲೇ ನಮಗೆ ಪತ್ರ ಬರೆಯುವ. ನಿಯಮ ಇತ್ತು..ಐದು ಮಾರ್ಕ್ಸ್ ಸಿಗುತ್ತೆ ಅನ್ನುವ ಆಸೆಗೆ ನಮಗೆ ಪತ್ರ ಬರೆಯುವ ಅನಿವಾರ್ಯತೆ ಬಂದಿತ್ತು.
ಚಿಕ್ಕವರಿದ್ದಾಗ ತಂದೆಗೆ ಪತ್ರ ಬರೆಯುವಾಗ ತೀರ್ಥ ರೂಪ ಎಂದು ಬರೆಯುತ್ತಿದ್ದೆವು.. ನಮ್ಮ ಮೇಷ್ಟ್ರಿಗೆ ಕೇಳಿದರೆ ಅವರು ತೀರ್ಥ ದಷ್ಟು. ಪವಿತ್ರ ಎಂದು ಹೇಳುತ್ತಿದ್ದರು. ಚಿಕ್ಕಪ್ಪ , ದೊಡ್ಡಪ್ಪರಿಗೆ ತೀರ್ಥ ಸ್ವರೂಪ ಎಂದು ಬರೆಯುತ್ತಿದ್ದ್ದೆವು..
ತಾಯೀ ಮಾತೃಶ್ರಿ ಎಂದು ಬರೆಯುತ್ತಿದ್ದ ನಾವು ಎಲ್ಲರ ಹೆಸರನ್ನು ಬರೆಯಲಿಕ್ಕಾಗದ ತಾಳ್ಮೆ ಇಲ್ಲವಾದ್ದರಿಂದ ದೊಡ್ಡವರಿಗೆ ನಮಸ್ಕಾರಗಳು, ಚಿಕ್ಕವರಿಗೆ ಆಶೀರ್ವಾದಗಳು ಎಂದು ಶಾರ್ಟ್ ಅಂಡ್ ಸ್ವೀಟಾಗಿ ಬರೆಯುತ್ತಿದ್ದವು.
ನಮ್ಮ ಹಾಸ್ಟೆಲ್ ಫ್ರೆಂಡ್ಸ್ ಪತ್ರ ಬರೆಯಬೇಕಾದರೆ ಬೇಗ ದುಡ್ಡು ಕಳಿಸಿ ಕೊಡದೆ ಇದ್ದರೆ ವಾಪಸ್ ಊರಿಗೆ ಬರುತ್ತೇವೆ ಎಂದು ವಾರ್ನಿಂಗ್ ಪತ್ರ ಬರೆಯುತ್ತಿದ್ದರು. ಅದು ಮುಟ್ಟಿದ ಒಂದೆರಡು ದಿನಗಳಲ್ಲಿ ದುಡ್ಡು ಅಕೌಂಟಿಗೆ ಬಂದು ಬೀಳುತ್ತಿತ್ತು.
ಆಗ ನಾವ್ಯಾರು ಅರ್ಧ ಪತ್ರ ಬರೆಯುವಂತೆ ಇರಲಿಲ್ಲ.ಅರ್ಧ ಪತ್ರ ಬರೆದರೆ ಅದು ಮನೆಯಲ್ಲಿ ನಡೆಯುವ ಸಾವಿನ ಸೂಚನೆ ಎಂದು ದೊಡ್ಡವರಿಂದ ಖಡಕ್ ಎಚ್ಚರಿಕೆ ಸಿಗುತ್ತಿತ್ತು.
ಈಗಲೂ ಹಳೆಯ ಪತ್ರಗಳು ನಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ ಇಡುತ್ತವೆ.
ಫೋನಿನಲ್ಲಿ ಮಾತನಾಡಿದರು , ಆ ಮಧುರ ಬಂಧ, ವಾತ್ಸಲ್ಯ ಸಿಗುತ್ತಿಲ್ಲ. ಎಷ್ಟೋ ಸಾರಿ ಫೋನಿನಲ್ಲಿ ಮಾತನಾಡಲು ಮನಸ್ಸಿರದೆ ನೆಟ್ ವರ್ಕ್ ಸಿಗುತ್ತಿಲ್ಲ ಏನಿದು ಸಬೂಬು ಹೇಳುವ ನಾವು ಇನ್ನು ಮೇಲಾದರೂ ನಮ್ಮ ಗೋಲ್ಡನ್ ಡೇಸ್ಗೆ ನೆನಪಿಸಿ ಕೊಳ್ಳೋಣ.
ಏನಂತೀರಾ?
ಗಾಯತ್ರಿ ಸುಂಕದ ಬಾದಾಮಿ



