ಕಾವ್ಯ ಸಂಗಾತಿ
ಮಮತಾ ಜಾನೆ
ನೀನಾದೆ ಕಣ್ಮರೆ


ಮೊದ ಮೊದಲು ಅಂದೆ
ನಿನಗೆ ನಾನೇ ಲೋಕವೆಂದು
ನಿನ್ನ ಪ್ರೀತಿಯಲಿ ಮುಳುಗಲು
ನೀನಾದೆ ಕಣ್ಮರೆ
ಅನುದಿನ – ಅನುಕ್ಷಣ
ಎಲ್ಲವೂ ನೀನೆ ಎಂದೆ
ಈಗ ಬೇಡವಾದಾಗ
ನೆಪವೊಡ್ಡಿ ದೂರ ಸರಿದೆ
ಕಷ್ಟ- ಸುಖದಲ್ಲಿ ಜೊತೆ ನಿಲ್ಲದೆ
ಕೊನೆಯವರೆಗೂ ಕೊನೆಯಾಗದೆ
ಹೇಳದೆ ಕೇಳದೆ
ನೀನಾದೆ ಕಣ್ಮರೆ
ಹೇಗೆ ಹೇಳಲಿ ಈ ನನ್ನ ಮನಕೆ
ನೀ ಸ್ನೇಹಿತ ಸಂಗಾತಿ ಹಿತೈಷಿ
ಏನೆಂದು ಸಂತೈಸಲಿ
ನೀನಾದೆ ಕಣ್ಮರೆ
ಜೊತೆಗಿರುವ ಆಸೆಯಲ್ಲಿ
ನಿನ್ನದೇ ಗುಂಗಿನಲ್ಲಿ
ನಾ ಕಾಯುತ ನಿಂತೆ
ನೀನಾದೆ ಕಣ್ಮರೆ
ಮಮತಾ ಜಾನೆ



