ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ–12
ಮೊದಲ ಮೈಸೂರು ಭೇಟಿ

ಪ್ರತಿನಿಧಿಗಳ ಕಮಿಷನ್ ವಿಭಾಗವನ್ನು ನನಗೆ ವಹಿಸಿಕೊಡಲಾಗಿತ್ತು. ಅಭಿವೃದ್ಧಿ ಅಧಿಕಾರಿಗಳು ತಮ್ಮ ಪ್ರತಿನಿಧಿಯಾಗಿ ಕೆಲಸ ಮಾಡಲು ಕೆಲವರನ್ನು ಆರಿಸಿ ಅವರಿಂದ ಅರ್ಜಿ ತೆಗೆದುಕೊಳ್ಳುತ್ತಾರೆ. ಮೊದಲಿಗೆ ಶಾಖಾಧಿಕಾರಿಗಳು ಅವರೊಂದಿಗೆ ಮಾತನಾಡಿ ನಂತರ ಒಂದು ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಸೂಚಿಸುತ್ತಾರೆ ಆ ಪ್ರದೇಶಗಳು ವಿಭಾಗಿಯ ಕಚೇರಿಯಲ್ಲಿಯೇ ನಡೆಯುತ್ತದೆ ಪರೀಕ್ಷೆ ಪಾಸಾದ ನಂತರ ಪ್ರತಿನಿಧಿಗಳಿಗೆ ಅವರದೇ ಆದ ಒಂದು ಕ್ರಮ ಸಂಖ್ಯೆಯನ್ನು ನೀಡಲಾಗುತ್ತದೆ ಒಂದು ರಿಜಿಸ್ಟರ್ ನಲ್ಲಿ ಅವರ ವಿವರಗಳನ್ನು ಬರೆದ ನಂತರ ಆ ರಿಜಿಸ್ಟರ್ನ ಕ್ರಮ ಸಂಖ್ಯೆಗೆ ಪ್ರತಿನಿಧಿಗಳ ಕೋಡ್ ನಂಬರ್ ಆಗುತ್ತದೆ ಅದಕ್ಕೆ ಆಯಾ ಶಾಖೆಯ ಕೋಡ್ ಅನ್ನು ಸೇರಿಸಲಾಗುತ್ತದೆ ಹಾಗಾಗಿ ಪ್ರತಿನಿಧಿಗಳ ಕೋಡ್ ಕಂಡ ತಕ್ಷಣವೇ ಅವರು ಯಾವ ಶಾಖೆಯವರು ಎಂಬುದು ಸಾಮಾನ್ಯವಾಗಿ ತಿಳಿಯುತ್ತದೆ . ಕೆಲವೊಮ್ಮೆ ಒಂದು ಶಾಖೆಯಿಂದ ಬೇರೊಂದು ಶಾಖೆಗೆ ವರ್ಗಾವಣೆ ತೆಗೆದುಕೊಂಡು ಹೋದರೂ ಅದೇ ಕೋಡ್ ನಂಬರ್ ಮುಂದುವರೆಯುತ್ತದೆ.

ಪ್ರತಿನಿಧಿಗಳ ಮುಖ್ಯ ಆದಾಯ ಎಂದರೆ ಅದು ಕಮಿಷನ್. ಮೊದಲಿಗೆ ಅವರು ಮಾಡಿಸಿದ ಪಾಲಿಸಿಗಳಿಗೆ ಪ್ರೀಮಿಯಂ ಮೊತ್ತದ ಮೇಲೆ ಅನುಗುಣವಾಗಿ ಒಂದು ಕಮಿಷನ್ ನೀಡಲಾಗುತ್ತದೆ ಇದು ಮೊದಲ ಕಮಿಷನ್ ಎಂದು ಕರೆಯಲ್ಪಡುತ್ತದೆ ಈ ಮೊದಲ ಕಮಿಷನ್ ಬೇರೆಬೇರೆ ಪಾಲಿಸಿಗಳಿಗೆ ಬೇರೆಬೇರೆ ದರದಲ್ಲಿ ನಿಗದಿತವಾಗಿ ಇರುತ್ತದೆ. ನಂತರ ಪ್ರತಿ ಮಾಸ ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಅರ್ಧ ವರ್ಷಕ್ಕೊಮ್ಮೆ ಬರುವ ಪ್ರೀಮಿಯಂ ಗಳು ಮೊದಲ ವರ್ಷದಲ್ಲಿ ಮೊದಲ ವರ್ಷದ ಪ್ರೀಮಿಯಂ ಎಂದು ಕರೆಸಿಕೊಳ್ಳಲ್ಪಡುತ್ತದೆ ಆ ಪ್ರೀಮಿಯಂ ಆಧಾರದ ಮೇಲೆ ನೀಡುವ ಕಮಿಷನ್ ಮೊದಲ ವರ್ಷದ ಕಮಿಷನ್ ಆನಂತರ ಎರಡನೆಯ ವರ್ಷದಿಂದ ಸಾಲಿಸ್ ಸಿ ಮುಗಿಯುವವರೆಗೂ ಬರುವ ಕಮಿಷನ್ ಗಳಿಗೆ ಪುನರಾವರ್ತಿತ ಕಮಿಷನ್ ಎಂದು ಹೇಳಲಾಗುತ್ತದೆ ಈ ಮೂರು ರೀತಿಯ ಕಮಿಷನ್ ಮಾತ್ರವಲ್ಲದೆ ಮೊದಲ ಹಾಗೂ ಮೊದಲ ವರ್ಷದ ಕಮಿಷನ್ ಆಧಾರದ ಮೇಲೆ ಬೋನಸ್ ಕಮಿಷನ್ ಸಹ ನೀಡಲಾಗುತ್ತದೆ. ಬೋನಸ್ ಕಮಿಷನ್ ಒಬ್ಬ ಪ್ರತಿನಿಧಿಗೆ ಕೊಡಬೇಕೆಂದರೆ ಕೆಲವೊಂದು ನಿಯಮಗಳಿವೆ. ಅವುಗಳನ್ನು ಪೂರ್ತಿಗೊಳಿಸಿದ ನಂತರವೇ ಬೋನಸ್ ಕಮಿಷನ್ ನೀಡಬೇಕಾಗುತ್ತದೆ. ಅಲ್ಲದೆ ಪ್ರತಿನಿಧಿಗಳಿಗೆ ಹಬ್ಬದ ಮುಂಗಡ, ವಾಹನ ಮುಂಗಡ ಇತ್ಯಾದಿಗಳನ್ನು ನೀಡಲಾಗುತ್ತದೆ ಅದರ ಕಡೆಗೆ ಕಂತುಗಳನ್ನು ಕಮಿಷನ್ ನಿಂದ ಹಿಡಿದುಕೊಳ್ಳಬೇಕಾಗುತ್ತದೆ ಅದರ ಬಗೆಗೂ ಗಮನ ಇರಬೇಕು.
ಹೊಸ ಪಾಲಿಸಿಗಳು ಸಂಪೂರ್ಣವಾದ ನಂತರ ಮೊದಲ ಕಮಿಷನ್ ವಿವರಗಳು ಹೊಸ ವ್ಯವಹಾರ ವಿಭಾಗದಿಂದ ಕಮಿಷನ್ ವಿಭಾಗಕ್ಕೆ ಬರುತ್ತವೆ ಹಾಗೆಯೇ ಪ್ರತಿ 15ನೆಯ ತಾರೀಕು ಹಾಗೂ ತಿಂಗಳ ಕೊನೆಯಲ್ಲಿ ಒಂದು ಪುನರಾವರ್ತಿತ ಹಾಗೂ ಮೊದಲ ವರ್ಷದ ಪ್ರೀಮಿಯಂಗಳ ನಮ್ಮದೇ ಶಾಖೆಯ ಪಟ್ಟಿ ಬರುತ್ತದೆ ಇದೇ ರೀತಿ ಪುನರಾವರ್ತಿತ ಹಾಗೂ ಮೊದಲ ವರ್ಷದ ಪ್ರೀಮಿಯಂಗಳು ಬೇರೆ ಶಾಖೆಯಲ್ಲಿ ಪಾವತಿ ಯಾಗಿದ್ದರೆ ಅದು ಸಹ ತಿಂಗಳಿಗೊಮ್ಮೆ ಬೇರೆ ಶಾಖೆಯಿಂದ ಪ್ರತಿನಿಧಿ ಇರುವ ಶಾಖೆಗೆ ಬರುತ್ತದೆ ಅದನ್ನು other branch bill ಎಂದು ಕರೆಯುತ್ತಾರೆ ಹೀಗೆ ಬರುವ ವಿವಿಧ ಕಮಿಷನ್ ಪಟ್ಟಿಗಳನ್ನು ಪ್ರತಿನಿಧಿ ಸಂಖ್ಯೆಗಳ ಆಧಾರದ ಮೇಲೆ ವಿಂಗಡಿಸಿ ಇಟ್ಟುಕೊಂಡು ಒಂದು ದೊಡ್ಡ ರಿಜಿಸ್ಟರ್ ನಲ್ಲಿ ಆಯಾ ಪ್ರತಿನಿಧಿಯ ಹಾಳೆಯಲ್ಲಿ ಎಂಟ್ರಿ ಮಾಡಿ ಅದಕ್ಕೆ ಬೋನಸ್ ಕಮಿಷನ್ ಲೆಕ್ಕ ಹಾಕಿ ಕಡೆಗೆ ಆ ಮೊತ್ತವನ್ನು ಬಿಲ್ ನ ಕಾಪಿಗಳನ್ನು ಲೆಕ್ಕಪತ್ರ ವಿಭಾಗಕ್ಕೆ ಕಳಿಸಬೇಕು ಅಲ್ಲಿ ಅದಕ್ಕೆ ತಕ್ಕಂತೆ ಚೆಕ್ ಗಳನ್ನು ಬರೆದು ಪ್ರತಿನಿಧಿಗಳಿಗೆ ನೀಡುತ್ತಾರೆ.

ಈ ರೀತಿಯ ಬೋನಸ್ ಕಮಿಷನ್ ಆಗಾಗಲೇ ಬೇಕಾದರೂ ತೆಗೆದುಕೊಳ್ಳಬಹುದು ಅಥವಾ ತಿಂಗಳಿಗೊಮ್ಮೆ ಬೇಕಾದರೂ ತೆಗೆದುಕೊಳ್ಳಬಹುದು ಅದು ಪ್ರತಿನಿಧಿಗಳ ಆಯ್ಕೆಗೆ ಬಿಟ್ಟಿದ್ದು ಮತ್ತೆ ಕೆಲವರು ವರ್ಷಕ್ಕೆ ಅಥವಾ ಆರು ತಿಂಗಳಿಗೆ ಒಮ್ಮೆ ಒಂದು ಇಡುಗಂಟಾಗಿ ಅದನ್ನು ತೆಗೆದುಕೊಳ್ಳುತ್ತಿದ್ದದ್ದು ಉಂಟು ಅವೆಲ್ಲವನ್ನು ಅವರ ಒಪ್ಪಿಗೆ ಪತ್ರಗಳ ಆಧಾರದ ಮೇಲೆ ಮಾಡಬೇಕಿತ್ತು. ಮೊದಲಿಗೆ ಗೊಂದಲ ಆಗುತ್ತಿದ್ದರೂ ಒಂದೆರಡು ತಿಂಗಳಲ್ಲಿ ಕೆಲಸದ ಮೇಲೆ ಹತೋಟಿ ಬಂದು ಖುಷಿಯಾಗಿ ಮಾಡ ತೊಡಗಿದೆ.
ಆ ವರ್ಷ ಗಣೇಶನ ಹಬ್ಬ ಸೋಮವಾರ ಬಂದಿದ್ದರಿಂದ ಶನಿವಾರ ಭಾನುವಾರ ಸೋಮವಾರ ಮೂರು ದಿನ ಸೇರಿಸಿ ಹೋಗಬಹುದಿತ್ತು ರಜಾ ಹಾಕುವ ಪ್ರಮೇಯವಿರಲಿಲ್ಲ. ಚಿಕ್ಕಬಳ್ಳಾಪುರಕ್ಕೆ ಬಂದ ನಂತರ ಮೊಟ್ಟಮೊದಲಿಗೆ ಮೈಸೂರಿಗೆ ಹೊರಟಿದ್ದು ಮನದಲ್ಲಿ ಒಂದು ರೀತಿಯ ಖುಷಿಯ ಭಾವ ಅಲ್ಲಿ ಸಿಕ್ಕುತ್ತಿದ್ದ ಶಾವಂತಿಗೆ ಬಿಡಿ ಹೂಗಳನ್ನು ಕೊಂಡುಕೊಂಡು ನಾನು ಓಡಾಡುವ ದಾರಿಯಲ್ಲಿ ಆರಂಭವಾಗಿದ್ದ ಹೊಸದೊಂದು ಫ್ಯಾನ್ಸಿ ಸ್ಟೋರ್ ನಲ್ಲಿ ತಂಗಿಯರಿಗೆ ಅಮ್ಮನಿಗೆ ಹಾಗೂ ಅತ್ತೆಗೆ ಬಳೆಗಳನ್ನು ತೆಗೆದುಕೊಂಡು ಶನಿವಾರ ಒಂದು ಗಂಟೆಗೆ ಅನುಮತಿ ತೆಗೆದುಕೊಂಡು ಹೊರಟೆ. ಬೆಂಗಳೂರಿಗೆ ಬಂದು ಮತ್ತೆ ಮೈಸೂರು ಬಸ್ ಹತ್ತಿ ಮೈಸೂರು ತಲುಪಿದಾಗ ರಾತ್ರಿ ೯ ಗಂಟೆ. ದೂರದಿಂದ ಚಾಮುಂಡಿ ಬೆಟ್ಟದ ದೇವಸ್ಥಾನದ ಗೋಪುರ ಮತ್ತು ದೀಪಗಳನ್ನು ನೋಡಿದಾಗ ಕಳೆದುಕೊಂಡದ್ದು ಸಿಕ್ಕಿತು ಎನ್ನುವ ಸಂತೋಷದ ಭಾವ. ರಾತ್ರಿಯೆಲ್ಲಾ ಹರಟೆ ಹರಟೆ. ಮತ್ತೆ ಭಾನುವಾರ ಗೌರಿ ಪೂಜೆ ಸೋಮವಾರ ಗಣಪತಿ ಪೂಜೆ ಎಲ್ಲಾ ಸಾಂಗವಾಗಿ ನಡೆಯಿತು.
ಸಹೋದ್ಯೋಗಿ ನಾಗರಾಜ್ ಅವರ ಕ್ಯಾಮರಾಗೆ ರೋಲ್ ಹಾಕಿಸಿ ತಂದಿದ್ದೆ. ಫೋಟೋಗಳನ್ನು ತೆಗೆದು ಖುಷಿ ಪಟ್ಟಿದ್ದಾಯಿತು. ಮತ್ತೆ ಮಂಗಳವಾರ ಬೆಳಿಗ್ಗೆ ಊರಿಗೆ ಹೊರಡಬೇಕಲ್ಲ ಅನ್ನುವ ಬೇಸರ. ಎಲ್ಲರಿಗೂ ಕೊಡಲು ವಿಳ್ಳೇದೆಲೆ ಬದನೆಕಾಯಿ ಎಲ್ಲಾ ತೆಗೆದುಕೊಂಡು ಬೆಳಿಗ್ಗೆ ೫ ಗಂಟೆಗೆ ಬೆಂಗಳೂರು ಬಸ್ ಹತ್ತಿದ್ದಾಯಿತು. ಸಿಕ್ಕಾಪಟ್ಟೆ ರಷ್..ಅಂತೂ ಆಫೀಸಿನ ಮುಂದೆ ಇಳಿದಾಗ ೧೧_೩೦.
ಮೈಸೂರಿಗೆ ಹೋಗುವಾಗ ಎಷ್ಟು ಸಂತೋಷವೋ ವಾಪಸ್ಸಾಗುವಾಗ ಅಷ್ಟೇ ಬೇಸರ…..

(ಮುಂದುವರೆಯುವುದು)





ಸವಿ ನೆನಪುಗಳು
ಧನ್ಯವಾದಗಳು
ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು.
ಸುಜಾತಾ ರವೀಶ್
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸುಜಾತಾ. ಓದಲು ತುಂಬಾ ಆಸಕ್ತಿದಾಯಕವಾಗಿದೆ
ಧನ್ಯವಾದಗಳು ಸವು ಸ್ಪಂದನೆಗಾಗಿ.
ಸುಜಾತಾ ರವೀಶ್
ಸವಿ ಸ್ಪಂದನೆಗೆ ಧನ್ಯವಾದಗಳು.
ಸುಜಾತಾ ರವೀಶ್
ಉತ್ತಮವಾದ ಮಾಹಿತಿ. ಮತ್ತು ತಮ್ಮ ವೃತ್ತಿಯನ್ನು ಇಷ್ಟಪಟ್ಟುಕೊಂಡು ಕರಾರುವಕ್ಕಾಗಿ ಮಾಡಿಕೊಂಡು ಹೋಗುತ್ತಾ ಸಂಸ್ಥೆಗೆ, ಪ್ರತಿನಿಧಿಗಳಿಗೆ ಮತ್ತು ಪಾಲಿಸಿದಾರರಿಗೆ ಉತ್ತಮವಾದ ಸೇವೆ ಕೊಡುತ್ತಿದ್ದಾರೆ. ಅಭಿನಂದನೆಗಳು
ಹೃತ್ಪೂರ್ವಕ ಧನ್ಯವಾದಗಳು.
ಸುಜಾತಾ ರವೀಶ್