ಕಾವ್ಯ ಸಂಗಾತಿ
ಹೆಚ್. ಎಸ್. ಪ್ರತಿಮಾ ಹಾಸನ್
“ಗೆದ್ದೆತ್ತಿನ ಬಾಲ”


ಚೌರ್ಯವ ಮಾಡುವವರಿಗಿರುವ ಬೆಲೆಯೂ
ಅನುಭವ ಅರಿತು ಕಾರ್ಯಮಾಡಿದವರಿಗಿಲ್ಲ
ಸನ್ಮಾನ ಅವರಿಗೆ ಹೊರತು ಗಮನಿಸಿರಿ
ಕಷ್ಟಪಡುವವರಿಗಿಲ್ಲ, ಸಮೀಕ್ಷೆ ಮಾಡಿದವರಿಗಿಲ್ಲ….
ಗೆದ್ದೆತ್ತಿನ ಬಾಲ ಹಿಡಿದು ಹೋಗುವವರು ಎಲ್ಲಾ
ಶಾಶ್ವತವೂ ಅದಕ್ಕಿಲ್ಲ ಎಂಬುದೇ ತಿಳಿದಿಲ್ಲ
ಅರಿತು ನಡೆದರೆ ಜೀವನವೆಂಬುದ ಮರೆತಿಹರಲ್ಲ
ಜೀವನವೆಂಬುದು ಅಮೂಲ್ಯ ಕಾಣಿಕೆ ತಿಳಿಯಿರೆಲ್ಲ….
ದೊಂಬರಾಟದ ಬದುಕು ಪ್ರಚಾರಕ್ಕೆ ಎಲ್ಲಾ
ವಿಚಾರ ತಿಳಿದು ಬಾಳುವವರೇ ಇಲ್ಲ
ಬೇಕು ಬೇಡಗಳನು ಆಲಿಸುವವರಂತೆ
ನಟಿಸುವವರು ಜನರ ಮಧ್ಯೆ ಮೆಲ್ಲ
ಜೀವನದಿ ಒಳಿತನು ಅರಿತವರಿಲ್ಲ
ಅರಿತಿದ್ದರೆ ಒಳ್ಳೆಯದೇ ಆಗುತ್ತಿತ್ತಲ್ಲ
ಜನರ ಮುಂದೆ ನಾಟಕೀಯ ಬದುಕಾಗಿದೆಯಲ್ಲ
ಇನ್ನು ಏನೇನು ನೋಡಬೇಕಿದೆ ತಿಳಿದಿಲ್ಲ….
ಮುಂದಾದರು ಬದಲಾವಣೆಯಾಗಲಿ
ಮನದ ಕಲ್ಮಶವೂ ತೊಲಗಲಿ
ಸರಿಯಾದ ಬುದ್ಧಿಕಲಿಯುವಂತಾಗಲಿ
ಸಮಾಜವು ಏಳಿಗೆಯನು ಕಾಣಲಿ…….
ಹೆಚ್. ಎಸ್. ಪ್ರತಿಮಾ ಹಾಸನ್



