ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಸಾಕ್ಷರತೆ ಎಂದರೆ ಕೇವಲ ಮನುಷ್ಯನ ವೈಯಕ್ತಿಕ ಬೆಳವಣಿಗೆಗೆ ಅಷ್ಟೇ ಅಲ್ಲದೆ  ಸುಸ್ಥಿರ ಅಭಿವೃದ್ಧಿಗೆ ಅವಶ್ಯಕವಾಗಿ ಬೇಕು ಸಾಕ್ಷರತೆ ಜನರನ್ನು ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುತ್ತದೆ.
*ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪೋಷಣೆ ಮಾಡುತ್ತದೆ*

ಜಾತೀಯತೆ ಬಡತನ ಇವುಗಳನ್ನ ನಿರ್ಮೂಲನೆ ಮಾಡುವಲ್ಲಿ ಸಾಕ್ಷರತೆಯು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಒಬ್ಬ ಮನುಷ್ಯನು ನಾಗರೀಕನಾಗಿ ಬದುಕಲು ಸಾಕ್ಷರತೆ ಎನ್ನುವುದು ಅವನ ಬದುಕಿನ ಕನ್ನಡಿ ಇದ್ದಂತೆ ಅದಕ್ಕಾಗಿ ಪ್ರತಿಯೊಬ್ಬರೂ ಸಾಕ್ಷರರಾಗುವುದು  ಅತಿ ಅವಶ್ಯ ಅಷ್ಟೇ ಅಲ್ಲದೆ
ಆರೋಗ್ಯವನ್ನ ಉತ್ತಮ ರೀತಿಯಿಂದ ಕಾಪಾಡಿಕೊಳ್ಳಲು ತಿಳುವಳಿಕೆಯನ್ನು ಮೂಡಿಸುವಲ್ಲಿ ಸಾಕ್ಷರತೆಯು ಅನುಕೂಲೀಸುತ್ತದೆ.

ಇನ್ನು ಪ್ರತಿ ವರ್ಷವೂ *ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಸೆಪ್ಟೆಂಬರ್ 8 ರಂದು ಆಚರಿಸಲಾಗುತ್ತದೆ* ಇದರ ಮುಖ್ಯ ಉದ್ದೇಶ ಸಮುದಾಯ ಮತ್ತು ಸಮಾಜಗಳಿಗೆ ಸಾಕ್ಷರತೆಯ ಮಹತ್ವವನ್ನು ತಿಳಿಸುವುದು ಮತ್ತು ಅದರ ವೈಶಿಷ್ಟವನ್ನು ಜನರಿಗೆ ಮನದಟ್ಟಾಗುವಂತೆ ತಿಳಿಸುವುದು.

ಸಾಕ್ಷರತೆಯನ್ನುವುದು ಕೇವಲ ಶಿಕ್ಷಣದ ಒಂದು ಭಾಗವಲ್ಲ ಬದಲಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಒಂದು ಪ್ರಮುಖ ಸಾಧನ ಇದು ಜನರ ಬದುಕನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಾಕ್ಷರತೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುತ್ತದೆ ಮತ್ತು ಜನರಲ್ಲಿ ಶಾಂತಿಯನ್ನು ಒದಗಿಸುತ್ತದೆ.

1965 ರಲ್ಲಿ ಯುನಿಸ್ಕೋ ಈ ದಿನವನ್ನು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಿಸಿತು. ಮತ್ತು 1967ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆಯನ್ನು ಆಚರಿಸಲಾಯಿತು.

ಮುಖ್ಯವಾಗಿ ಸಾಕ್ಷರತೆಯ ಉದ್ದೇಶ ಸಮಾಜದಲ್ಲಿ ಪ್ರತಿಯೊಬ್ಬರೂ ಕೂಡ ಅಕ್ಷರಸ್ಥರಾಗಬೇಕು ಮತ್ತು ಶಿಕ್ಷಣ ಎಲ್ಲರಿಗೂ ಲಭ್ಯ ಆಗುವಂತೆ ಪ್ರೋತ್ಸಾಹಿಸಬೇಕು.

ವಿಶ್ವಸಂಸ್ಥೆಯು ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಇನ್ನಸ್ಕೋ ಪ್ರತಿ ವರ್ಷ ಸೆಪ್ಟೆಂಬರ್ 8ರಂದು ಸಾಕ್ಷರತಾ ದಿನವನ್ನು ಆಚರಿಸಲು ಘೋಷಿಸಲಾಯಿತು.

ಇನ್ನು ಸಾಕ್ಷರತಾ ದಿನವನ್ನು ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಕೂಡ ಸಾಕ್ಷರತೆಯನ್ನು ಬೆಳೆಸಬಹುದು.

ಇನ್ನು ಭಾರತದಲ್ಲಿ ಸಾಕ್ಷರತಾ ಕಾರ್ಯಕ್ರಮಗಳು ವಯಸ್ಕರ ಅನಕ್ಷರತೆಯನ್ನು ಕಡಿಮೆ ಮಾಡಲು ಡಿಜಿಟಲ್ ಕೌಶಲ್ಯಗಳನ್ನು ಒದಗಿಸಲು ಮತ್ತು ಸಮುದಾಯದ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.
ನವ ಭಾರತ ಸಾಕ್ಷರತಾ ಕಾರ್ಯಕ್ರಮ .ಈ ಕಾರ್ಯಕ್ರಮವು
2022- 23 ರಿಂದ 2027- 28 ರ ವರೆಗೆ ಜಾರಿಯಲ್ಲಿದ್ದು ಎಲ್ಲಾ ವಯಸ್ಕರಿಗೂ ಮೂಲಭೂತ ಸಾಕ್ಷರತೆ ಮತ್ತು ಜೀವನ ಕೌಶಲನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಮತ್ತು ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಂತಹ ಕಾರ್ಯಕ್ರಮಗಳು ಜನರನ್ನು ತಾಂತ್ರಿಕವಾಗಿ ಸಾಕ್ಷರನ್ನಾಗಿಸುವ ಗುರಿ ಹೊಂದಿದೆ.

ವಿಶಿಷ್ಟವಾದ ಯೋಜನೆಗಳು ಅಂತ ನೋಡುವುದಾದರೆ ಕರ್ನಾಟಕದಲ್ಲಿ ಫಡನಾ ಲಿಖನಾ ಅಭಿಯಾನ ಮತ್ತು 500 ಗ್ರಾಮ ಪಂಚಾಯತಿಗಳಲ್ಲಿ ಸಂಪೂರ್ಣ ಸಾಕ್ಷರನ್ನಾಗಿಸುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ಒಟ್ಟಿನಲ್ಲಿ ಭಾರತವು ಸಾರ್ವತ್ರಿಕ ಸಾಕ್ಷರತ ದಿನ ಸಾಧಿಸಲು ಎಲ್ಲರಿಗೂ ಶಿಕ್ಷಣ ತಲುಪಿಸಲು ಪ್ರಯತ್ನಿಸುತ್ತಿದೆ.
2011ರ ಜನಗಣತಿ ಪ್ರಕಾರ ಭಾರತದ ಒಟ್ಟು ಸಾಕ್ಷರತೆ *74.04% ಇದರಲ್ಲಿ ಪುರುಷರ ಸಾಕ್ಷರತೆ *82.14%* ಮತ್ತು ಮಹಿಳಾ ಸಾಕ್ಷರತೆ *65.46%* ಸಾಧಿಸಿದೆ.

ಇನ್ನು ಸಾಕ್ಷರತೆ ಬದುಕಿಗೆ ಎಷ್ಟು ಮುಖ್ಯ ಎನ್ನುವುದನ್ನು ನೋಡುವುದಾದರೆ.*ಉದಾಹರಣೆಗೆ*.ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳೆದರು ಅವರಲ್ಲಿ ದೊಡ್ಡವನು ಮಹೇಶ ಮತ್ತು ಚಿಕ್ಕವನು ಗಿರೀಶ ಇಬ್ಬರನ್ನ ಸಾಕಿ ಬೆಳೆಸುವ ಜವಾಬ್ದಾರಿ ತಾಯಿಯದ್ದು  ಆದರೆ ಮಹೇಶನು ಓದಿದಂತೆ ಆತನ ತಮ್ಮ ಓದಲು ಆಸಕ್ತಿ ಇರದ ಕಾರಣ ತಾಯಿಯು ಆತನನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಳು. ಆಗ ಒಂದು ದಿವಸ ಮಹೇಶ ಉತ್ತಮವಾದ ವಿದ್ಯಾಭ್ಯಾಸದೊಂದಿಗೆ ಉತ್ತಮ ಅಂಕಗಳನ್ನು ಗಳಿಸಿ ಉತ್ತಮ ಹುದ್ದೆಯನ್ನು ಪಡೆದುಕೊಂಡನು. ಒಂದು ದಿವಸ ತಾಯಿಗೆ ಅನಾರೋಗ್ಯ ಉಂಟಾದಾಗ ತಾಯಿ ತನ್ನ ಮಗನಿಗೆ ಕರೆ ಮಾಡುತ್ತಾಳೆ ಮಗನೇ ಬೇಗನೆ ಬಂದುಬಿಡು ಎಂದು ಆದರೆ ಅವನು ಕೆಲಸದ ಒತ್ತಡದಿಂದ ಪತ್ರದೊಂದಿಗೆ ತನ್ನ ತಾಯಿಯೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಂಡತ್ತಾನೆ ಆದರೆ ಅದನ್ನು ಓದಲು ಬಾರದ ಗಿರೀಶ ಪತ್ರವನ್ನು ಓದಿ ಹೇಳು ಮಗ ತಿಳಿದಷ್ಟು ಅಂತ ತಾಯಿಯು ಹೇಳುತ್ತಾಳೆ ಆಗ ಮಗನು ಪತ್ರವನ್ನು ಓದದೆ ಜೋರಾಗಿ ಅಳುತ್ತಾ ಕೊಡುತ್ತಾನೆ ಯಾಕೆ ಅಳುವೆ ಎಂದು ಕೇಳಿದಾಗ ಅಣ್ಣನಿಗೆ ಅಪಘಾತವಾಗಿದೆಯಂತೆ ಎಂದು ಹೇಳುತ್ತಾನೆ ಅದನ್ನು ಕೇಳಿದ ತಾಯಿ ಗಾಬರಿಗೊಳುತ್ತಾಳೆ, ಹೀಗೆ ದಾರಿ ಯುವಕನು ಒಬ್ಬ ನೋಡಿ ಯಾಕೆ ಅಳುತ್ತಿರುವಿರಿ ಎಂದು ಕೇಳಿದಾಗ ಈ ಪತ್ರವನ್ನು ನೋಡಿ ಎಂದು ಹೇಳಿದರು ಆಗ ಆತನು ಓದಿ ಆಕೆಗೆ ಹೇಳುತ್ತಾನೆ ಅಲ್ಲಿ ನಿನ್ನ ಮಗನು ಕ್ಷೇಮವಾಗಿದ್ದಾನೆ ಆದಷ್ಟು ಬೇಗನೆ ಹಣ ಸಂಪಾದನೆ ಮಾಡಿಕೊಂಡು ಬರುವೆ ಎಂದು ಪತ್ರದಲ್ಲಿ ಬರೆದಿದ್ದಾನೆ ಎಂದು ಆಗ ತಾಯಿಯ ಮನಸ್ಸು ನಿರಾಳವಾಗುತ್ತದೆ ತನ್ನ ತಮ್ಮನಿಗೆ ತನ್ನ ತಪ್ಪಿನ ಆರಿವಾಗುತ್ತದೆ ನಾನು ಕೂಡ ಚೆನ್ನಾಗಿ ಓದಿದ್ದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ ಎಂದು, ಇದಕ್ಕೆ ಹೇಳಲು ಪ್ರತಿಯೊಬ್ಬರೂ ಕೂಡ ಶಿಕ್ಷಣವನ್ನ ಪಡೆಯುವುದು ಮಾನವನ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಖ್ಯವಾಗಿ ಸಾಕ್ಷರಾಗುವುದು ಒಳ್ಳೆಯದು.ನಮ್ಮಿಂದ ನಾಲ್ಕು ಜನರನ್ನ ಶಿಕ್ಷಣವಂತರಾಗಿಸುವುದು ಸಮಾಜದ ಉತ್ತಮ ಕಾರ್ಯ ಹಾಗಾಗಿ ಪ್ರತಿಯೊಬ್ಬರೂ ಕೂಡ ಶಿಕ್ಷಣವಂತರಾಗೋಣ ಸಮಾಜವನ್ನು ಸಾಕ್ಷರತೆ ಎಡೆಗೆ ಕರದೊಯ್ಯೋಣ.


About The Author

1 thought on ““ಸಾಕ್ಷರತೆಯಿಂದ ಸಮಾಜದ ಪ್ರಗತಿ” ನಾಗರತ್ನ ಹೆಚ್.ಗಂಗಾವತಿ ಅವರಿಂದ ʼಸಾಕ್ಷರತಾದಿನʼಕ್ಕೊಂದು ಬರಹ”

  1. ಸಾಕ್ಷರತಾ ಕುರಿತು ಉತ್ತಮ ಮಾಹಿತಿಯ ಲೇಖನ ಬರೆದಿದ್ದೀರಿ…
    ಅಭಿನಂದನೆಗಳು ಮೇಡಂ..

Leave a Reply

You cannot copy content of this page

Scroll to Top