ಕಾವ್ಯ ಸಂಗಾತಿ
ಸವಿತಾ ದೇಶಮುಖ
ʼಮುಂಗಾರಿನ ಮುಗುಳುʼ


ಮುಂಗಾರಿನ ಮುಗುಳು ‘ಅಂಬು’ ನಗೆಯು
ಅತಿತ್ತ ಹರಿವ ಮುಂಗುರುಳ ಸುಳಿಯು
ಹನಿ ಹನಿ ಸುರಿವ ಮಳೆಯ ಧಾರೆಯು!!೧!!
ಮೈ ಹರವಿ ನಿಂತಿಹಳು ಧರೆಯು
ಸುಳಿ ಸುಳಿದಾಡಿ ಹರಿವ ನೀರ ತೊರೆಯು
ಮಣ್ಣಿಗೆ ಮುದ್ದು ಮಾತುಗಳ ಹೇಳುತ್ತಿವೆ !!೨!!
ಕವಿದ ಮೋಡಗಳ ಮಂಗಳ ಮಳೆಯಾಗಿ
ತನ್ನೆದೆಯ ಮುದ್ದು- ಮೃದು ಮಾತಾಗಿ
ಮುಗುಳುನಗೆಯ ಮಮತೆ ಹಾಸು ಹಾಸಿ!!೩!!
ಮರಗಿ ಬತ್ತುತ್ತಿರುವ ಭೂಮಿಗೆ ಜೀವಾಗಿ
ಮುಗ್ಗರಿಸುವ ಮೋಡಗಳಿಗೆ ಮುತ್ತಾಗಿ
ಮುಗುಳು ಹನಿಗಳ ಸೇತು ಬಂಧವಾಗಿ !!೪!!
ಪ್ರಕೃತಿ ಮುದ್ದಿನ ಹಚ್ಚ ಹಸಿರಿನ ಶಿರಿಯಾಗಿ
ಹುಲುಸಾಗಿ ಬೆಳೆವ ಬೆಳೆಗೆ ಹೊಸ ಬದುಕಾಗಿ
ನಿಂದಿಹಳು ವರ್ಷಧಾರಿ ತನ್ನ ಪ್ರೇಮದಿ!!೫!
ನೋಡಲು ಎರಡು ಕಂಗಳು ಸಾಲದು
ಜಲವೇರಿದ ಅಂದದ ರಮ್ಯ ತಾಣವದು
ಭೂವಿ ಮಡಿಲ ಸೌಂದರ್ಯ ಸವಿಯು!೬!
ಸವಿ ಔತಣದ ದೃಶ್ಯವು ವಿಮಲ ವಸುಂಧರೆ
ಮೋಡಿ ಸೃಶ್ಯವು..!!!!!
ಸವಿತಾ ದೇಶಮುಖ




Very nice ….
Nimma Kavana nimma bhava. Super mam