ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಡಾ.ಸವ೯ಪಲ್ಲಿ ರಾಧಾಕೃಷ್ಣನ್ ಅವರ ಜನುಮದಿನದ ಗೌರವಾರ್ಥ ಇಂದು ಶಿಕ್ಷಕರ ದಿನ ಆಚರಿಸುತ್ತೇವೆ.ಅವರೊಬ್ಬ ಶ್ರೇಷ್ಠ ಶಿಕ್ಷಕರು ಮತ್ತು ತತ್ವಜ್ಞಾನಿ,ಭಾರತದ ಎರಡನೆಯ ರಾಷ್ಟ್ರಪತಿ ಯಾಗಿ ಸೇವೆ ಸಲ್ಲಿಸಿದರು.
ಬಡತನದಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಉನ್ನತ ಸ್ತರಕ್ಕೇರಲು ಮೂಲಕಾರಣ ಅವರ ಪ್ರಬಲ ಇಚ್ಛಾಶಕ್ತಿ, ಅವಿರತ ಶ್ರಮ, ನಿರಂತರ ಅಧ್ಯಯನ ಅದಲ್ಲದೆ ಆದೆಲ್ಲವನ್ನು ಅನುಷ್ಠಾನಕ್ಕೆ ತಂದು ಯಶಸ್ವಿಯಾದುದು ಇತರರಿಗೆ ಪ್ರೇರಣೆ ಹಾಗೇ ದಾರಿದೀಪವಾಗಿದೆ.

ಶಿಕ್ಷಣ,ಶಿಕ್ಷಕ, ವಿದ್ಯಾರ್ಥಿ ಈ ಮೂರರಲ್ಲೂ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಯಾಗಿವೆ ಇಂದಿನ ದಿನಗಳಲ್ಲಿ.ಮೊದಲನೆಯದಾಗಿ ನಾವು ಮಕ್ಕಳಿಗೆ ಯಾವ ಪ್ರಕಾರದ ಶಿಕ್ಷಣ, ಭೋದನೆ ಕ್ರಮ ಅನುಸರಿಸುತ್ತಿದ್ದೇವೆ ಎಂದು ಅವಲೋಕಿಸಿಕೊಳ್ಳುವ ಹೊತ್ತು.
ಬರೀ ಅಂಕಾಧಾರಿತ ಶಿಕ್ಷಣವಾಗದೇ ಮೌಲ್ಯಾಧಾರಿತ ಶಿಕ್ಷಣ ಅತ್ಯಗತ್ಯವಿದೆ.
ಅವನ ಸೃಜನಶೀಲತೆ, ಪ್ರತಿಭೆಗೆ ತಕ್ಕಂತೆ ಉದ್ಯೋಗ ಸೃಷ್ಟಿಸಿಕೊಳ್ಳುವ ಕೌಶಲ್ಯಧಾರಿತ ಶಿಕ್ಷಣ ಬೇಕು.
ಬದುಕು ಕಟ್ಟಿಕೊಳ್ಳಲು ಸಹಾಯವಾಗುವ ಹಾಗೇಯೇ ಎಂಥದ್ದೆ ಆಗಲಿ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ತುಂಬುವ ಕೆಲಸ ಶಿಕ್ಷಣದಿಂದಾಗಬೇಕು.
ಶಿಕ್ಷಕನನ್ನು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಎಂದು ಗುರುವನ್ನು ದೇವರಿಗೆ ಹೋಲಿಸಲಾಗಿದೆ ಆದರೆ ಆತ ಹೋಲಿಕೆಗೆ ತಕ್ಕಂತೆ ಇರದೆ ತೂಕ ಕಡಿಮೆ ಆಗುತ್ತಿದೆ ಎಂದೆನಿಸುತ್ತಿಲ್ಲವೇ ಆಗಂದ ತಕ್ಷಣ ಶಿಕ್ಷಕರು ಯಾರು ಅನ್ಯಥಾ ಭಾವಿಸಬೇಡಿ ಕೆಲವೊಬ್ಬ ತಿಳಿಗೇಡಿತನದಿಂದ ವತಿ೯ಸುವವರಿಗೆ ಈ ಮಾತು ಎಂ.ಪಿ.ಜೆ.ಅಬ್ದುಲ್ ಕಲಾಂ ಅವರ ಮಾತೊಂದಿದೆ  *ಒಂದು ಉತ್ತಮ ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರು, ಶಿಕ್ಷಕರು,ಸಮಾಜ* ಈ ಮೂರು ಆಧಾರಸ್ತಂಭಗಳನ್ನು ಆಧರಿಸಿರುತ್ತದೆ ಎಂದು ಎಷ್ಟು ಸತ್ಯವಾದ ಮಾತು ಅಲ್ಲವೇ?
ಶಿಕ್ಷಕರ ಅನ್ಯಪರ ಹೊರೆ ಕಡಿಮೆ ಮಾಡಬೇಕು ಮೊದಲಿನಂತೆ ಭೋದನೆ ಒಂದಿರದೆ ಅನ್ಯ ಇತರ ಚಟುವಟಿಕೆ, ಬಿಸಿ ಊಟದ ಜವಾಬ್ದಾರಿಗಳಲ್ಲೇ ಮುಳುಗಿಹರನ್ನು ಕಾಣುತ್ತಿರುವೆವು.
ಆ ಕೆಲಸಗಳಿಗೆಂದೆ ಪರ್ಯಾಯ ಸಿಬ್ಬಂದಿ ನೇಮಿಸಿದರೆ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಭೋದನೆ ಕಡೆ ಗಮನ ಹರಿಸಲು ಸಮಯವಾಕಾಶವಾಗುವುದಲ್ಲ.
ಜಿ.ಪಿ.ರಾಜರತ್ನಂ ಅವರ ಸಲಹೆಯೊಂದನ್ನು ಓದಿದ್ದೇನೆ ನೀನು ಏನಾದರೂ ಮಾಡುವ ಮೊದಲು ವಿಧ್ಯಾರ್ಥಿ ಆಗು,ಅಭ್ಯಸಿಸು ಆನಂತರ ಪುನರ್ ಮನನ ಮಾಡಿಕೊಂಡು ಪಾಠ ಮಾಡು,ಆ ಕ್ಷಣ ಅದನ್ನು ಹರಿದುಹಾಕು ನಾಳೆಗೆ ಮತ್ತೆ ತಯಾರಾಗು ಎಂದು ಅಂದರೆ ಶಿಕ್ಷಕ ನಿರಂತರ ಅಧ್ಯಯನಶೀಲನಾಗಿರಬೇಕು ಹೊಸತನಕ್ಕೆ ಒಗ್ಗಿಕೊಳ್ಳಬೇಕು ಎನ್ನುವುದಾಗಿದೆ.
ಬದಲಾದ ಕಾಲಘಟ್ಟದಲ್ಲಿ ಶಿಕ್ಷಕನು ಬದಲಾಗಿಹನು ಆದರೆ ಸಮಾಜಕ್ಕೆ ಉತ್ತಮ ನಾಗರೀಕನನ್ನಾಗಿ ಮಾಡುವ ಜವಾಬ್ದಾರಿಯ ಒಂದು ಭಾಗವಲ್ಲವೇ ಹಾಗಾಗಿ ಆದಷ್ಟು ನುಡಿಯಂತೆ ನಡೆಯಿದ್ದರೆ ಅದು ಸಾರ್ಥಕ ಬದುಕು.
ನನ್ನ ವೃತ್ತಿಯಾಚೆಯ ಶಿಕ್ಷಕ ಸ್ನೇಹಿತರನ್ನು ಕಂಡಿದ್ದೇನೆ ಅವರಲ್ಲಿ ಬಹುತೇಕ ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವರು ಮತ್ತು ವಿದ್ಯಾರ್ಥಿಗಳ ಯಶಸ್ಸು ಕಂಡು ಪೋಷಕರಿಗಿಂತ ಮಿಗಿಲಾದ ಆನಂದ ಅನುಭವಿಸುವವರು ಶಿಕ್ಷಕರೇ ‌ಆಗಿರುತ್ತಾರೆ‌.
ಇನ್ನು ವಿಧ್ಯಾರ್ಥಿ ಅಂದಿನಂತೆ ಇಂದಿನ ವಿದ್ಯಾರ್ಥಿಗಳೆಲ್ಲರೂ ವಿಧೇಯರಾಗಿಲ್ಲ ತುಂಟಾಟ,ಅರಿಯದ ವಯಸ್ಸು, ಹುಡುಗಾಟ, ಪರಿಪಕ್ವತೆ ಇರದ ಕಾರಣ ಸ್ವಲ್ಪ ಓದಿನಲ್ಲಿ ತಲ್ಲೀನರಾಗದವರನ್ನು ಸರಿ ದಾರಿಗೆ ತರುವ ಸವಾಲುಗಳಿವೆ ಶಿಕ್ಷಕರಿಗೆ.
ಎಲ್ಲರೂ ಹೆಚ್ಚಿನ ಅಂಕಗಳನ್ನು ಪಡೆಯುವವರು ಆದರೆ ಮೌಲ್ಯಾಧಾರಿತ,ಅವರು ಅಥ೯ಮಾಡಿಕೊಂಡಿದ್ದು ಎಷ್ಟು ಎಂಬುದು ಬಹುಮುಖ್ಯ ದಿನೇ ದಿನೇ ಹೆಚ್ಚುತ್ತಿರುವ ಬಾಲಾಪರಾಧಗಳ ನೋಡುತ್ತಿದ್ದರೆ ಪಠ್ಯದಲ್ಲಿ ಅದಕೆ ಸಂಬಂಧಿಸಿದಂತೆ ಪೂರಕ ಮಾಹಿತಿ,ಅರಿವಿನ ಆಂದೋಲನ ಆಗಬೇಕು ಅದು ಶಿಕ್ಷಣದಿಂದ ಎಂದೆನಿಸುತ್ತದೆ.
ಇದೆಲ್ಲಾ ಹೇಳುತ್ತಾ ನನ್ನ ಶಾಲಾ ದಿನಗಳು ನೆನಪಾದವು ನಾನು ತರಗತಿಗೆ ಮೊದಲಿಗಳೇ ಪ್ರತಿವರ್ಷ, ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವು ಬಹುಮಾನ ಪುರಸ್ಕಾರಗಳನ್ನು ಪಡೆದೆ ಅದಕೆ ಮುಖ್ಯ ಕಾರಣ ನನ್ನ ಅಧ್ಯಾಪಕರು, ಸ್ವಲ್ಪ ಸಂದೇಹದಿಂದ ಹಿಂಜರಿದರು ನೀನು ಮಾಡು ನಿನ್ನಿಂದ ಸಾಧ್ಯ ಎಂದು ಪ್ರೇರೆಪಿಸುತ್ತಿದ್ದರು.
ತಮ್ಮ ಮಕ್ಕಳಿಗಿಂತ ಮಿಗಿಲಾಗಿ ಪ್ರೇಮವಿತ್ತು, ಭವ್ಯ ಭವಿಷ್ಯ ನಿರ್ಮಾಣಕ್ಕಾಗಿ ಓದು ಅದು ನಿನ್ನಿಂದಾಗುವುದು ಎಂಬ ಆತ್ಮವಿಶ್ವಾಸ ತುಂಬುವ ನುಡಿ ಕೇಳಿ ಅಸಾಧ್ಯಗಳು ಸಾಧ್ಯವಾಗುತ್ತಿದ್ದವು, ಸಂಕೀರ್ಣವಾದವು ಸರಳವೇ ಎಂದೆನಿಸುತ್ತಿತ್ತು.
ನನ್ನ ಬದುಕಿನಲ್ಲಿ ಬಂದಂತಹ ಪೂಜನೀಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು.
ಒಂದಿಬ್ಬರ ಹೆಸರು ಹೇಳದೇ ಇರಲಾಗದು ನಾನು ಹತ್ತನೇ ತರಗತಿ ಓದುತ್ತಿದ್ದೆ ಆಗ ಅಕ್ಕನಿಗೆ ಪ್ರವಾಸಕ್ಕೆ ಹಣ ನೀಡಿ,ನೀನು ಮುಂದಿನ ಬಾರಿ ಹೋಗುವಂತೆ ಅಂದಿದ್ದರು ಅಮ್ಮ,ಆಗ ಪ್ರಾಂಶುಪಾಲರಾದ ಸದಾನಂದ ಮೂತಿ೯ ಸರ್ ಏಕೆ ಬರುವುದಿಲ್ಲ ನಾನು ಕೊಡುವೆ ಶಾರದಾಳ ಹೆಸರು ಸೇರಿಸಿಕೊಳ್ಳಿ ಎಂದು ಅಮೃತಲಿಂಗಂ ಪಿಟಿ ಸರ್ ಗೆ ಹೇಳಿದರು ಆನಂತರ ಅಮ್ಮ ಅವರಿಂದ ಏಕೆ ಹಣ ನಾನೇ ಕೊಡುವೆ ಎಂದು ಕೊಟ್ಟರು.
ಅವರ ಶಿಸ್ತಿನ ಸಿಪಾಯಿ, ವ್ಯಕ್ತಿ ವ್ಯಕ್ತಿತ್ವ ಹಾಗೇ ಇತ್ತು ಅವರ ಮೆಚ್ಚಿನ ವಿದ್ಯಾರ್ಥಿನಿ ನಾನು ಆಗಿದ್ದೆ ಎಂಬುದು ನೆನೆದರೆ ಇಂದಿಗೂ ಹೃದಯದಲ್ಲಿ ಹೇಳಲಾಗದಷ್ಟು ಹರುಷ .
ಇನ್ನೊಬ್ಬ ಗುರು ವೈಯೆಕೆ ಎಂದು ಅವರು ತಮ್ಮ ಮಗಳಂತೆ ನೀನು ಮಾಡುವೆ ನಿನ್ನಲ್ಲಿ ಆ ಸಾಮರ್ಥ್ಯ ಇದೆ ಎಂದು ಸದಾ ಸಕಾರಾತ್ಮಕವಾಗಿ ಬೆಂಬಲಿಸುತ್ತಿದ್ದ ನಿಷ್ಕಲ್ಮಶ ನಿಸ್ವಾರ್ಥ ಜೀವದ ಗುರುವಯ೯.
ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡಲು ಶಿಕ್ಷಕರಿಗೆ ಸಾಧ್ಯ.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ,ಮಕ್ಕಳಲ್ಲಿರುವ ಕಲೆ ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಿ ಬೆನ್ನು ತಟ್ಟಿ ಭರವಸೆ ತುಂಬಿ ಅಸಾಧ್ಯವನ್ನು ಸಾಧ್ಯವಾಗಿಸುವವರು ಶಿಕ್ಷಕರು.
ಇಂದು ಎಂಥಹಾ ಶಿಕ್ಷಣ ಬೇಕು ಸೋಲಿಗೆ ಕುಗ್ಗದ, ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಕುಶಲತೆ ಕಲಿಸಬೇಕು, ಅವಮಾನಗಳನ್ನು ಕಲಿಕೆಗೆ ದಾರಿ ಎಂದು ತಿಳಿದು ಸನ್ಮಾನಿಸುವಂತೆ ಬೆಳೆಯುವ ಆತ್ಮಾಭಿಮಾನ ಎದೆಯಲ್ಲಿರಬೇಕು.
ಸಂಪತ್ತಿಗಿಂತ,ಯಶಸ್ಸಿಗಿಂತ ಸಾಮರಸ್ಯದ ಸಹಬಾಳ್ವೆ, ಮಾನವೀಯತೆ ಮೈಗೂಡಿಸಿಕೊಳ್ಳುವ ವಿದ್ಯೆ ಬೇಕು.
 ‌
ನಿಸ್ವಾರ್ಥದಿಂದ ಆಶಿಸುವ ಹಾರೈಸುವ ಹೃದಯ ಗುರುವಿನದು ಗುರುವನ್ನು ಮೀರಿಸುವಂತೆ ಬೆಳೆದಾಗ ಸಂಭ್ರಮಿಸುವ ಮನ ಎಂದಾದರೆ ಅದು ಶಿಕ್ಷಕರು.
ಶಿಕ್ಷಕ  *ಶಿಕ್ಷಣದಿಂದ ಶಿಲೆಯಾಗಿ ಕ್ಷಣಕ್ಷಣಕ್ಕೂ ಕಡೆಯುವ ಕರ್ಮಯೋಗಿ* ನಿನಗಿದೋ ಅನಂತ ನಮನಗಳು.


About The Author

Leave a Reply

You cannot copy content of this page

Scroll to Top