ಶಿಕ್ಷಕ ಸಂಗಾತಿ
ಮಮತಾ ಜಾನೆ
ಶಿಕ್ಷಕ ದಿನಾಚರಣೆಯ ವಿಶೇಷ-

ಗುರು ಬ್ರಹ್ಮ ಗುರು ವಿಷ್ಣು:
ಗುರು ದೇವೋ ಮಹೇಶ್ವರ:
ಗುರು ಸಾಕ್ಷಾತ್ ಪರಬ್ರಹ್ಮ ತಸ್ಥೆ ಶ್ರೀ ಗುರುವೇ ನಮಃ
ಅಜ್ಞಾನದ ಕತ್ತಲೆಯನ್ನು ತೆಗೆದುಹಾಕುವವರು. ಗುರು ಜ್ಞಾನವನ್ನು ಸೃಷ್ಟಿಸುತ್ತಾರೆ ಮತ್ತು ಅಜ್ಞಾನವನ್ನು ನಾಶ ಮಾಡುತ್ತಾರೆ. ಹೀಗಾಗಿ ಗುರುವು ಅಂಧಕಾರವನ್ನು ಹೋಗಲಾಡಿಸುವ ಮತ್ತು ಜ್ಞಾನೋದಯದ ಮುಂಚೂಣಿ ಯಲ್ಲಿರುವ ಶಿಕ್ಷಕರನ್ನು ಪ್ರತಿನಿಧಿಸುತ್ತದೆ. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ಸೆಪ್ಟೆಂಬರ್ 5, 1888 ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವಾಗಿದ್ದು, ಅವರ ಜನ್ಮದಿನದಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಶಿಕ್ಷಕರು ಸಮಾಜಕ್ಕೆ ನೀಡಿದ ಕೊಡುಗೆ ಗೌರವ ಸಲ್ಲಿಸಲಾಗುತ್ತದೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರ ವಿದ್ಯಾರ್ಥಿಗಳು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನರ ಜನ್ಮದಿನವಾದ ದಿನವಾಗಿ ಆಚರಿಸಲು ಅನುಮತಿ ಕೇಳುವುದಕ್ಕಾಗಿ ಅವರನ್ನು ಸಂಪರ್ಕಿಸಿದರು. ಈ ವೇಳೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಮಾಜಕ್ಕೆ ಶಿಕ್ಷಕರ ಅಮೂಲ್ಯವಾದ ಕೊಡುಗೆಯನ್ನು ಗುರುತಿಸಲು ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲು ಸೂಚಿಸಿದರು. ಅಂದಿನಿಂದ ಭಾರತದೆಲ್ಲೆಡೆ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಶಿಕ್ಷಕರು ಸಮಾಜದ ಆತ್ಮ. ಅವರಿಲ್ಲದೆ ಮಾನವಕುಲವು ಅಜ್ಞಾನದಲ್ಲಿ ಮುಳುಗುತ್ತದೆ. ಒಳ್ಳೆಯ ಶಿಕ್ಷಕರು ಒಬ್ಬ ವಿದ್ಯಾರ್ಥಿಯ ಬದುಕನ್ನೇ ಬದಲಾಯಿಸಬಲ್ಲರು. ಆದ್ದರಿಂದ ಶಿಕ್ಷಕರನ್ನು ಗೌರವಿಸುವುದು, ಅವರ ಮಾತುಗಳನ್ನು ಪಾಲಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಶಿಕ್ಷಕರ ವಿಶೇಷತೆ ಅವರ ಜ್ಞಾನದಲ್ಲಷ್ಟೇ ಅಲ್ಲ, ಅವರ ಹೃದಯದಲ್ಲಿರುವ ಕರುಣೆ ಮತ್ತು ಸಮಾಜದ ಮೇಲೆ ಇರುವ ನಿಷ್ಠೆಯಲ್ಲಿದೆ.
“ಗುರುವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಬದುಕಿಲ್ಲ” ಎಂಬ ಮಾತು ಸತ್ಯ. ಶಿಕ್ಷಕರಿಲ್ಲದೆ ಶಿಕ್ಷಣ ಸಾಧ್ಯವಿಲ್ಲ. ಅವರು ಸಮಾಜದಲ್ಲಿ ಬೆಳಕಿನ ಕಿರಣ ಹರಡುವವರು. ಇಂದಿನ ತಂತ್ರಜ್ಞಾನ ಕಾಲದಲ್ಲೂ ಶಿಕ್ಷಕರ ಪಾತ್ರ ಅಪ್ರತಿಮ. ಪುಸ್ತಕ, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳು ಜ್ಞಾನವನ್ನು ನೀಡಬಹುದು, ಆದರೆ ಜೀವಂತ ಪ್ರೇರಣೆಯನ್ನು ನೀಡುವುದು ಶಿಕ್ಷಕರಿಂದ ಮಾತ್ರ ಸಾಧ್ಯ.
ಜ್ಞಾನವಿಲ್ಲದ ಜೀವನ ಕತ್ತಲೆಯಂತೆ. ಜ್ಞಾನವನ್ನು ಬೆಳಗಿಸುವ ದೀಪವಾದವರು ಶಿಕ್ಷಕರು. “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ” ಎಂಬ ಮಾತಿನಂತೆ, ಶಿಕ್ಷಕರು ಸಮಾಜದಲ್ಲಿ ದೇವರಿಗೆ ಸಮಾನ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಜೀವನಕ್ಕೆ ದಿಕ್ಕು ತೋರಿಸುವವರು, ಸತ್ಸಂಗತಿಯನ್ನು ಕಲಿಸುವವರು, ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವವರು ಶಿಕ್ಷಕರು.
ಮಮತಾ ಜಾನೆ





Happy teachers day miss