ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

*ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ*

ಗುರುವಿನ ಬಲವಿರದ ಹೊರತು ಸಾಧಿಸಲು ಏನಿದೆ ಎನ್ನುವಂತೆ ಪ್ರತಿಯೊಬ್ಬರ ಭವಿಷ್ಯದಲ್ಲೂ ಕೂಡ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಗುರುವಿನ ಮಾರ್ಗದರ್ಶನ ಅತ್ಯವಶ್ಯ ಅಷ್ಟೇ ಅಲ್ಲದೆ ಬದುಕಿಗೆ ಉತ್ತಮ ದಾರಿ ಹಾಗೂ ಗುರಿಯನ್ನು ತಲುಪಲು ಗುರುವಿನ ಆಸರೆ ತುಂಬಾ ಮುಖ್ಯ.
ಮಹಾನ್ ವ್ಯಕ್ತಿಗಳು ದರ್ಶನಿಕರ ಕಥೆಗಳನ್ನು ಓದಿದಾಗ ಆಕಾರದಲ್ಲಿದ್ದ ಗುರು ಮಹತ್ವ ಮತ್ತು ಅವರ ಮಾರ್ಗದರ್ಶನದಿಂದ ತಯಾರಾದ ಯಶಸ್ಸಿನ ಕಥೆಗಳು ಅನೇಕ ಶ್ರೀರಾಮಚಂದ್ರನು ಮರೆಯಾದ ಪುರುಷೋತ್ತಮನೆಂದು ಕರೆಸಿಕೊಳ್ಳಲು ಆತನಿಗೆ ಜೀವನದಲ್ಲಿ ಮಾರ್ಗದರ್ಶನ ನೀಡಿದ ಗುರುಗಳೇ ಕಾರಣ ಶಿವಾಜಿ ಮಹಾರಾಜರು ಆತ್ಮಸ್ಥೈರ್ಯವನ್ನು ಕಳೆದುಕೊಂಡು ಕುಳಿತಿದ್ದಾಗ ಸಮರ್ಥ ರಾಮದಾಸ ಗುರುಗಳು ತುಂಬಿದ ಆತ್ಮವಿಶ್ವಾಸದಿಂದ ಮತ್ತೆ ಸಾಮ್ರಾಜ್ಯವನ್ನು ಪಡೆದಲ್ಲಿ ಯಶಸ್ವಿಯಾಗುತ್ತಾನೆ ಎನ್ನುವಂತಹ ಹಲವು ಉದಾಹರಣೆಗಳು ಇವೆ ಗುರು ಬೋಧನೆಯಿಂದಲೇ ಇಂದಿನ ಸಮಾಜಕ್ಕೆ ಸ್ಪೂರ್ತಿ ಚಿಲುಮೆಯಾಗಿರುವವರು ಯಾವುದೇ ನಾಯಕರ ಸಾಧನೆ ಹಾದಿ ಕೇಳಿದರೆ ಅವರ ಜೀವನದ ಗುರಿ ಗುರು ಹಾಕಿ ಕೊಟ್ಟ ಮಾರ್ಗದ ಮೇಲೆ ನಡೆಯುತ್ತದೆ ಎನ್ನುವ ವಿಚಾರ ತಿಳಿಯುತ್ತದೆ.

*ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ* ಎಂದು ದರ್ಶನಿಕರೊಬ್ಬರು ಗುರುವಿನ ಮಹತ್ವವನ್ನು ಬಣ್ಣಿಸಿದ್ದಾರೆ ಒಂದು ಮಗು ಶೈಶವಾವಸ್ತ್ತೆ ಕಳೆದು ಬಾಲ್ಯಕ್ಕೆ ಹೆಜ್ಜೆ ಇಟ್ಟಾಗ ಸಾಮಾಜಿಕ ಜೀವನದ ಪರಿಚಯವಾಗುತ್ತಾ ಹೋಗುತ್ತದೆ ಆ ಹಂತದಲ್ಲಿ ಜೀವನದ ಅರ್ಥ ಗುರಿ ಮೌಲ್ಯಗಳನ್ನು ತಿಳಿಸಲು ಗುರುವಿನ ಮಾರ್ಗದರ್ಶನವೇ ಭದ್ರಬುನಾದಿ ಆಗಿರುತ್ತದೆ.
ನಿಸ್ವಾರ್ಥ ಮನಸ್ಸಿನಿಂದ ಎಲ್ಲರನ್ನು ತಮ್ಮ ಮಕ್ಕಳಂತೆ ಪಾಲನೆ ಮಾಡಿ ನೀಡಿ ತತ್ವಗಳನ್ನು ಧಾರೆಯರೆಯುವ ಶಿಕ್ಷಕರು ನಮ್ಮ ಜೀವನದ ಮೌಲ್ಯ ರತ್ನಗಳುಅಜ್ಞಾನನ ಕತ್ತಲೆಯ ಕಳೆದು ಜ್ಞಾನವೆಂಬ ಬೆಳಕ ತೋರಲು ಗುರುವಿನ ಮಾರ್ಗದರ್ಶನ ಖಂಡಿತವಾಗಿಬೇಕು. ಹಾಗಾದರೆ *ಗು*  *ಎಂದರೆ* *ಕತ್ತಲೆ* ಮತ್ತು *ರು* ಎಂದರೆ ಅದನ್ನು *ನಿವಾರಿಸುವವನು* ಇದರ ಪ್ರಕಾರ ನಮ್ಮ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಲು ಆನಂದನಮಯ ಜೀವನ ನಡೆಸಲು ದಾರಿ ತೋರಿಸುವನೇ ಗುರು.

*ಶಿಕ್ಷಕನೆಂದರೆ ಶಿಸ್ತನ್ನು ಕಲಿಸುವುದರ ಮೂಲಕ ಮಕ್ಕಳ ತಪ್ಪುಗಳನ್ನು ಕ್ಷಮಿಸಿ ಕರುಣೆ ತೋರಿಸುವನೇ ಗುರು*

ಮತ್ತು ಶಿಷ್ಯರಲ್ಲಿ ಶಿಸ್ತಿನ ಮೌಲ್ಯಗಳು ಶಿಕ್ಷಕನ ಮಾರ್ಗದರ್ಶನ ಸದಾ ಜೊತೆಗಿದ್ದರೆ ಬಾಳು ಬೆಳಕಾಗುವುದು ಖಂಡಿತ.
ಬಾಲ್ಯದಲ್ಲಿ ನಮಗೆ ತಂದೆ ತಾಯಿಯರು ನಮಗೆ ಪ್ರತಿಯೊಂದು ವಿಷಯದಲ್ಲಿ ಕಲಿಸುತ್ತಾರೆ ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ ಇದರ ಅರಿವು ಮಾಡಿಸಿಕೊಡುತ್ತಾರೆ ಹಾಗೆಯೇ ಒಳ್ಳೆಯ ಅಭ್ಯಾಸವನ್ನು ಕಲಿಸುತ್ತಾರೆ.

ಉದಾಹರಣೆಗೆ ಹಿರಿಯರಿಗೆ ನಮಸ್ಕಾರ ಏಕೆ ಮತ್ತು ಹೇಗೆ ಮಾಡಬೇಕು ಮತ್ತು ಸಾಯಂಕಾಲ ಸಮಯದಲ್ಲಿ ದೀಪಾರಾಧನೆ ಮಾಡುವುದು ಮತ್ತು ಗೆಳೆಯರನ್ನು ಭೇಟಿಯಾದಾಗ ನಮಸ್ಕಾರ ಮಾಡುವುದು ಹಾಗೆ ಮನೆಯಲ್ಲಿ ನೆಂಟರು ಬಂದಾಗ ಅವರಿಗೆ ಗೌರವಿಸುವುದು, ಇಂತಹ ಹಲವಾರು ವಿಷಯಗಳ ಕುರಿತು ಬುದ್ಧಿಯನ್ನು ಹೇಳಿ ಒಂದು ಉತ್ತಮ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.

ಅದೇ ರೀತಿ ಶಿಕ್ಷಕರು ನಮಗೆ ಅನೇಕ ವಿಷಯಗಳ ಬಗ್ಗೆ ಜ್ಞಾನ ನೀಡುತ್ತಾರೆ ಅವರು ಇತಿಹಾಸ ಕಲಿಸುತ್ತಾರೆ ಅದರಿಂದ ಅವರು ನಮ್ಮಲ್ಲಿನ ರಾಷ್ಟ್ರ ಅಭಿಮಾನವನ್ನು ಜಾಗೃತ ಮಾಡುತ್ತಾರೆ ನಾವು ಬದುಕುವುದಕ್ಕಿಂತ ರಾಷ್ಟ್ರಕ್ಕಾಗಿ ಬದುಕಬೇಕು ಎಂಬ ವ್ಯಾಪಕ ವಿಚಾರ ನಮಗೆ ತಿಳಿಸಿ ಕೊಡುತ್ತಾರೆ ಹಾಗೂ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ಗಳಿಸಲು ಅದಕ್ಕೆ ಸೂಕ್ತವಾದಂತಹ ಮಾರ್ಗದರ್ಶನ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಇಂತಹ ಗುರುವಿನ ಮಹತ್ವವನ್ನು ತುಂಬಾ ಎಷ್ಟೋ ಉದಾಹರಣೆಗಳಿವೆ. ಉದಾಹರಣೆಗೆ ಅರ್ಜುನ ಮತ್ತು ದ್ರೋಣಾಚಾರ್ಯರು

ಮಹಾಭಾರತದಲ್ಲಿ ಅರ್ಜುನನ ಉತ್ತಮ ಬಿಲ್ಲು ವಿದ್ಯೆ ಪ್ರವೀಣನಾಗಲು ದ್ರೋಣಾಚಾರ್ಯರ ಗುರುತ್ವ ಕಾರಣವಾಯಿತುಒಮ್ಮೆ ಅರ್ಜುನನು ಬಿಲ್ಲು ವಿದ್ಯೆಯನ್ನು ಕಲಿಯಲು ಗುರುವಿನ ಮೂರ್ತಿಯನ್ನು ಸ್ಥಾಪಿಸಿ ತುಂಬಾ ಆಸಕ್ತಿಯಿಂದ ಬಿಲ್ಲು ವಿದ್ಯೆಯನ್ನು ಕಲಿಯುತ್ತಾನೆ ಆಗ ಆ ಒಂದು ಬಿಲ್ಲು ವಿದ್ಯೆಯಲ್ಲಿ ಯಶಸ್ಸು  ಕಾಣುತ್ತಾನೆ.

ಜೀವನದಲ್ಲಿ ಮಾನವೀಯ ಮೌಲ್ಯಗಳು ಅರಿಯಲು ತಪ್ಪು ಸರಿಗಳನ್ನು ತಿಳಿದು ಸ್ವಯಂ ತೀರ್ಮಾನ ತಿಳಿದುಕೊಳ್ಳಲು ಸಹಾಯಕರಾಗಿ ಬದುಕಿಗೆ ಅರ್ಥವನ್ನು ಹಾಗೂ ಜೀವನದಲ್ಲಿ ಗುರಿಯನ್ನು ಸಾಧಿಸಲು ಮಾರ್ಗದರ್ಶನ ನೀಡುವ ತಾನೇ ಗುರುವು.

ಉದಾಹರಣೆಗೆ ನಾನು ಬಾಲ್ಯದಲ್ಲಿದ್ದಾಗ ನನಗೆ ನನ್ನ ಗುರುಗಳು ನನ್ನನ್ನು ತಿದ್ದಿ ತಿಡಿ ಬದುಕಿಗೆ ಅರ್ಥವನ್ನು ನೀಡಿ ನಾನು ಒಬ್ಬ ಉತ್ತಮ ಶಿಕ್ಷಕಿಯಾಗಲು ಒಳ್ಳೆಯ ಮಾರ್ಗದರ್ಶನ ನೀಡಿದಂತಹ ವೀರಭದ್ರಪ್ಪ ಸರ್, ಮರಳು ಸಿದ್ದಯ್ಯಸರ್ ತಿಪ್ಪೇಸ್ವಾಮಿ ಸರ್ ಹಾಗೂ ಗೀತಾ ಮೇಡಂ ಮತ್ತು ಗಾಯತ್ರಿ ಮೇಡಂ ಗುರುಗಳನ್ನು ಇಂದು ಸ್ಮರಿಸುವಂತಹ ಸುದಿನವಾಗಿದೆ ಹಾಗೂ ಬದುಕಿನಲ್ಲಿ ಎಲ್ಲರನ್ನೂ ಅರ್ಥೈಸಿಕೊಂಡು ಹೋಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಲ್ಲಿ ಅವರ ಮಾರ್ಗದರ್ಶನವೇ ಇಂದು ಬದುಕಿಗೆ ಒಂದು ಅರ್ಥವನ್ನು ನೀಡಿವೆ.

ಎಂದಿಗೂ ಹೆತ್ತವರ ಋಣ ಮತ್ತು ಗುರುಗಳ ಋಣ ತೀರಿಸಲು ಸಾಧ್ಯವಾಗದು ಅಜ್ಞಾನ ಕಳೆದು ಸುಜ್ಞಾನ ಕಡೆಗೆ ದಾರಿ ತೋರಿದ ನಮ್ಮ ಬುದ್ಧಿ ಮಟ್ಟವನ್ನು ಹೆಚ್ಚಿಸಿದ ಸಮಸ್ತ ಗುರುಗಳಿಗೂ ನಾವು ಇಂದು ಕೃತಜ್ಞತೆಯನ್ನು ಸಲ್ಲಿಸುವ ವಿಶೇಷ ದಿನವಾಗಿದೆ. ಬಗೆ ಬಗೆಯ ಚಟುವಟಿಕೆಗಳೊಂದಿಗೆ ಕಲಿಸುವುದು ಮತ್ತು ಅವುಗಳನ್ನು ನಾವು ಅಳವಡಿಸಿಕೊಳ್ಳುವ ಪರಿ ಮತ್ತು ಉತ್ತಮವಾದ ಶ್ರೇಷ್ಠ ಗುಣಗಳನ್ನು ಬೆಳಸಲು ಇಂದು ಅವರ ಮಾರ್ಗದರ್ಶನವೇ ಕಾರಣವಾಗಿದೆ.

ಗುರು ಎಂದರೆ ಒಂದು ಅದ್ಭುತಶಕ್ತಿ ಬಾಳಿಗೆ ಬೆಳಕಾಗಿ ಗುರಿಯನ್ನು ತಲುಪಲು ಶ್ರಮಿಸಿ ಬಾಳನು ಹಸನ ಗೊಳಿಸಿದಾತ.

ಮಾನವನ ಸೃಷ್ಟಿಸುವುದು ದೇವರ ಧರ್ಮ ಆ ಮಾನವನ ಉತ್ತಮವಾಗಿ ಪರಿವರ್ತಿಸುವುದು ಗುರುವಿನ ಧರ್ಮ ಈ ಪರಿವರ್ತನೆ ಹಾದಿಗೆ ತೋರುವ ಗುರುಗಳಿಗೆ ನಾವೇಂದು ಋಣಿಯಾಗಿರುವುದು ಧರ್ಮ.

ಜ್ಞಾನದ ಮೂಲ ಗುರುಗಳು ಜ್ಞಾನವನ್ನು ಬುದ್ದಿವಂತಿಕೆಯನ್ನು ನೀಡುವುದರೊಂದಿಗೆ ಶಿಷ್ಯರಲ್ಲಿ ಮೌಲ್ಯಗಳನ್ನು ತುಂಬುತ್ತಾರೆ ಹಾಗೂ ಬಗೆ ಬಗೆಯ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಒಬ್ಬ ಪ್ರವೀಣರಾದ ಶಿಕ್ಷಕರ ಮಾರ್ಗದರ್ಶನವು ನಮಗೆ ಅತ್ಯವಶ್ಯ.

ನಮ್ಮ ಹಿಂದೂ ಧರ್ಮದಲ್ಲಿ ಗುರುಗಳಿಗೆ ಅತ್ಯುನ್ನತವಾದ ಸ್ಥಾನವನ್ನು ನೀಡಲಾಗಿದೆ ಏಕೆಂದರೆ ಗುರುವಿನ ಮತ್ತು ಶಿಷ್ಯನ ನಡುವಿನ ಸಂಬಂಧವು ತುಂಬಾ ಭಕ್ತಿ , ವಿಧೇಯತೆ ಹಾಗೂ ಅಮೂಲ್ಯವಾದದ್ದು.
ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದ ವರವಿಲ್ಲ ಮತ್ತು ಗುರುವಿಗಿಂತ ದೊಡ್ಡವರು ಮತ್ತೊಬ್ಬರಿಲ್ಲ. ಎಂಬಂತೆ
*ಮುಂದೆ ಗುರಿ ಹಿಂದೆ ಗುರು* ಇದ್ದರೆ ಗುರಿಯನ್ನು ಅತ್ಯಂತ ಸರಳವಾಗಿ ಗುರುವಿನ ಮಾರ್ಗದರ್ಶನದೊಂದಿಗೆ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

ನಮಗೆ ಬಾಲ್ಯದಲ್ಲಿ ಗುರುಗಳು  ಮನೆಗೆಲಸವನ್ನು ಕೊಟ್ಟಾಗ ನಾವು ಅಯ್ಯೋ ಎಷ್ಟು ಮನೆ ಗೆಲಸ ಕೊಡುತ್ತಾರೆ ಎನ್ನುವ ಬೇಜಾರಲ್ಲಿದ್ದಾಗ ಅವುಗಳ ತಪ್ಪುಗಳನ್ನು ತಿದ್ದಿ ತಿಡಿ ಉತ್ತಮ ಜ್ಞಾನವನ್ನು ಗ್ರಹಿಸಿಕೊಳ್ಳಲು ಸದಾ ನಮಗೆ ಜೊತೆಗಿದ್ದು ನಾವು ಕಲಿಯಲು ಸ್ಪೂರ್ತಿದಾಯಕವಾದ ಶಿಕ್ಷಕರನ್ನು ಸ್ಮರಿಸುವಂತಹ ದಿನವಾಗಿದೆ.
ಸಮಸ್ತ ಶಿಕ್ಷಕ ಬಾಂಧವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


About The Author

1 thought on “ಶಿಕ್ಷಕ ದಿನಾಚರಣೆಯ ವಿಶೇಷ ನಾಗರತ್ನ ಹೆಚ್”

Leave a Reply

You cannot copy content of this page

Scroll to Top