ಗಜಲ್ ಸಂಗಾತಿ
ಶಮಾ ಜಮಾದಾರ
ಗಜಲ್


ಮಗುವೇ ನಿನ್ನ ನಗುವು ನಗುವಿಗೆ ಕಾರಣ
ಜಗವೇ ನಿನ್ನ ಒಲವು ಜೀವಸೆಲೆಗೆ ಕಾರಣ
ಬಯಕೆ ಬತ್ತಿ ಜಂಗು ಹತ್ತಿ ನಿಂತನೀರು ಬದುಕು
ಚೆಲುವೇ ನಿನ್ನ ಕರೆಯು ಮರಳುವಿಕೆಗೆ ಕಾರಣ
ಎದೆಯ ಅಂಬಾರಿಯಲಿ ನಲಿವ ರಾಜಕುಮಾರಿ
ಸುಮವೇ ನಿನ್ನ ಗಂಧವು ಅರಳುವಿಕೆಗೆ ಕಾರಣ
ಜನುಮ ಸಾರ್ಥಕ ಆಟಪಾಠಗಳ ಜೊತೆಯಲಿ
ಕನಸೇ ನಿನ್ನ ಸನಿಹವು ಈ ಬಾಳುವಿಕೆಗೆ ಕಾರಣ
ನಿನ್ನ ಕರೆಯಲಿ ಮುರುಳಿ ಸುಧೆಯ ಸುರೆಯಿದೆ
ಕುಡಿಯೇ ನೀನೇ ಶಮೆಯ ಬೆಳಕಿಗೆ ಕಾರಣ
ಶಮಾ ಜಮಾದಾರ.




ನನ್ನ ಗಜಲ್ ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು