ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ
ಗಜಲ್


ಮನಸೆಲ್ಲಾ ಕಲ್ಲಾಗಿದೆ ನೀನೀಗ ಬಾರದೆ
ಕನಸೆಲ್ಲ ನೀರಾಗಿದೆ ನೀನೀಗ ಬಾರದೆ
ನೋವೆಲ್ಲ ಕಣ್ಣಂಚಲಿ ಉಳಿದಿದೆ ಏತಕೆ
ದೇಹವೆಲ್ಲಾ ಮಣ್ಣಾಗಿದೆ ನೀನೀಗ ಬಾರದೆ
ಪುಷ್ಪಗಳೆಲ್ಲ ನಗೆಯಾಡಿದೆ ನೀನೀಗ ಬಾರದೆ
ಮಾತೆಲ್ಲ ಮುದ್ದಾಗಿದೆ ನೀನೀಗ ಬಾರದೆ
ಬೆರಳೆಲ್ಲ ಸ್ವರ ನುಡಿಸಿದೆ ನೀನೀಗ ಬಾರದೆ
ಮೊಗವೆಲ್ಲ ಬೆಂಡಾಗಿದೆ ನೀನೀಗ ಬಾರದೆ
ಮುತ್ತೆಲ್ಲಾ ಜೋಡಿಸಿದೆ ನೀನೀಗ ಬಾರದೆ
ಉಸಿರೆಲ್ಲ ಮುತ್ತಾಗಿದೆ ನೀನೀಗ ಬಾರದೆ
ಮುತ್ತು ಬಳ್ಳಾ ಕಮತಪುರ



