ಕಾವ್ಯ ಸಂಗಾತಿ
“ಭಾವ ಸೆಳೆತಗಳ ಮೋಡಿ”
ಸುಧಾ ಪಾಟೀಲ


ಭಾವ ಸೆಳೆತಗಳ
ಮೋಡಿ
ನಿನಾದವಾಗಿ
ಹರಿಯುತ್ತ
ನಿನ್ನೆಡೆ ಬಂದಾಗ
ಸಾಕಾರಗೊಂಡವು
ಕನಸುಗಳ ಮಾಲೆ
ಮಳೆ ಹೊಯ್ದು
ಭೂಮಿ ತಣ್ಣಗಾದ
ಹಾಗೆ
ಹೂವು ಅರಳಿ
ದೇವಗೆ ಅರ್ಪಿತವಾದ
ಹಾಗೆ
ಮನದಿಂಗಿತದ ಮಾತು
ಹೊನಲಾಗಿ
ಹರಿದಾಗ
ಸಂತಸದಿ ಕುಣಿದಾಗ
ಆವರಿಸಿದ ದುಗುಡ
ಮಾಯವಾಗಿ
ಚಮತ್ಕಾರದ
ಓಕುಳಿ ರಂಗೇರಿದಾಗ
ಇನಿತು ನಿಂತು
ನೀ ಕೇಳಬಾರದೆ
ಹೇಗಿದ್ದೀ ಎಂದು
———————-
ಸುಧಾ ಪಾಟೀಲ




Sudha Patil madam excellent poem
Thanq