ಕಥಾ ಸಂಗಾತಿ
ಬೊನ್ಸಾಯ್ ಕಥೆಗಳು,
ನಿಂಗಮ್ಮ ಭಾವಿಕಟ್ಟಿ ಹುನಗುಂದ


ಉಡಾಫೆ
‘ನಿಧಾನ ಮಗಾ… ನಿಧಾನಕ್ಕೆ ಹೋಗೋ….’ ಬೈಕ್ ಮೇಲೆ ಮಗನ ಹಿಂದೆ ಕುಳಿತ ಅಪ್ಪನ ಕಾಳಜಿಯ ಎಚ್ಚರಿಕೆ ಮಾತುಗಳು ಮಗನನ್ನು ತಲುಪದೇ ಗಾಳಿಯಲ್ಲಿ ತೇಲಿದವು. ಕೆಲ ನಿಮಿಷಗಳಲ್ಲಿ ರಸ್ತೆತಡೆಗೆ ಜಂಪ್ ಆದ ಅಪ್ಪನ ಉಸಿರೂ ಗಾಳಿಯಲ್ಲಿ ತೇಲಿತು
ದೇವರಿದ್ದಾನೆ

ಇವತ್ತು ಭೇಟಿ ಆಗಲೇಬೇಕು ಅಂದಿದ್ದ. ಮನೆಯಲ್ಲಿ ಏನು ಹೇಳಿ ಬರುವುದು? ಅವಳಿಗೆ ಆತಂಕ. ಅಪ್ಪನಿಗೆ ಕ್ಲಾಸ್ ಇದೆ ಎಂದು ಹೇಳಬೇಕು, ಅಣ್ಣನಿಗೆ ಫ್ರೆಂಡ್ ಮನೆಗೆ ಅಂತ ಹೇಳಬೇಕು, ಅವನಿಗೆ ಏನಾದರೂ ಸ್ಮಾಲ್ ಗಿಫ್ಟ್ ತಗೊಂಡು ಹೋಗಬೇಕು ಅದಕ್ಕೆ ಅಮ್ಮನಿಗೇನೋ ಹೇಳಿ ದುಡ್ಡು ಸೆಂಕ್ಷನ್ ಮಾಡ್ಕೋಬೇಕು. ಅವನು ಭೇಟಿ ಆಗಬೇಕು ಅಂದ್ರೆ ಮುಗೀತು ಒಂದೇ ಹಟ.ಛೇ! ದೇವರೇ ನೀನೇ ಏನಾದರೂ ದಾರಿ ತೋರಿಸು ಪ್ಲೀಸ್! ಅವಳು ಒಳಗೇ ಪ್ರಾರ್ಥಿಸುತ್ತಿದ್ದಳು. ಮತ್ತೆ
ಅವನದೇ ಫೋನ್ … ‘ ಸಾರಿ ಕಣೇ ನನ್ನ ಫ್ರೆಂಡ್ ಆಸ್ಪತ್ರೆಲಿದ್ದಾನೆ ನಾನು ಹೋಗಬೇಕು ಮತ್ತೆ ಸಿಗೋಣ ಸೀ ಯು ‘ ಓಹ್ ಥ್ಯಾಂಕ್ ಗಾಡ್ ನಿಟ್ಟುಸಿರಿಟ್ಟು ಬೆಡ್ ಮೇಲೆ ಬಿದ್ದುಕೊಂಡಳು.
ನಿಂಗಮ್ಮ ಭಾವಿಕಟ್ಟಿ ಹುನಗುಂದ



