ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
“ಪ್ರೀತಿಯ ಮಡಿಲು”

ಹಬ್ಬದ ಕಬ್ಬದಲ್ಲಿ ಮಬ್ಬಾಗಿ ನಿಲ್ಲದಿರು
ಹುಬ್ಬಿದ ನಗುವನ್ನೇ ಬೀರು
ಭರವಸೆಯ ನಾಳೆಗೆ ಹೂವಿನಂತೆ ಅರಳುತ ಸ್ನೇಹದಲ್ಲಿ ಜೊತೆಯಾಗಿರು
ಹೊಳೆಯುವ ಬಾನಲ್ಲಿ ಹಾರುವ ಹಕ್ಕಿಯಂತೆ ನನ್ನೊಡಲ ಸಿರಿಯಾಗಿರು
ಪ್ರೀತಿಯ ಮಡಿಲಿಗೆ ಕನಸನ್ನು ಹೊತ್ತುಕೊಂಡುಹೃದಯಕ್ಕೆಸನಿಹವಾಗಿರು
ಕನಸನು ಕಾಣುವ ಮನಸ್ಸುಗಳು
ಒಂದೇ ಇರುವಂತೆ
ನನ್ನ ನಿನ್ನ ಮನಸು ಬೆಸೆಯಲಿ
ತೀರದ ನಡುಗೆಯಂತೆ
ನವಿಲುಗರಿಯ ಮನದಂತೆ ಕೂಡಿಟ್ಟ ನಂಬಿಕೆ ನಮ್ಮೊಳಗಿರಲಿ
ಆರಂಭದ ಪ್ರೇಮದಂತೆ ಅಂತ್ಯದವರೆಗೂ ಒಂದೇ ಆಗಿರಲಿ
ಮನ್ಸೂರ್ ಮುಲ್ಕಿ



