ಪಿ.ವೆಂಕಟಾಚಲಯ್ಯ

“ಮುದುಕನ ಮದುವೆ”
ಮುದುಕನ ಮದುವೆಯ ,
ನೋಡಲು ಹೋದೆನು,
ಹೆಂಡತಿ ಮಕ್ಕಳು, ಜೊತೆಯಲ್ಲೀ.
ಮುದ್ದಿನ ಮದುಮಗ,
ಅಂದದಿ ಬೆಳಗುತ,
ಕಂಡನು ಗುಡಿಯಲಿ ಬೀಗುತಲೀ
ಹಿರಿ ಹಿರಿ ಹಿಗ್ಗುತ,
ಮಿರಿ ಮಿರಿ ಮಿಂಚುತ,
ಗರಿ ಗರಿ ರೇಷ್ಮೆಯ ಸೀರೆಯಲೀ.
ಕರಿ ತ್ವಚೆ ಚೆಲುವೆ,
ಹಿರಿ ಸಂಭಾವಿತೆ,
ಅರವತ್ತರ ಮದುವಣಗಿತ್ತೀ.
ಎನಿತಾ ಸಡಗರ,
ಚಿನ್ನರ ನೆಂಟರ
ಬಿನ್ನಾಣಗಿತ್ತಿಯರೆಡೆಯಲೀ
ಏನದೊ ಅವಸರ,
ಇನ್ನೇನು ದುಗುಡ,
ಸಿನಿಕತನವು ಮದುವಣಿಗರಲೀ.
ಪುರೋಹಿತರೀಗ ,
ನಿರುಮ್ಮಳವಾಗಿ,
ಸರಸರ ಮಂತ್ರವ ಪಠಿಸುತಿರೇ,
ವರವಧುರೀರ್ವರು,
ನಿರುಮ್ಮಳವಾಗಿ,
ಚಿರಯೌವ್ವನದಲಿ ಬೀಗುತಿರೇ.
ಹಿರಿಯರು ಕಿರಿಯರು,
ಸೇರಿದರೆಲ್ಲರು,
ಧಾರೆಯೆರೆಯೆ, ವರಮಹಾಶಯಂ,
ಅರಗಿಣಿ ವಧುವಿನ,
ಕೊರಳಿಗೆ ಕಟ್ಟಿದ,
ಅರಸಿನ ಕೊಂಬಿನ ಮಾಂ
——————————————————————
ಪಿ.ವೆಂಕಟಾಚಲಯ್ಯ



