ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
“ಹರಡಿಹ ಖುಷಿ”

ಬೇರು ಮಣ್ಣಿನ
ಅವ್ಯಕ್ತ ಮಾತು
ಯಾರಿಗೂ ತಿಳಿಯದು
ಮಣ್ಣ ಸಾರ
ತುಂಬಿ ನಿಂತ
ಬದುಕ ಒಲವಿದು
ನೀರು ಹರಿವು
ಝರಿಯ ನೆರವು
ಕೂಡಿ ಹಾಡಿದ ಹಾಡಿದು
ಬಣ್ಣದ ಇಳೆಯ
ನಗುವಿಗೆ ಒಂದು
ದೊಡ್ಡ ಗುರುತಿದು
ಗಾಳಿಯ ಅನುಭವ
ಬೆಳಕ ಅನುಭಾವ
ಎಲ್ಲಾ ತುಂಬಿದ ಹರಿವಿದು
ನಗುವಿನ ಅಲೆಗೆ
ಸೇರಿದ ಬದುಕಿಗೆ
ಚಿತ್ತಾರವೇ ಚೆಂದ
ನಿಂದು ಹೋದ
ಮನವಿದು ಮುದಕೆ ಮಂದಹಾಸವ
ಬೀರುತಾ ಅಡಿಯಿಡಯೇ
ಸಾಕು ನೆಮ್ಮದಿಯ
ನೆಲೆಯಲ್ಲಿ ವಿಹರಿಸುವ
ಪಯಣಕೆ ಗುರುತಿರದ
ಹಲವು ಭಾವ
ಸುಮ್ಮನೆ ಉಳಿವುದು
ಕಂಗಳಲಿ ಜೀವಂತ
ನಾಗರಾಜ ಬಿ.ನಾಯ್ಕ




