ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಿನ್ನತ್ತಲೇ ನೋಡುತ್ತಿವೆ”

ನಿನ್ನನ್ನೇ ನೋಡುತ್ತಿವೆ
ನನ್ನಂಗಳದ ಹೂವು
ನಸು ನಗೆಯ ತೇಜ
ಸ್ನೇಹ ಪ್ರೀತಿಯ ಬೀಜ
ಅರಳಿ ನಿಂತಿವೆ ಮೊಗ್ಗು
ಒಲವ ಪ್ರೇಮ ಹೊತ್ತು
ಹಾರವಾಗುತ್ತವೆ ಹೂವು
ನಿನ್ನ ಗೆಲುವಿಗೆ ನಿತ್ಯ
ನೀನು ಪೋಣಿಸಿದ
ನಿನ್ನ ಭಾವ ಭಾಷೆ
ಮಧುರ ನೆನಪುಗಳ
ಚಿತ್ತಿ ಮಳೆ
ತಂಗಾಳಿಗೆ ಓಲಾಡುವ
ನಲಿವ ಹೂವು
ನಿನ್ನತ್ತಲೇ ನೋಡುತ್ತಿವೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ





ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ಸುಂದರ ಭಾವ ಪೂರ್ಣ
ಪರಿಶುದ್ಧವಾದ ಭಾವ ತೋರಣ
ನಿಷ್ಕಲ್ಮಶವಾದ ಭಾವ ಪರಿಮಳದ ಹಂದರದ ಸಾಲುಗಳು
ಮನಸಿನ ಪ್ರಾಂಜಲ ಶಬ್ದಗಳ ಮೋಡಿ
ಸುಂದರ ಪದಪುಂಜಗಳ ಸೊಗಸಾದ ಕವನ..
ಅತ್ಯಂತ ಅಪರೂಪದ ಪ್ರಬುದ್ಧ ಸುಂದರ ಕವನ
Excellent poem