ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ಪುಣೆ
ಯಾರು ಯಾರು?


ಯಾರು ಯಾರು ?
ಭಾರತದ ನೆಲದಲಿ
ಬೌದ್ಧ ಭಿಕ್ಷುಗಳನ್ನು
ಬರ್ಬರವಾಗಿ ಕೊಂದು
ಧರ್ಮವ ಓಡಿಸಿದವರು
ಯಾರು ಯಾರು ?
ಕಲ್ಯಾಣದ ಮಣ್ಣಿನಲಿ
ಶರಣರ ರುಂಡ ಚೆಂಡಾಡಿ
ವಚನಗಳ ಸುಟ್ಟು
ಲಿಂಗ ಜಂಗಮ ಹತ್ತಿಕ್ಕಿದವರು ?
ಯಾರು ಯಾರು ?
ಬುದ್ಧ ಬಸವನ
ಹತ್ಯೆ ಮಾಡಿ
ಸತ್ಯ ಸಮತೆ ಸಮಾಧಿ ಮಾಡಿ
ಜಾತಿಯ ಕಳಶವಿಟ್ಟವರು
ಯಾರು ಯಾರು
ದಾಬೋಲ್ಕರ ಪನ್ಸಾರೆ
ಕಲಬುರ್ಗಿ ಗೌರಿಯನು ಕೊಂದು
ಡೋಲು ವಾಲಗ ಊದಿ
ಕುಣಿದು ಕುಪ್ಪಳಿಸಿದವರು ?
ಕತ್ತಿ ಪಿಸ್ತೂಲು ಒಂದೇ
ಕೈಗಳು ಬೇರೆ ಬೇರೆ
ಹಿಂಸೆ ಕೊಲೆ ಅವರ ಧರ್ಮ
ಅವರು ಕೊಲ್ಲುವುದು
ವ್ಯಕ್ತಿಗಳನ್ನು ಸತ್ಯವನ್ನಲ್ಲ
———————————————————————————————-
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಅತ್ಯುತ್ತಮ ಕವನ
“ಮೋಸದಿಂದ ನೀವು ಕೋಲ್ಲೂವದು ವ್ಯಕ್ತಿಯನ್ನು, ವಿನಃ ಸತ್ಯಾವನ್ನಲ್ಲ” ಎಂಬುದನ್ನು ಅರ್ಥ ಪೂರ್ಣವಾಗಿ ತಮ್ಮ ಕವನದಲ್ಲಿ ಮುಕ್ತವಾಗಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಂಡಿದ್ದಾರೆ.
ಪ್ರತಿಭಟನೆಯನ್ನು ವ್ಯಕ್ತಪಡಿಸುವ ಕಾವ್ಯ ಚೆನ್ನಾಗಿ ಮೂಡಿ ಬಂದಿದೆ
ಅರ್ಥಪೂರ್ಣ ತಮ್ಮ ಕವನ ಸರ್
ಅಕ್ಕಮಹಾದೇವಿ