ಕಾವ್ಯ ಸಂಗಾತಿ
ಡಾ.ರೇಣುಕಾ ಹಾಗರಗುಂಡಗಿ
ʼಬದುಕುವೆನು ನಿನ್ನೊಡನೆʼ


ನಿನ್ನ ಹೃದಯದ ಗುಡಿಗೆ
ನಾ ಬರಲೆ ಹೇಳು ಸಖಿ
ಮಡಿಯಿಂದ ಮುಡಿಗೆ
ಮೂಡಿಸುವೇನು ಮಲ್ಲಿಗೆಯ
ನಿನ್ನ ಕಣ್ಣಿನ ನೋಟ
ಪ್ರೇಮದಾಟದ ಪಾಠ
ಮರೆಯಲ್ಹೇಗೆ ಸಖಿ
ಕಳೆದ ಸುಂದರ ಕ್ಷಣವು
ಪ್ರೇಮ ಭಿಕ್ಷೆಯ ನೀಡಿ
ರಕ್ಷಿಸಿಹೆ ಪ್ರಾಣವನು
ಬದುಕುವೇನು ನಿನ್ನೊಡನೆ
ನೂರು ಕಾಲ
ನೀಲಿ ಆಗಸದಲ್ಲಿ
ಹೂವಿನ ವಿಮಾನದಲಿ
ಸಾಗಲಿ ಈ ಪಯಣ
ನೂರು ಜನ್ಮದಿ ಹೀಗೆ
ಡಾ.ರೇಣುಕಾ ಹಾಗರಗುಂಡಗಿ



