ಕಾವ್ಯ ಸಂಗಾತಿ
ಡಾ. ಡೋ. ನಾ. ವೆಂಕಟೇಶ
ಸೌಂದರ್ಯ ಸಮಯ


ಹಲವು ಹತ್ತಾರು ನೆರಳು ಗೆರೆ ಚಿತ್ರಗಳ ಕಂಡ ಒಣಗು ವೃಕ್ಷ
ಹೊತ್ತು ನವಿಲುಗಳ ಲಾಸ್ಯಗಳ ರಂಗು
ಕೇಳಿತ್ತು
ರವಿಯೆಡೆಗೆ ಊರ್ಧ್ವ ಮುಖಮಾಡಿ
ಪೃಕೃತಿ
ನೀ ಪ್ರತಿ ಕ್ಷಣಕ್ಷಣವೂ
ಕಂಗೊಳಿಸಲೊಲ್ಲೆ ಯಾಕೆ ಹೀಗೆ
ಏಕೆ ಅನುದಿನವೂ ಕಣ್ಮನ ತಣಿಸಲೊಲ್ಲೆ ನಮಗಾಗೆ ಹೀಗೆ
ಉತ್ತರಿಸಿದಳಾ ತಾಯಿ ಪ್ರಕೃತಿ
ಹಸನ್ಮುಖಿಯಾಗೆ
ನಾ ಮತ್ತು ರವಿಯಷ್ಟೆ ಸತ್ಯ
ಹೇ ವೃಕ್ಷ ನೀ ಮತ್ತು ನಿನ್ನ ನವಿಲು ಮಿಥ್ಯ!
ಕರಾರುವಾಕ್ಕು ನನ್ನ ಮತ್ತು ಸೂರ್ಯನ ಸುತ್ತಾಡುವ ಕೃತ್ಯ
ನಾ ಸೌಂದರ್ಯ ಅಂವ ಸೂರ್ಯ ಅನನ್ಯ
ಮತ್ತೆ ನೀವೆಲ್ಲ ಅನ್ಯ!!
ಈ ಕ್ಷಣ ಮಾತ್ರ ನಿನ್ನದು
ನಾಳೆ ಮತ್ತೊಬ್ಬರದ್ದು ಹಾಗೂ
ಮಗದೊಬ್ಬರದ್ದು!!
ಡಾ. ಡೋ. ನಾ. ವೆಂಕಟೇಶ




Nice
Thank you Sona
A beautiful poem.
Thank you!