ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಚೆಂದದ ದೀರ್ಘಾಯುಷಿಗಳು”

ಶುದ್ಧ ದೇಸೀ ಮಹಿಳಾಮಣಿಗಳು ಅಪದ್ಧನಾಡದವರು
ಕುಶಲ ಕರ್ಮಿಗಳು
ಬಣ್ಣ ಬಣ್ಣದಾ ಬಟ್ಟೆಯೊಳಗೆ ಚಿಟ್ಟೆಯನೆ ಹಾರಿಸಿದವರು
ನೆಲಕ್ಕೆ ಜಮಖಾನ, ಬಾಗಿಲಿಗೆ ಸೋಪಾನ
ಮಕ್ಕಳಿಗೆ ಫ್ರಾಕು ಇವಳಿಗೆ ಬರೆ ಚಮುಕು ಹಾಕಿದವರು
ರಂಗು ರಂಗಿನಾ ಪೋಷಾಕು ಹಾಕಿ ಇವರೆಲ್ಲರ ಆಸ್ಥೆಯಾದವಳು
ಬಂದಳಿನ್ನೊಬ್ಬ ತಾಯಿ
ಆಮದಾದ ವಿದೇಶಿ ಜೀವಿ
ಎಳೆದೆಳೆದು ನಮ್ಮ ಸ್ವದೇಶೀಯ ಕೈಯ್ಯಿ
ಅಳೆಯಲೆತ್ನಿಸಿಹಳು ಇವಳ ರಕ್ತದೊತ್ತಡ.
ನಮಗಿಲ್ಲ ಢವಡವ
ಸಾಧ್ಯವೇ ಇಲ್ಲವಲ್ಲ ಈಕೆಗೆ,
ಈಕೆಯ ಹಸನ್ಮುಖಕ್ಕೆ ಮತ್ತು ಈಕೆಯ ಸಂತೃಪ್ತ ಜೀವಕ್ಕೆ
ಒತ್ತಡರಹಿತ ಉಲ್ಲಾಸಕ್ಕೆ
ರಕ್ತದೊತ್ತಡವಿಲ್ಲದ ಸಂಭ್ರಮಕ್ಕೆ
ಕಷ್ಟ ಜೀವಿಗಳಿವರು
ಸಂತಸ ಜೀವಿಗಳಿವರು
ನಮ್ಮ ಕಣ್ಮನಗಳಿಗೆ ಹರ್ಷ
ನೀಡುವರು
ಸದಾ ಸುಖಿಗಳು
ದೀರ್ಘಾಯುಷಿಗಳು!!
ಡಾ ಡೋ ನಾ ವೆಂಕಟೇಶ





Very nice