ಕಾವ್ಯ ಸಂಗಾತಿ
ಗೀತಾ ಆರ್
ಪ್ರಾಣಸಖಿ


ಪ್ರೀತಿಗೆ ನೀ ಹೃದಯದರಸಿ
ಮನದೊಡತಿ …
ಮನದಾಳದ ಮಾತುಗಳ
ನಾ ಅರಿಯನೇ…
ಮರೆಯದಿರೇ ನಮ್ಮಿಬ್ಬರ
ಮನೋಭಾವನೆ…
ಮನಸಲಿ ಕೆಣಕುತಿದೆ ನನ್ನ
ಮನೋಕಾಮನೆ…
ನೆನಪುಗಳು ಕಾಡತೊಡಗಿದೆ
ಮನೋವೇದನೆ…
ಮನದೊಳಗೆ ಮೌನವಾಗಿದೆ
ಮೂಕವೇದನೆ…
ಅಳಿಸದೆನ್ನ ಕನಸುಗಳ
ನನಸಾಗಿಸೆ ಮನದನ್ನೆ…
ಕತ್ತಾಲಾಯಿತು ಚಂದ್ರಮುಖಿ
ಬಾರೆನ್ನ ಪ್ರಾಣಸಖಿ…
ಗೀತಾ ಆರ್.




ಅಕ್ಷರಗಳು ಮುತ್ತಾಗುತ್ತವೆ ಕಣ್ಣ ಕುಣಿಕೆಯಲ್ಲಿ ನಭೋಮಂಡಲದ ತಾರೆಗಳು ಮಿನುಗಿದಂತೆ ಮಿನುಗುತ್ತವೆ ಬರೆದ ನಿಮ್ಮ ಹೃದಯದಲ್ಲಿ….!!
ಅಪರಿಚಿತರಾಗಿ ಸಿಕ್ಕು ಆತ್ಮೀಯರಾಗಿ ಹೋಗೋದೇ ಸ್ನೇಹ /ಪ್ರೀತಿ
Ok