ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್

ಎಲುಬಿಲ್ಲದ ನಾಲಿಗೆಗೀಗ ಹಲುಬುವುದೇ ಕಾಯಕ
ಲಗಾಮಿಲ್ಲದ ಕುದುರೆಗೀಗ ಕೆನೆಯುವುದೇ ಕಾಯಕ
ತೀರ-ತೀರದ ಮಧ್ಯ ಸಂಬಂಧವೇ ತೀರಿ ಹೋಗಿದೆ
ದಿಕ್ಕೆಟ್ಟು ನಿಂತ ಹಡಗೀಗ ಹುಡುಕುವುದೇ ಕಾಯಕ
ಕೈ ಮೀ(ಜಾ)ರಿದ ಘಳಿಗೆಗೆಷ್ಟು ಶಪಿಸಿದರೂ ವ್ಯರ್ಥ
ಗಡಿಯಾರದ ಮುಳ್ಳಿಗೀಗ ಚಲಿಸುವುದೇ ಕಾಯಕ
ಬರೀ ಕನಸುಗಳನ್ನೇ ಕಂಡಿಹ ನಿದಿರೆಗಿಲ್ಲ ನೆಮ್ಮದಿ
ಜಾಗರಣೆಯ ಜಾತ್ರೆಗೀಗ ಹೊರಡುವುದೇ ಕಾಯಕ
ಕುಂಬಾರನ ಎದೆಯ ನೆಲದಿ ಹಸಿರು ಹಬ್ಬಿ ನಗಲಿದೆ
ಒಲಿದಿಹ ಕೋಗಿಲೆಗೀಗ ಉಲಿಯುವುದೇ ಕಾಯಕ
ಎಮ್ಮಾರ್ಕೆ




