ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ಅವನಿಲ್ಲದೆ ಉಸಿರು ಕಟ್ಟುತ್ತಿದೆ


ಇಲ್ಲಿ ಯಾರನು ನಂಬಿ ಮೋಸ ಹೋಗದಿರು
ನಿನ್ನ ನಂಬಿಕೆಯ ನೆರಳಿನಲಿ ಜೀವಿಸುತ್ತಿರು!
ಕಾಲ ಗಡಿಯಾರದ ಜೊತೆ ಹೆಜ್ಜೆ ಹಾಕುತಿರು
ಇಟ್ಟ ಹೆಜ್ಜೆಯ ಗುರುತನೆಂದು ಮರೆಯದಿರು!!
ನನ್ನನು ನಾನು ಮರೆಯುವಷ್ಟು ಪ್ರೀತಿ ಮಾಡಿದನು
ಆ ಪ್ರೀತಿಗೆ ಇಂದು ರೂಪ ಕೊಡದೆ ಹೋದನು!
ಅವನಿಲ್ಲದೆ ಉಸಿರು ಕಟ್ಟುತ್ತಿದೆ ಪ್ರತಿ ಕ್ಷಣವೂ
ಅಯ್ಯೋ ಭಗವಂತ ಹೆಣ್ಣಾಗಿ ಹುಟ್ಟಿದ್ದೆ ಪಾಪವೂ!!
ಮಣ್ಣಾಗುವ ದೇಹವನ್ನಲ್ಲ ನೀ ಮುಟ್ಟುವುದು
ಅಂತರಂಗದ ಒಳ ಮನಸನ್ನು ತಟ್ಟುವುದು!
ಅನಾಥವಾಗಿದೆ ಈ ಹೃದಯದ ಭಾವನೆಗಳಿಂದು
ಅರ್ಥಮಾಡಿಕೊಳ್ಳೋ ಸ್ವಚ್ಛ ಹೆಂಗರುಳು ಇಲ್ಲದಿರುವುದು!!
ಸಾವು ಬಂದರೆ ನಗು ನಗುತ್ತಲೇ ಸ್ವೀಕರಿಸುವೆ
ಅವನಿಲ್ಲದೇ ಎಷ್ಟೋ ದಿನ ನೋವಲ್ಲೆ ಬೆಂದಿರುವೆ!
ಹೆಣ್ಣೆಂಬ ಹೂವು ಅರಳಿದರೆ ನೋಡಲು ಚೆಂದವು
ಬಾಡಿ ಹೋದರೆ ಕಾಲು ಕಸ ಬೇಡಪ್ಪ ಹೆಣ್ಣಿನ ಜನ್ಮವು!!
ಕೆ.ಎಂ. ಕಾವ್ಯ ಪ್ರಸಾದ್




Very nice